b

ಪರಂಪರೆ

ಪರಮಾವತಾರಿ ಶ್ರೀ ಜಗದ್ಗುರು ಏಕಾಕ್ಷರ ಏಕವ-ರೇಣುಕ ರೇವಣಸಿದ್ದಾಚಾರ್ಯರ ಕ್ರಿಯಾಚೈತನ್ಯಯುಕ್ತ ಸಾಧನಾ ವಲ್ಲರಿ

ಶಿವನಪ್ಪಣೆಯ ಮೇರೆಗೆ ಮೇರುಪರ್ವತವಾಗಿ ವೈಭವಯುತವಾಗಿ ಯುಗಯುಗಗಳಲ್ಲಿ ಅವತಾರವೆತ್ತಿದ ಶ್ರೀ ರಂಭಾಪುರಿ ಪೀಠದ ಪರಮಾಚಾರ್ಯರು ಅಖಂಡತೆಯಲ್ಲಿ ಅನಂತ ಲೀಲೆಗಳನ್ನು ಮಾಡಿ, ಪುರಾತನತೆಯನ್ನು ಪಕ್ವಗೊಳಿಸಿದ ಗಟ್ಟಿಗರು. ಇಂತಹ ಮಹಾಮಹಿಮರ ಪರಂಪರೆಯು ಪ್ರಾಚೀನ ಸಾಹಿತ್ಯ ಗ್ರಂಥಗಳಾದ ವೇದ, ಆಗಮ, ಉಪನಿಷತ್, ರಾಮಾಯಣ, ಮಹಾಭಾರತ, ಪುರಾಣ, ಜನಪದರ ಪದ್ಯಗಳಲ್ಲಲ್ಲದೇ, ರಾಜಾದಿರಾಜರುಗಳಿಂದ ಪೂಜ್ಯನೀಯರಾಗಿ ಅವರುಗಳಿಂದ ಅರ್ಪಿಸಲಾದ ತಾಮ್ರಪಟಗಳಲ್ಲಿಯೂ, ಶಿಲಾಶಾಸನಗಳಲ್ಲಿಯೂ, ಭಿನ್ನಹಪತ್ರಗಳಲ್ಲಿಯೂ ಕಂಗೊಳಿಸುತ್ತಿವೆ. ಅವರ ಲೀಲಾಕ್ರಾಂತಿ ಸಣ್ಣದಲ್ಲಿ 108 ಕ್ರಿಯಾಕ್ರಾಂತಿಗಳನ್ನು ಗೈದ ಮಹಿಮಾಶೀಲರ ಕೃತಿ-ಮತಿ-ಗತಿ-ರೀತಿ-ನೀತಿಗಳು ಸದಾ ಎರಕ ಹೊಯ್ದಂತೆ ಗುಣತ್ವದ ಸಾಧನೀಯ ಸರಣಿಯನ್ನು ಸ್ಮರಿಸುವಂತಾಗಿಸಿದೆ. ರೇಣುಕ, ರೇವಣಸಿದ್ಧ, ರೇವಣಾರಾಧ್ಯರ ಕಾಲಮಾನಗಳಲ್ಲಿ ಅಜಗಜಾಂತರ ಅಂತರವಿದ್ದು, ವೀರಶೈವದ ಆಂತರ್ಯವನ್ನು ಅಚ್ಚೆತ್ತುವಲ್ಲಿ ಶ್ರೀ ಪೀಠವು ಮಾಡಿದ ಗುರುತರ ಕಾರ್ಯ ಶ್ಲಾಘನೀಯವಾಗಿದೆ. ಈ ಚೇತನಾಶೀಲ ಪಥಗಾಮಿಯ ಪಟ್ಟವಲ್ಲರಿಯ ಪರಮಾಚಾರ್ಯರ ಮಾಡಿದ ಅದ್ಭುತ ಕ್ರಿಯಾಕೈಂಕರ್ಯದ ಚೈತನ್ಯವನ್ನು ನಾವಿಲ್ಲಿ ಅವಗಾಹಿಸಬಹುದು.

ಕೃತಯುಗ

ವಿಶ್ವದುತ್ಪತ್ತಿಯ ಆರಂಭ ಕಾಲಘಟ್ಟವೇ ಕೃತಯುಗ, ಸುಜ್ಞಾನ-ಸುವಿಚಾರಗಳನ್ನು ಸುರಾಸುರರಿಗೆ ಗುರುಗಳಾದ ಪಂಚಪೀಠಗಳ ಮಹಾಚಾರ್ಯರು ಅನುಗ್ರಹಿಸಿ, ವಿಶ್ವವಿಕಾಸ ತತ್ತ್ವವನ್ನು ಅರುಹಿದ ಸಂದರ್ಭ, ಸಕಲ ಸುಕಾರ್ಯಗಳಿಗೂ ಸಜ್ಜಿಕೆಯನ್ನಿತ್ತು ಸೌಕರ್ಯವನ್ನು ಹೊಂದಲಾರಂಭಿಸಿದ ಪರ್ವಯುಗ, ಈ ಪರಿವರ್ತನಾ ಪಲ್ಲಟದಲ್ಲಿ ಶ್ರೀ ರಂಭಾಪುರಿ ಪೀಠದ ಪ್ರಥಮ ಆಚಾರ್ಯರಾದ ಶ್ರೀ ಜಗದ್ಗುರು ಏಕಾಕ್ಷರ ಶಿವಾಚಾರ್ಯ ಭಗವತ್ಪಾದರ ಹೆಸರು ಉಲ್ಲೇಖಗೊಂಡಿದೆ. ಯುಗಮಾನದವರೆಗೂ ಬದುಕಿದ್ದು, ಧರ್ಮದ ನೀತಿ-ನಡಾವಳಿಗಳನ್ನು ಬಿತ್ತರಿಸಿದ ಶ್ರೇಷ್ಠ ಜಗದಾಚಾರ್ಯರಿವರು. ಬ್ರಹ್ಮಾದಿ ದೇವಗಣರಿಗೆ ನೀಲಮಯ ಲಿಂಗಗಳನ್ನಿತ್ತು ಮಹಾಪಂಚಾಕ್ಷರಿ ಮಂತ್ರವನ್ನುಪದೇಶಿಸಿ ಶಿವತತ್ತ್ವ, ಶಿವಮಹಿಮೆಯನ್ನು ತಿಳಿಸಿದ ವಿಷಯವು ಅನೇಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವುದು ಗಮನಾರ್ಹವಾಗಿದೆ.

ತ್ರೇತಾಯುಗ

ವಿಶ್ವಪಲ್ಲಟದ ಯುಗವಾದ ತ್ರೇತಾಯುಗವು ವೀರಶೈವ ಪರಂಪರೆಯ ಹಿರಿನೆರಳಿನಲ್ಲಿ ಮುನ್ನಡೆದು ಶ್ರೀ ರಂಭಾಪುರಿ ಪೀಠದ ಶ್ರೀ ಜಗದ್ಗುರು ಏಕವಕ್ತ ಶಿವಾಚಾರ್ಯ ಭಗವತ್ಪಾದರ ಅಭಯದಲ್ಲಿ ಸ್ವಾರಸ್ಯಮಯತೆಯನ್ನು ಸಾದರಪಡಿಸಿದ್ದು ವಿಶೇಷವೆನಿಸುತ್ತದೆ. ಅನಾದಿವಿಡಿದು ಸಕಲ ಗಣಂಗಳೆಲ್ಲರೂ ವಿಶ್ವಮಾನ್ಯವಾದ ವೀರಶೈವದ ಪ್ರತಿನಿಧಿಯಂತಿರುವ ಲಿಂಗೋಪಾಸನೆಯಲ್ಲಿ ಮುಳುಗಿತ್ತೆಂದು ಹೇಳಲು ಹೆಮ್ಮೆ ಎನಿಸುತ್ತದೆ. ಕೌಶಿಕ, ಕಶ್ಯಪ, ವಶಿಷ್ಠ ಮೊದಲಾದ ಮುನಿಕುಲೋತ್ತಮರಿಗೆ ರತ್ನಮಯ ಲಿಂಗವನ್ನಿತ್ತು ಮಂತ್ರೋಪದೇಶ ಮಾಡಿದ ಜಗದ್ಗುರುಗಳವರ ಕಾರ್ಯ ಇಂದಿಗೂ ಸ್ಮರಣೀಯವಾಗಿದೆ.

ದ್ವಾಪಯುಗ

 ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಪರಶಿವನ ಸದ್ಯೋಜಾತ ಮುಖದಿಂದ ಪಾಲ್ಗುಣ ಶುದ್ಧ ತ್ರಯೋದಶಿಯಂದು ಆಂಧ್ರಪ್ರದೇಶದ ಕೊಲ್ಲಿಪಾಕಿಯ ಸ್ವಯಂಭೂ ಶ್ರೀ ಸೋಮೇಶ್ವರ ಲಿಂಗದಿಂದ ಪ್ರಾದುರ್ಭವಿಸಿದ ಯುಗವಿದು, ಬದಲಾವಣೆಯ ಬೆಳಕಾಗಿ, ನೊಂದ ಜೀವರ ಜೀವನಾಧಾರವಾಗಿ ಸಕಲ ಸಂಪದವೀಯುವ ಸಂಪತ್ತಿನಾಗರವಾಗಿ, ವೀರಶೈವದ ಮೂಲೋತ್ಪತ್ತಿ ಶಕ್ತಿಯಾಗಿ ಗೋಚರಿಸಿದ ಶ್ರೀ ರೇಣುಕ ಭಗವತ್ಪಾದರು ಈ ಯುಗ ಕಂಡ ಅತ್ಯಂತ ಶ್ರೇಷ್ಠ ಘನಗುಣಗಣ್ಯಮಾನ್ಯ ಪರಮಾಚಾರ್ಯರು. ಅವರ ನಡೆ, ನುಡಿಗಳೆಲ್ಲವೂ ವೀರಶೈವರಿಗೆ ಆಮ್ಲಜನಕ. ಆನ ಜೀವನೋದ್ದೀಪನ ಕಾರ್ಯವೆಸಗಿದ ಆದಿ ಆಚಾರ್ಯರ ಮರೆಯಬಾರದು. ಕ್ರಾಂತಿಕಾರಕ ಪುರಾತನ ಮೌಲ್ಯಗಳೇ ಇಂದಿಗೂ ಪ್ರಸ್ತುತಗೊಂಡು ಅನೇಕರಿಗೆ ಅಡಿಗಲ್ಲಾಗಿದ್ದನ್ನು

ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರ ನಿಲುವು ಹಲವು ಮುಖವುಳ್ಳದ್ದು, ಮಾನವರ ಕಲ್ಯಾಣವನ್ನೇ ದಿಕ್ಕೂಚಿಯನ್ನಾಗಿರಿಸಿಕೊಂಡು ಮಾನವ ವಿಕಾಸಕ್ಕೆ ಬೇಕಾದ ಎಲ್ಲ ಮಾನವೀಯ ಪ್ರಣಾಳಿಕೆಗಳನ್ನು ಸಿದ್ಧಗೊಳಿಸಿದ್ದು ಅವರ ಮಹತ್ ಸಾಧನೆಗೆ ಹಿಡಿದ ಕನ್ನಡಿ, ಅವರ ಆ ಜಗದ್ಗುರುತ್ವ ಜಗದಾರತ್ವ ಅನ್ವರ್ಥಕವಾದದ್ದು. ಅವರೊಳಗಿನ ಆಲೋಚನೆ. ಸಮತಾಭಾವ, ದಾಸೋಹವಂತಿಕೆ, ಜ್ಞಾನ-ಸಾಹಿತ್ಯ ಪ್ರಸಾರ, ಸಂಘಟನಾತ್ಮಕ ಕ್ರಿಯಾಶೀಲತೆಗಳೆಲ್ಲವೂ ನಿರೂಪಣೆಯ ಸಾಕಾರತೆಗೆ ಸತ್ಯಸಾಕ್ಷಿ. ಸಕಲರಿಗೂ ಕಾರುಣ್ಯರಸದರ್ಶಿಗಳಾಗಿದ್ದುಕೊಂಡೇ ಕ್ರಿಯಾನ್ವಿತ ಕಾರ್ಯಶೀಲರನ್ನಾಗಿಸಿದ ವೀರಶೈವಾಚಾರ ಸಂಪನ್ನರು, ಶೀಲಕ್ಕೆ, ಧರ್ಮಕ್ಕೆ, ಕ್ರಿಯೆಗೆ, ಪ್ರಸಾದಕ್ಕೆ, ಕರ್ತೃತ್ವಕ್ಕೆ ಪ್ರಥಮ ಪ್ರಾಸಸ್ಥ್ಯವನ್ನಿರಿಸಿ, ಸಮೃದ್ಧತೆಯ ಬದುಕಿಗಾಗಿ ಸಮಚಿತ್ತದಿಂದ ಶ್ರಮಿಸಿದ ಮಹಾನ್ ಚೇತನರು, ಅಕಲಂಕ ನಿಕೇತನರು, ದಿಗ್‌ದಿಗಂತದ ದೀವಿಗೆಯಾದವರು, ಸಮಗಶಿಲ್ಪಿಗಳಾಗಿ ಸಮೂಹಕ್ಕೆ ಚಿತ್ತದರ್ಶಕವಾದವರು.

ಸದಾವಕಾಲವೂ ಹಸನ್ಮುಖಿಗಳಾಗಿ ಹರಸ್ಮರಣೆಯಲ್ಲಿಯೇ ವಿದ್ವತ್ ಸಂಪನ್ನರಾಗಿ, ಪಂಚಭೂತಗಳ ಅಧಿಶಕ್ತಿಯಾಗಿ ಸತ್ವಗುಣ ಸಾತ್ವಿಕರಾಗಿ, ಇಂದ್ರಿಯಗಳನ್ನು ಗೆದ್ದ ಯತಿವರೇಣ್ಯರಾಗಿ ಕೆಂಜೆಡೆ, ಶಿಖೆ, ಪ್ರಾಣಲಿಂಗ ಪ್ರತಿಷ್ಠಿತರಾಗಿ, ನಿತ್ಯ ಸಂಚರಿಪ ದೇಶಿಕೇಂದ್ರರಾಗಿ, ಶಿವಾದೈತ ಸಿದ್ಧಾಂತ ನಿರ್ಮಾರ್ತೃತ್ವದ ಪ್ರತಿಪಾದಕರಾಗಿ, ಯಮ-ನಿಯಮ-ಆಸನ ಪ್ರಾಣಾಯಾಮ ಪ್ರತ್ಯಾಹಾರ-ಧ್ಯಾನ-ಧಾರಣ-ಸಮಾಧಿಗಳ ಸಿದ್ಧಿವಂತರಾಗಿ, ಅಷ್ಟಾಂಗಯೋಗರಾಜರೆಂದು ಪ್ರಸಿದ್ಧರಾಗಿ, ದೇವ-ದಾನವರಿಗೆಲ್ಲ ಗುರುವರ್ಯರಾಗಿ ಪೂಜಿತರಾದವರಾಗಿ ವೀರಶೈವಾಚರಣೆಗಳ ಕ್ರಮಸಾಲ ಬಿತ್ತುವ ಕೃಷಿಕರಾಗಿದ್ದ ಶ್ರೀ ರೇಣುಕ ಶಿವಾಚಾರ್ಯರು ಎಲ್ಲದಕ್ಕೂ, ಎಲ್ಲರಿಗೂ, ಎಂದೆಂದಿಗೂ ಧಾರಕತ್ವದಧಿನಾಯಕರಾಗಿದ್ದರು.

ವೀರಾಗಮದ ವೀರಮಾಹೇಶ್ವರ ತಂತ್ರದ ಪ್ರಥಮ ಪಟಲದಲ್ಲಿ ಉಕ್ತವಾದಂತೆ ಪಾಶ್ವತಿಯು ಶಿವನಲ್ಲಿ ಶ್ರೀ ಜಗದ್ಗುರು ರೇಣುಕರ ಕುರಿತಾಗಿ ಕೇಳಿದಾಗ್ಗೆ ಶಿವನು –

“ಪುರಾ ಕೃತಯುಗೇ ಗೌರಿ ರೇಣುಕೋ ಮುನಿಪುಂಗವಃ

ಸಾಗಮ ಸಮೋಪೇತಃ ಸತ್ವಶಾಸ್ತ್ರ ಸಮನ್ವಿತಃ

ಕಲಾಭಿಜ್ಯೋ ಮಂತ್ರವೇತ್ತಾ ಮಂತ್ರಲಕ್ಷಣ ಲಕ್ಷಿತಃ

ದೇಶಿಕೇಂದ್ರಃ ಸತ್ವನಿಧಿಃ ಷಟ್‌ಸ್ಥಲಬ್ರಹ್ಮ ಪೂಜಿತಃ

ತೃಣೀಕೃತ ಬ್ರಹ್ಮವಿಷ್ಣುದ್ದಾನವೇಂದ್ರ ಪ್ರಪೂಜಿತಃ

ಭಕ್ತಮಾಹೇಶ್ವರಾಣಾಂ ಸದಾಚಾರಯ ಸ್ಮದೀಯಕಂ ತತ್ಸತ್ವಂ ಸಾಧಕೋಪಾಯಮಾಗಮಾಚಾರ ಚಾರಿತಂ ಅಹಂ ಬ್ರಮೀಮಿ ತೇ ಕಾಂತೇ ಶ್ರುಣು ಮದ್ಭಕ್ತಿ ಭಕ್ತಿತಃ |

ಕಥಯಾಮಾಸ ಮತ್ಯಾಬ್ರಹಾನಂದರಸಾನ್ವಿತಃ |

ಪುರಾತನ ಕೃತಯುಗದಲ್ಲಿ ಮುನಿಜನಗಣ್ಯಮಾನ್ಯರಾದ

ರೇಣುಕರಿದ್ದರು. ಅವರು ಕಾಮಿಕಾದಿ ವಾತುಲಾಂತ ಶೈವ ಮತ್ತು ರೌದ್ರ ತಂತ್ರಗಳಲ್ಲಿ ಮತ್ತು ವಿಜಯ ಭೈರವಿ ಮುಖ್ಯದೇವಿ ಕಾಲೋತ್ತರಾಂತವಾದ ದುರ್ಗಾತಂತ್ರಗಳಲ್ಲಿ ಹಾಗೂ ವೀರಭದ್ರೀಯಾದಿ ಕೌಮಾರಾಂತವಾದ ಕುಮಾರ ತಂತ್ರಗಳಲ್ಲಿ, ದೇವೋದ್ಭವಾದಿ ವಾಮಕೇಶ್ವರಾಂತವಾದ ಶಿಷ್ಯತಂತ್ರಗಳಲ್ಲಿ, ಘಂಟಾಕರ್ಣಿಯಾದಿ ರೇಣುಕಾಂತವಾದ ಗುರುತಂತ್ರಗಳಲ್ಲಿ ಮತಿವಂತರೂ, ಶಬ್ದ-ತರ್ಕ-ವೇಂದಾಂತ-ಮೀಮಾಂಸ-ಸಾಂಖ್ಯಯೋಗ ದರ್ಶನಗಳಲ್ಲಿ ಪ್ರೌಢರೂ, ಘನಲಿಂಗ-ಅತಿಥಿ ವಿರಕ್ತ-ಆರಾಧ್ಯರೆಂಬ ನಾಲ್ಕೂ ಬಗೆಯ ಚರಂತಿಗಳಿಗೊಡೆಯರೂ ಸತ್ವ ಸಂಪತ್ತಿಯುಳ್ಳವರೂ ಅಂದರೆ ಭೂ, ವಾರಿ, ವಹಿ ಮರುತ್, ಆಕಾಶ, ಗಂಧ, ರಸ, ರೂಪ, ಸ್ಪರ್ಶ, ಶಬ್ದ, ಗುಹ್ಯ, ಪಾಯು, ಪಾದ, ಪಾಣಿ, ವಾಕ್, ಫ್ರಾಣ, ಜಿಹ್ವ, ನೇತ್ರತ್ವಕ್, ಶೋತ್ರ, ಮಾನಸ, ಅಹಂಕಾರ, ಬುದ್ಧಿ, ಚಿತ್ರ, ಗುಣ, ರಾಗ, ಪುರುಷ, ವಿದ್ಯಾ, ನಿಯತಿ, ಕಲಾ, ಕಾಲ, ಮೋಹಕ, ಸಬೋಧಕೇಶ್ವರ, ಸಾದಾಖ್ಯ, ಈಶ್ವರ, ಶಕ್ತಿ, ಶಿವ ಎಂಬ ಮೂವತ್ತಾರು ತತ್ತ್ವ ಸ್ವರೂಪ ನಿಮಣರೂ, ಷಟ್‌ ಸ್ಥಲಬ್ರಹ್ಮ ಪೂಜಿತರೆಂದರೆ ಪಾದವ ಸದ್ಯೋಜಾತ, ಕಟಿಯ ವಾಮದೇವ, ಜಠರದ ಅಘೋರ, ಮುಖದ ತತ್ಪುರುಷ, ಲಲಾಟದ ಈಶಾನ, ಮಸ್ತಕದ ಗೋಪ್ಯರೆಂಬ ಷಟ್‌ ಸ್ಥಲಬ್ರಹ್ಮರಿಂದ ಮಾನ್ಯರೂ, ಬಿದಿಕಾರೊಡಲರನ್ನು ಕಡೆಗಣ್ಣಿಂದ ಕಂಡವರೂ, ವಿಭೀಷಣಾಂಧಕಾಸುರಾದಿ ದಾನವೇಂದ್ರರಿಂದ ನಿತ್ಯ ಅರ್ಚಿತರೂ ಆದ ಶ್ರೀ ಜಗದ್ಗುರು ರೇಣುಕಾಚಾರ್ಯ ಭಗವತ್ಪಾದರು ಪರಶಿವಾನುಭವಾನಂದರಸ ಸ್ವರೂಪರಾಗಿ ವೀರಶೈವ ಭಕ್ತ ಮಾಹೇಶ್ವರಾದಿಗಳಿಗೆ ಅತ್ಯಂತ ಬೇಕಾದ ಪರಶಿವನ ಸಂಬಂಧದ ಸದಾಚಾರ ಪ್ರಧಾನವಾದ ಶಿವಾದೈತ ಸಿದ್ಧಾಂತವನ್ನು ನಿರೂಪಿಸಿ, ನೆಲೆಯೂರುವಂತೆ ಮಾಡಿದರು ಎಂಬುದಾಗಿ ಹೇಳುತ್ತಾನೆ.
“ಅಥ ತ್ರಿಲಿಂಗ ವಿಷಯೇ ಕುಲ್ಯಪಾಕ್ಯಾಭಿದೇ ಸ್ಥಲೇ | ಸೋಮೇಶ್ವರ ಮಹಾಲಿಂಗಾತ್ ಪ್ರಾದು ರಾಸೀತ್ ಸ ರೇಣುಕಃ ॥ –

ಮಹಾನ್ವಿತ ಸ್ವರೂಪಿಗಳಾದ ರೇಣುಕರ ಸಾಹಸ ಕಲಾ ಪ್ರಪೂರ್ಣತೆಯ ಕಾರ್ಯವನ್ನು ಪ್ರತಿಯೊಬ್ಬರೂ ಸ್ಮರಿಸುವಂತಹುದು. ಮೈ-ಮನ-ಮಾತುಗಳಲ್ಲಿ ಮಂತ್ರಶಕ್ತಿ-ಮಂತ್ರದೀಪ್ತಿಯನ್ನು ದಿವ್ಯವಾಗಿರಿಸಿಕೊಂಡಿದ್ದ ಆದ್ಯರು ಗುರುಗಳಿಗೆಲ್ಲ ಗುರುವಾಗಿ ದೇಶಿಕೇಂದ್ರರಾಗಿದ್ದರು. ದಿಕ್ಕು-ದೆಸೆ ಕಾಣದ ಜನರ ಮನಸ್ಸಿಗೆ ಮುಕ್ತವಾಗಿ ಧರ್ಮ ಬೋಧಿಸಿದ್ದಲ್ಲದೇ ಆಳ ನಿಲುವಳುಗಳನ್ನು ಗುರುತರಗೊಳಿಸಿ, ಕಲೆ-ಕಳೆ-ಕೊಳೆಯನ್ನು ಕಿತ್ತೆಸೆದವರು. ಷಟ್‌ ಸ್ಥಲ ಸಿದ್ಧಾಂತ ಸ್ವರೂಪ ನಿರ್ಣಯದಲ್ಲಿ, ಸಮಗ್ರತೆಯ ಸದ್ಭಾವ ಸಂಸ್ಥಾಪನೆಯಲ್ಲಿ ಸರ್ವರನ್ನೂ ಷಟ್‌ಸ್ಥಲ ಬ್ರಹ್ಮರನ್ನಾಗಿಸಿದವರಲ್ಲಿ ಅವರನ್ನು ಬಿಟ್ಟು ಇನ್ನೊಬ್ಬರಿಲ್ಲ.

ಇಂತೆಲ್ಲ ಮಹತಿಯನ್ನು ಮೈದಡವಿಸಿ ಹಿಡಿದಿಟ್ಟುಕೊಂಡಿದ್ದ ಇವರು ಷಟ್‌ ಸ್ಥಲಬ್ರಹ್ಮ, ಷಟ್‌ ಸ್ಥಲ ಚಕ್ರವರ್ತಿ, ಷಟ್‌ ಸ್ಥಲ ಚಿಂತಾಮಣಿ, ಷಟ್‌ ಸ್ಥಲ ದೀಪ್ತಿ ಎಂಬಿವೇ ಮೊದಲಾದವುಗಳು ವಾಸ್ತವವಾಗಿ ಮುಮೊದಲಲ್ಲಿ ಸಾರ್ಥಕತೆಯನ್ನು, ಸಮರ್ಪಕತೆಯನ್ನು ಸರ್ವಾಧಾರತೆಯನ್ನು ಸಮಗ್ರತೆಯನ್ನು, ಸಂತುಷ್ಟಿಯನ್ನು, ಸಮಷ್ಟಿಯನ್ನು, ಸಹಯೋಗತ್ವವನ್ನು ಪಡೆದುಕೊಂಡಿದ್ದವು. ಇದರ ಪ್ರಭಾವದ ಪರಿಣಾಮವೆಂಬಂತೆ ಅವರ ಕಾಲದಲ್ಲಿಯೇ ಅವರಿಂದ ಷಟ್‌ಸ್ಥಲಬ್ರಹ್ಮರು ಸಂಖ್ಯಾತೀತರಾಗಿ ಇವರಿಂದ ಸಂಪೂಜ್ಯರಾಗಿದ್ದರೆಂದರೆ ಕರ್ತೃತ್ವ ಹಿರಿಮೆಯದ್ದು. ಸಕಾಲಕ್ಕೂ ಸಲ್ಲುವಂತಹದ್ದು. ಈ ದಿಸೆಯಲ್ಲಿ ಷಟ್‌ ಸ್ಥಲಬ್ರಹಿಗಳೆಲ್ಲರೂ ರೇಣುಕ ಭಗವಾನರಿಗೆ ಋಣಿಗಳು.

ಅಸಾಧಾರಣತ್ವವನ್ನು ಸಾಧನೆಯ ಶಿಖರವಾಗಿಸಿ ತಮ್ಮ ಶಿಖೆಯಲ್ಲಿರಿಸಿಕೊಂಡು, ಶಕ ಶಕಗಳವರೆಗೂ ಶಿವತ್ವವನ್ನು ಪ್ರತಿಪಾದಿಸಿದ ಪ್ರಥಮಾಚಾರ್ಯವರೇಣ್ಯರ ಬೋಧನೆರಳಿನ ಸಿರಿಯಲ್ಲಿ ಬದುಕುಂಡವರ ಅಂಕಿ-ಅಂಶಗಳು ಅನಂತ ಆದ್ದರಿಂದಲೇ ವೀರಶೈವರೆಲ್ಲರೂ ರೇಣುಕ ಶಿವಾಚಾರ್ಯ ಭಗವಪಾದರ ಅಣತಿಯ ಆಜ್ಞೆಯಂತೆ ನಡೆದು ಧನ್ಯತೆ ನುಡಿಯುವ ಅವಶ್ಯವಿದೆ. ಅಪ್ರತಿಮ ವರ್ಚಸ್ಸು ಹೊಂದಿದ್ದ ಆದಿ ಆಚಾರ್ಯ ರೇಣುಕರು ಮನುಕುಲದುದ್ಧಾರಕ್ಕೋಸ್ಕರ ಕೈಗೊಂಡ ಕಾರ್ಯಗಳನೇಕ, ಅಗಣಿತ ಸಾಧನಾ ಪಥಗಾಮಿಯ ಸುಕಾರ್ಯಗಳ ಸಂಕೀರ್ಣ ಬಲು ದೊಡ್ಡದು, ಅವುಗಳಲ್ಲಿ ಕೆಲವನ್ನು ಇಲ್ಲಿ ಅವಲೋಕಿಸಬಹುದು.

ತ್ರಿಕೋಟಿ ಶಿವಲಿಂಗ ಸ್ಥಾಪನೆ: ಮಹಾನ್ ಶಿವಭಕ್ತ ಶ್ರೇಷ್ಠನಾಗಿಯೂ, ಪರಶಿವನ ಆತ್ಮಲಿಂಗವನ್ನು ಅಪಾರ ಭಕ್ತಿತ್ವದಿಂದ ಧರೆಗೆ ತಂದವನೂ, ಆಚಾರಶುದ್ಧಶೀಲನೂ, ಬಾಹು ಪರಾಕ್ರಮಶಾಲಿಯೂ, ದಶಶಿರ ವಿಶಿಷ್ಟನೂ ಆಗಿದ್ದ ರಾವಣನ ಪೂರ್ವಾಪರ ಸಂಕಲ್ಪದ ಶಿವಾದೇಶದ ಸುಕಾರ್ಯವೆಂಬಂತೆ ತನ್ನ ರಾಜ್ಯದಲ್ಲಿ 9 ಕೋಟಿ ಶಿವಲಿಂಗಗಳನ್ನು ಸ್ಥಾಪಿಸಬೇಕೆಂಬ ಮಹದುದ್ಧೇಶದಿಂದ 6 ಕೋಟಿ ಲಿಂಗಗಳನ್ನು ಸ್ಥಾಪಿಸಿ, ಇನ್ನೂ 3 ಕೋಟಿ ಶಿವಲಿಂಗಗಳ ಸ್ಥಾಪನಾ ಇರುವಾಗಲೇ ಆತನಿಂದಾದ ಅಚಾತುರ್ಯತನವೋ ಅಥವಾ ಕಾಲದ ಮಹಿಮೆಯೋ ಎಂಬಂತೆ ಕೊನೆಯುಸಿರೆಳೆಯುವಂತಾಯಿತು. ಇದೇ ಸಂದರ್ಭದಲ್ಲಿ ತನ್ನ ಸಹೋದರ ವಿಭೀಷಣನಲ್ಲಿ ತನ್ನ ಮನದ ಅಭಿಲಾಷೆಯನ್ನು ವ್ಯಕ್ತಪಡಿಸಲಾಗಿ, ತತ್ ಕೋರಿಕೆಯ ಪೂರ್ಣತೆಗೆ ಪ್ರಥಮಾಚಾರ್ಯ ಗಣಚಕ್ರವರ್ತಿಗಳಾದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರಲ್ಲಿ ವಿನಮ್ರತೆಯಿಂದ ವಿನಂತಿಸಿ, ಇನ್ನುಳಿದ ತ್ರಿಕೋಟಿ ಶಿವಲಿಂಗ ಸ್ಥಾಪನೆಗೆ ಸಾನ್ನಿಧ್ಯ ಕರುಣಿಸುವಂತೆ ವಿಭೀಷಣನ ಪ್ರಾರ್ಥನೆಯನ್ನು ಮನ್ನಿಸಿ ಆಕಾಶಮಾರ್ಗಿಗಳಾಗಿ ಏಕಕಾಲದಲ್ಲಿ ತ್ರಿಕೋಟಿ ಸ್ವರೂಪರಾಗಿ ಮೂರುಕೋಟಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ, ಪ್ರಾಣಕಳೆಯನ್ನು ತುಂಬಿದ್ದಲ್ಲದೇ ವೀಭೀಷಣನಿಗೆ ಲಿಂಗದೀಕ್ಷೆಯಿತ್ತು, ಧರ್ಮ ಮಾರ್ಗದಲ್ಲಿ ನಡೆಯುವಂತೆ ಆಶೀರ್ವಾದವಿತ್ತು, ಆತನಿಗೆ ಲಂಕೆಯ ಪಟ್ಟಾಭಿಷೇಕವನ್ನು ಕಟ್ಟಿ ಮಹಾಶಿವಭಕ್ತ ರಾವಣನ ಸಂಕಲ್ಪವನ್ನು ಸಂಪೂರ್ಣಗೊಳಿಸಿದ್ದು ಮಹಾದ್ಭುತವಾದ ಲೀಲೆಯೇ, ಇಂದಿಗೂ ಸಹ ಲಂಕಾ ಪಟ್ಟಣದ ಜಾಪ್ಪಾದಲ್ಲಿ ಶಿವಲಿಂಗಗಳಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ರೇಣುಕಾಶ್ರಮ, ರೇಣುಕ ಕುಟೀರ, ರೇಣುಕ ವನಗಳನ್ನು ದರ್ಶಿಸಬಹುದಾಗಿದೆ.

ರೇಣುಕಾಗಸ್ವರ ಸಂವಾದ: ಲೋಕ ಕಲ್ಯಾಣ ಮತ್ತು ವಿಶ್ವ ಶಾಂತಿಗಾಗಿ ಸಂಶ್ರಮಿಸಿದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು ಮಲಯಾಚಲ ಪ್ರಾಂತಕ್ಕಾಗಮಿಸಿ, ಕುಂಭಜನಾದ, ಸಪ್ತಸಾಗರ, ಪಾನಮಾಡಿದವನಾದ, ವಾತಾಪಿ ಇಲ್ವಲ ರಾಕ್ಷಸರನ್ನು ಸಂಹರಿಸಿದವನಾದ, ವಿಂಧ್ಯಪರ್ವತದ ಗರ್ವಭಂಜಿಸಿ ನಹುಷ ಚಕ್ರವರ್ತಿಯ ದರ್ಪವಡಗಿಸಿದ ಮುನಿಕುಲತಿಲಕ ಅಗಸ್ಯ ಮಹರ್ಷಿಗಳಿಗೆ ವೀರಶೈವ ಸಿದ್ಧಾಂತದಂತೆ ದೀಕ್ಷಾ-ಸಂಸ್ಕಾರವನ್ನು ನೀಡಿ, ಶಿವಾದೈತ ಸಿದ್ಧಾಂತತ್ತ್ವದ ಪರಮ ರಹಸ್ಯವನ್ನು ಬೋಧಿಸಿದರು. ಶ್ರೀ ರೇಣುಕ ಜಗದ್ಗುರುಗಳು ಅಗಸ್ಯರ ಮತಿಯಲ್ಲಿ ಮಹತ್ತರ ಅಂಶದ ಅಂಕುರವನ್ನು ಮೊಳೆಯೊಡೆಯಿಸಿ ವೃಕ್ಷವಾಗಿಸಿದ ಹಿನ್ನೆಲೆಯಲ್ಲಿ ಅಗತ್ಯ ಮಹರ್ಷಿಗಳು ಅನೇಕಾನೇಕ ಮಹತ್ತರ ವೀರಶೈವಪರವಾದ ಕೃತಿಗಳನ್ನು ರಚನೆಗೊಳಿಸಿ, ಧರ್ಮ ಪ್ರಸಾರಗೊಳಿಸಿದರು. ಮುಂದೆ ಇದುವೇ ಮೂಲ ಸಿದ್ಧಾಂತ ವ್ಯಾಪ್ತಿಗೊಳ್ಳಲು ಅನುವಾಯಿತು. ಶ್ರೀ ರೇಣುಕರ ಪ್ರೇರಣೆಯಿಂದ ಪಲ್ಲವಿಸಿದ ರೇಣುಕ ಗೀತೆಯು ಶ್ರೀ ಶಿವಯೋಗಿ ಶಿವಾಚಾರ್ಯರಿಂದ ವಿರಚಿತಗೊಂಡು ವೀರಶೈವ ಸಿದ್ಧಾಂತವನ್ನು ಮುಮೊದಲು ಪ್ರತಿಪಾದಿಸಿದ ಗ್ರಂಥವಾಯಿತು. ಸನ್. 1060 ರಲ್ಲಿ ಶ್ರೀಪತಿ ಪಂಡಿತರ ಶ್ರೀಕರ ಭಾಗ್ಯದಲ್ಲಿ ಈ ಗ್ರಂಥದ ಉಲ್ಲೇಖಗಳನ್ನು ಮಾಡಿದ್ದು ಮಹತ್ತರ ಸಂಗತಿ. ಅಷ್ಟಾವರಣ, ಪಂಚಾಚಾರ, ಷಟ್‌ ಸ್ಥಲ ಹಾಗೂ ತಾತ್ವಿಕಾಂಶಗಳಾದ ಪತಿ, ಪಶು, ಪಾಠ, ಮುಕ್ತಿ ಮೊದಲಾದ ವಿಷಯಗಳು ನೂರೊಂದು ಸ್ಥಲಗಳ ವ್ಯಾಪ್ತಿಯಲ್ಲಿ ಸುಸಜ್ಜಿತವಾಗಿ ನಿರೂಪಿಸಲ್ಪಟ್ಟಿವೆ. ಇಲ್ಲಿನ ನೂರೊಂದು ಸ್ಥಲಗಳಲ್ಲಿ ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಮೊದಲಿನವು 44 ಅಂಗಸ್ಥಲ, ನಂತರದ 57 ಲಿಂಗಸ್ಥಲ. ಪಿಂಡಸ್ಥಲದಿಂದ ಆರಂಭಗೊಳ್ಳುವ ಅಂಗಸ್ಥಲ ಸಹಭಾಜನ ಸ್ಥಲದಿಂದ ಕೊನೆಗೊಂಡರೆ, ದೀಕ್ಷಾಗುರುಸ್ಥಲದಿಂದ ಪ್ರಾರಂಭವಾಗುವ ಲಿಂಗಸ್ಥಲವು ಜ್ಞಾನಶೂನ್ಯಸ್ಥಲದಲ್ಲಿ ಅಂತ್ಯಗೊಳ್ಳುತ್ತದೆ. ಈ ಕೃತಿ ಕುರಿತಾಗಿ ಅನೇಕ ಪಂಡಿತೋತ್ತಮರು ಸ್ವದೇಶದಲ್ಲಿನವರಷ್ಟೇ ಅಲ್ಲ. ವಿದೇಶಿಗರೂ ಸಹ ಪರಮಾರ್ಶೆಯ ಬೆಳಕು ಚೆಲ್ಲಿದ್ದಾರೆ. ಶ್ರೀ ಮರಿತೋಂಟದಾರರು ಸಂಸ್ಕೃತದಲ್ಲಿ ವ್ಯಾಖ್ಯಾನ ರಚಿಸಿದ್ದಾರೆ. ತಲೈ ಮಂಗಲಂ ಶ್ರೀ ಶಿವಪ್ರಕಾಶ ಸ್ವಾಮಿಗಳು ತಮಿಳು ಭಾಷೆಗೆ ತರ್ಜುಮೆಗೊಳಿಸಿದ್ದಾರೆ. ಸೋಸಲೆ ರೇವಣಾರಾಧ್ಯರು ಕನ್ನಡ ವ್ಯಾಖ್ಯಾನ ಬರೆದಿದ್ದಾರೆ. ಉಜ್ಜನೀಶರು ಕನ್ನಡೀಕರಿಸಿದ್ದಾರೆ. ಶ್ರೀ ನೀಲಕಂಠ ಶಿವಾಚಾರ್ಯರು ತಮ್ಮ ಕ್ರಿಯಾಸಾರದಲ್ಲಿ ನೂರೊಂದು ಸ್ಥಲಗಳ ಕುರಿತಾಗಿ ಸಮಗ್ರತಾಭಾವವನ್ನು ಸ್ಪುರಿಸಿದ್ದಾರೆ. ಕುಂಭಕೋಣಂಮಂಠದಿಂದ ಪ್ರಕಟಗೊಂಡ ಅಗತ್ಯ ವಿರಚಿತ ‘ಬ್ರಹ್ಮಸೂತ್ರವೃತ್ತಿ’ಯು ರೇಣುಕ ಸಿರಿಯನ್ನು ಪ್ರಕಾಶಿಸುತ್ತದೆ. ಪುರಾತನ ಇತಿಹಾಸ ಹೊತ್ತ ಈ ಗ್ರಂಥದ ಕುರಿತಾಗಿ ಮಹಾತಪಸ್ವಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಸಾರವನ್ನು ಕ್ರಿಯಾರೂಪಗೊಳಿಸಿ ಸಾಕಾರಗೊಳಿಸಿದ್ದಾರೆ. ರಂಭಾಪುರಿ ಶ್ರೀ ವೀರಗಂಗಾಧರ ಜಗದ್ಗುರುಗಳು, ಶ್ರೀ ಕಾಶಿ ಡಾ|| ಚಂದ್ರಶೇಖರ ಜಗದ್ಗುರುಗಳು, ಶ್ರೀ ಶ್ರೀಶೈಲ ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಮಹತ್ವಯುತ ಮೆರುಗು ತುಂಬಿ ಧರ್ಮಪ್ರಸಾರಕ್ಕೆ ಇಂಬು ನೀಡಿದ್ದಾರೆ. ಮೌಲ್ಯಾಚರಣೆಗಳ ಮುಕುಟ ಮಣಿಯಾಗಿರುವ ಸಿದ್ಧಾಂತ ಶಿಖಾಮಣಿಯು ನಿತ್ಯವೂ ಜಗದ್ವಂದ್ಯವಾಗಿದೆ ಎಂದು ಬೇರೆ ಹೇಳಬೇಕಿಲ್ಲ.

* ಮಾತಂಗನ ಪರಿವರ್ತನೆ: ಇತಿಹಾಸ ಪ್ರಸಿದ್ಧವಾದ ತುಂಗಭದ್ರಾ ನದಿಯು ಪಂಪಾ ವಿರೂಪಾಕ್ಷನ ಪ್ರಭಾವದಿಂದಾಗಿ ಪಂಪಾ ಸರೋವರವೆಂದೂ ಕರೆಯಲ್ಪಟ್ಟಿದೆ. ಇದರ ಎದುರಿಗಿರುವ ಪರ್ವತವು ದುರ್ಗಮ ಪ್ರದೇಶವಾಗಿತ್ತಲ್ಲದೇ, ಪರ್ವತರಾಜನೆಂಬ ಪ್ರತೀತಿಯನ್ನು ಪಡೆದುಕೊಂಡಿತ್ತು. ಈ ಪರ್ವತವು ಚಂಡಾಲನಾದ ಮಾತಂಗನ ಕುಕೃತ್ಯಗಳಿಗೆ ನೆಲೆದಾಣವಾಗಿದ್ದಿತು. ಮಾತಂಗನು ಇಲ್ಲಿ ನೆಲೆಸಿದ್ದಕ್ಕಾಗಿ ಮಾತಂಗ ಪರ್ವತವೆಂದೂ ಇದನ್ನು ಕರೆಯುವುದು ವಾಡಿಕೆಯಲ್ಲಿತ್ತು. ಕೊಲೆ, ದರೋಡೆ, ಅಪಹಣ, ಹಿಂಸೆ, ಕ್ರೌರ್ಯಗಳಿಂದ ದುರಾತ್ಮನೆನಿಸಿದ್ದ ಮಾತಂಗನಿಗೆ ಜೀವ ಜಂತುಗಳ ವ್ಯತ್ಯಾಸವೇ ತಿಳಿಯದ ರೀತಿಯದಾಗಿತ್ತು. ಮನಃಬಂದಂತೆ ಅಕಾರವೆಸಗುತ್ತ ದಾರಿಹೋಕರಿಗೆಲ್ಲ ಪೀಡಕನಾಗಿ ತೊಂದರೆಯನ್ನುಂಟು ಮಾಡುತ್ತಿದ್ದ ಈತನಿಗೆ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯರು ಜೀವನ ನಿಜಾಂಶವನ್ನು ತಿಳಿಸಿ, ಪಾಪ-ಪುಣ್ಯಗಳ ಅರಿವು ಮೂಡಿಸಿದ್ದಲ್ಲದೇ, ಶಿವಜ್ಞಾನವನ್ನು ತುಂಬಿದರು. ಮತಿಗೆ ಗತಿ ತೋರಿ ಲಿಂಗದೀಕ್ಷೆಯನ್ನಿತ್ತರು. ಮಾದಿಗನಾಗಿದ್ದ ಮಾತಂಗನನ್ನು ಉದ್ಧರಿಸಿ ಆಶೀರ್ವದಿಸಿದರು. ಅಂದೇ ಅಸ್ಪಶೋದ್ಧಾರ ಕಾರ್ಯಕ್ಕೆ ಸಂಕಲ್ಪ ತೊಟ್ಟ ಜಗದ್ಗುರುಗಳು ಜಾತ್ಯಾತೀತವಾದ ಸಮುದಾಯ ನಿರ್ಮಾಣಕ್ಕೆ ನಾಂದಿ ಹಾಡಿದರು. ಮಹಾಚಾರ್ಯರಿಂದ ಪ್ರಭಾವಪೂರ್ಣ ಕೃಪೆಪಡೆದ ಮಾತಂಗನು ಅಂದಿನಿಂದ ಶಿವಭಕ್ತನಾಗಿ, ಶಿವಧ್ಯಾನಾಸಕ್ತನಾಗಿ ಧರ್ಮ ಮಾರ್ಗಿಯಾಗಿ ಮಹರ್ಷಿಯಾಗಿ ಪರಿವರ್ತನೆಗೊಂಡನೆಂದು ಅಥರ್ವಣ, ಯಜುರ್ವೇದಗಳಲ್ಲಿ ಉಲ್ಲೇಖಿಸಲಾಗಿದೆ.

ಮಠಗಳ ನಿರ್ಮಾಣ ಮತ್ತು ವೀರಮಾಹೇಶ್ವರ ಜ್ಞಾನ ಪ್ರಸಾರ: ಜನಕಲ್ಯಾಣಕ್ಕೋಸ್ಕರವಾಗಿ ನಿರಂತರ ಚುರುಕಿನ ಕಾರ್ಯನಿಯಮ ಹಾಕಿಕೊಂಡ ಶ್ರೀ ಜಗದ್ಗುರು ರೇಣುಕ ಗಣಾಧೀಶ್ವರರು ಧರ್ಮ ಪ್ರಸಾರವನ್ನು ಹೆಚ್ಚುಗೊಳಿಸಿದರು. ಮಠಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡು ಅತ್ಯಂತ ಶ್ರಮವಹಿಸಿ ಶೃದ್ಧೆಯಿಂದ ಕಾರ್ಯವೆಸಗಿದರು. ಜಂಗಮೋದ್ಧಾರ, ಲಿಂಗಧಾರಣೆ, ದಲಿತೋದ್ಧಾರ, ಜಾಗೃತಿ, ಧಮೋದ್ಧಾರ, ಪ್ರಸಾರ, ಗ್ರಾಮೋದ್ಧಾರ, ಆಚಾರ ವಿಚಾರಗಳಂತಹ ಹಲವು ಯೋಜನೆಗಳನ್ನು ರೂಪಿಸಿ, ಅವುಗಳನ್ನು ಆಯೋಜನೆಗೊಳಿಸಿ ಶಿಂಶುಮಾರ ಮತ್ತು ಡಿಂಡಿಮಾರರ ಸಹಕಾರಗಳಿಂದ ಮಠಮಾನ್ಯಗಳ ನಿರ್ಮಾಣಕ್ಕೆ ಮುಂದಾದರು. ಶ್ರೀ ಜಗದ್ಗುರಗಳವರ ಆದೇಶದಂತೆ ಶಿಂಶುಮಾರನು ಮೊದಲು ಮಠವನ್ನು ಕಟ್ಟಿ ಅಲ್ಲಿಯೇ ಅನ್ನ-ಜ್ಞಾನ ದಾಸೋಹವನ್ನು ಆರಂಭಿಸಿದನು. ಇದರ ಪ್ರಭಾವದಿಂದ ಅನೇಕ ವೀರಮಾಹೇಶ್ವರರು ಒಗ್ಗೂಡಿ ವಿಶ್ವಮಾನವ ಧರ್ಮದ ಒಳಿತಿಗಾಗಿ ಮಠಕ್ಕೆ ಆಗಮಿಸಿ ವ್ಯವಸ್ಥೆಗಳ ಸಾಕಾರತೆಗೆ ಸಾಕ್ಷರತೆ ಮೂಡಿಸಿ ಹೆಗಲುನೀಡಿ ದುಡಿದರು. ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಸಮನಿಸಿ ಜ್ಞಾನಾನುಭವವನ್ನೂ ಹಂಚುವಲ್ಲಿ ಮುಂಚೂಣಿಯಾದರು. ಅದೇ ರೀತಿ ಡಿಂಡಿಮಾರನೂ ಸಹ ಧರ್ಮಮಾರ್ಗಗಳನ್ನು ಅನುಸರಿಸಿ ಶ್ರೀ ರೇಣುಕರಿತ ನೀತಿಗಳನ್ನು ಧರ್ಮಾರ್ಥಗಳ ಮುಖೇನ ಗಟ್ಟಿಗೊಳಿಸಿ ದಿವ್ಯತರವಾದ ಮಠಗಳನ್ನು ಕಟ್ಟಲಾರಂಭಿಸಿದನು. ಕಟ್ಟಿದ ಮಠಗಳಲ್ಲಿ ಷಟ್‌ ಸ್ಥಲಬ್ರಹ್ಮರನ್ನು ಇರಿಸಿ; ಷಟ್‌ ಸ್ಥಲಾನುಭವವನ್ನು ಪ್ರಚುರಗೊಳಿಸಲು ನಿರತನಾದನು. ನಂತರ ಶ್ರೀ ಶಾಂತಯೋಗೀಶ್ವರರ ಮೂಲಕ ಇರುಳು ದಾಸೋಹ, ಹಗಲು ಧರ್ಮೋದ್ಧಾರಕ್ಕೆ ಅಣಿಗೊಂಡನು. ಅರ್ಚನ-ಅರ್ಪಣ ಕಾರ್ಯಕ್ಕಿಳಿದು ಮಠಪರಂಪರೆಗೆ ಶ್ರೀ ಜಗದ್ಗುರು ರೇಣುಕ ಭಗವಾನರ ಮಾರ್ಗದರ್ಶನದಲ್ಲಿ ಜಾಗೃತಿ ಕಾರ್ಯಗಳನ್ನು ಇವರೀರ್ವರೂ ನೆರವೇರಿಸಿ ಗುರುಕೃಪೆ ಸಂಪಾದಿಸಿದ್ದು ವಿಶೇಷ.

ಭೂರುದ್ರ-ಭಕ್ತಸಂಘಗಳು: “ವೀರಂ ಬಲಂ ಸ್ವಸ್ತಿ ಸಮಸ್ತ ಮೇಧಾ ಪ್ರಜ್ಞಾ ಮತಿ ಜ್ಞಾನ ಸಮನ್ವಿತಾನಿ; ಏಕೋತ್ತರ ಶತಸ್ಥಾನ ಶತಾನಿ ಲೋಕೇ ವಹಂತಿ ಮಾಹೇಶ್ವರ ಭಕ್ತ ಸಂಘಾ: ” ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯರು ರೂಪಿಸಿ, ರೂಢಿಸಿದ ಭೂರುದ್ರ-ಭಕ್ತ ಸಂಘಗಳು ಜಗದಲ್ಲಿ ಏಕೋತ್ತರ ಶತಸ್ಥಲಗಳ ನೂರು ನೆಲೆಗಳನ್ನು ವಹಿಸಿಕೊಂಡು ಕಾರ ನಡೆಸುತ್ತಿದ್ದವು. ಆ ನೂರೊಂದು ನೆಲೆಗಳು ಪರಾಕ್ರಮ, ಪುಷ್ಠಿ, ಶುಭ, ಸಮಸ್ತ, ಬುದ್ಧಿ, ಪ್ರಜ್ಞೆ, ಮತಿ, ಜ್ಞಾನ, ಸ್ವಾನುಭಾವಗಳಿಂದ ಕೂಡಿಕೊಂಡಿದ್ದವು. ಜಾಗೃತ ಜಗತ್ತಿನ ಮಾರ್ಪಾಡಿನಲ್ಲಿದ್ದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಜನರ ಆಶೋತ್ತರಗಳಿಗೆ ಸ್ಪಂದಿಸುವ ಮಹತ್ತರವಾದ ಕಾರ್ಯಕ್ಕೆ ಸಂಕಲಪ್ ತೊಟ್ಟಿದ್ದರು. ಕೇವಲ ಸಂಘಗಳನ್ನು ಧರ್ಮಪ್ರಸಾರ ಮತ್ತು ಪ್ರಚಾರಕ್ಕೆ ಬಳಸದೇ ನೊಂದವರ, ನಿರ್ಗತಿಕರ ಜೀವನಾಡಿಯಾಗಿಸುವಂತೆ ಬಳಕೆ ಮಾಡಿದರು. ಹಸಿದವರಿಗೆ ಅನ್ನ, ಅನಾಥರಿಗೆ ರಕ್ಷಣೆ, ವಯೋವೃದ್ಧರಿಗೆ ಆರೈಕೆ, ರೋಗಿಗಳಿಗೆ ಔಷಧಿ, ಅಬಲೆಯರಿಗೆ ಆಶ್ರಯ, ನೋವಿನಲ್ಲಿದ್ದವರಿಗೆ ಸಾಂತ್ವನ ಹೀಗೆ ಮೊದಲಾದ ಧೀರೋದಾತ್ತ ಉದ್ದೇಶಗಳನ್ನಿರಿಸಿಕೊಂಡು ಶಿವಾಚಾರ್ಯರ, ಶಿವಾಚಾರಿಣಿಯರ ಮುಖೇನ ಜನಸೇವೆಯನ್ನು ಪರಿಪಕ್ವಗೊಳಿಸಿದರು. ತಾವೂ ಸ್ವತಃ ಅವರುಗಳೊಟ್ಟಿಗೆ ಬೆರೆತು ಮಾತೃತ್ವದ ಅಭಯ ನೀಡುತ್ತಿದ್ದರು.

ಭೂಸುರರು-ಭೂರುದ್ರರು: ಭವಿ-ಭಕ್ತ ಎಂಬಂತರ ಮಾತಿನ ಭಾವನಿಂದೆಯನ್ನು ತೊಳೆದುಹಾಕಿ ತಾರತಮ್ಯ ನೀತಿಗಳನ್ನಳಿಸಿ ಭೂಸುರರು ಮತ್ತು ಭೂರುದ್ರರ ಮಧ್ಯದ ಕಂದಕವನ್ನು ಕಿತ್ತು ಹಾಕಿದರು. ಭೂಸುರರಲ್ಲಿ ಮೊದಲಿಗರಾದ

ವ್ಯಾಸ, ಗೌತಮ್, ವಾಲ್ಮೀಕಿ, ಶೌನಕ, ಗರಿ, ವಶಿಷ್ಠ, ಜಮದಗ್ನಿ, ಜಾಮದಗ್ನಿ, ಉದುಕ, ಪರಾಜನ, ಆಶಲಯ, ಭಕ್ತಿ, ಭೋಧಾಯನ, ಜಾಲ, ಭಾರಧ್ವಾಜ, ದಂಡಿ, ಕಶ್ಯಪ, ಕೌಂತ, ಕನಕ, ಮರೀಚಿ, ಗಾದಿಪತ್ರ, ದುರ್ದಷ, ಚಂಡ, ಕೋಪ, ಕೇಕಿ, ಸನಕ, ಮಹಾರೋಷ, ವಿಭಾಂಡಕ, ಯಜ್ಞವಲ್ಕ, ಯಜ್ಞ, ಮದಾಂಧ, ಮಾಲಿಗಳಂತಹವರಲ್ಲದೇ ಭೂರುವರಾದ ದಧೀಚಿ, ಗೌತಮ, ದೂರ್ವಾಸ, ಮುಂಡಿ, ಬ್ರಹ್ಮಾಂಡಕಲ್ಪ, ಲಯಕ್ಷಯ, ಜನ್ಮಧರ, ಮೃಕಂಡು, ಗುಹೇಶ, ಮಾರ್ಕಂಡ, ಗುಹ, ಉಪಮನ್ಯು, ವೃಷಭ, ದುಸ್ಪರ್ಷ, ಚಂಡಿ, ವಿಡಂಬಕ, ಧರ್ಮಗುಪ್ತ, ಮೇಘನಾದ. ಸಿಂಹನಾದ, ವಿರಥ, ಕಮಲಾರ, ಕಾಂತ, ಕುಶರ ಮೊದಲಾದವರುಗಳ ಹೆಸರುಗಳು ವೀರಾಗಮದಲ್ಲಿ ವ್ಯಾಪ್ತಿಗೊಂಡಿರುವಂತೆ ಈ ಈರ್ವರ ಪಂಗಡಗಳಲ್ಲಿನ ವ್ಯತ್ಯಾಸವನ್ನು ವ್ಯತ್ಯಯಗೊಳಿಸಿ, ಸಾಮ್ಯತೆಯನ್ನು ಸಮಷ್ಠಿಯಲ್ಲಿ ತಿಳಿಸಿ, ದೀಕ್ಷಾರ್ಥಿಗಳನ್ನಾಗಿಸಿ, ಸಂಸ್ಕಾರಶೀಲತೆಯನ್ನು ತುಂಬಿದರು. ಶಿವತತ್ತ್ವ, ಶಿವಾಚಾರ, ಕ್ರಿಯಾಚಾರ, ಜ್ಞಾನಾಚಾರಗಳನ್ನು ಬಿತ್ತರಿಸಿ, ಎತ್ತರಿಸಿದರು. ತರುವಾಯ ಕೊಂಡಾಡಿದರು. ಅನೇಕರು ಶ್ರೀ ರೇಣುಕ ಭಗವತ್ಪಾದಾಚಾರ್ಯರವರೇಣ್ಯರ ಮಹಾಮಹಿಮೆಯನ್ನು ಅನವರತವೂ

ಸ್ತ್ರೀ ಸಮಾನತೆ: ಅಂದಿನ ಕಾಲಘಟ್ಟದಲ್ಲಿ ಹೆಚ್ಚಳಗೊಂಡಿದ್ದ ಮೇಲ್ಮೀಳುಗಳನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಲು ನಿರ್ಧರಿಸಿ, ಮುಮ್ಮೊದಲು ಸುಕಾರ್ಯಕ್ಕೆ ಮುಂದಾದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು. ಸಮಾನತೆಯ ಸಮಾಜವನ್ನು ಕಟ್ಟಲು ಬಯಸಿದರು. ಅವರ ಧರ್ಮಾಚಾರ ಕಾರ್ಯಗಳಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ನೀಡಿ ಧಾರ್ಮಿಕ-ಸಾಮಾಜಿಕ ಸ್ವಾತಂತ್ರ್ಯವನ್ನಿತ್ತರು. ಸ್ತ್ರೀಯರಿಗಾಗಿ ವಿಶೇಷ ಧಾರ್ಮಿಕ ಸಂಘಟನೆಗಳನ್ನು ಕಟ್ಟಿ ಅವರುಗಳಿಗೆಲ್ಲ ಸುಶೀಲತ್ವ ಸಂಪನ್ನತೆಯಲ್ಲಿ ಕಾಯಕ ನೀಡುವಂತೆ ಪ್ರೋತ್ಸಾಹಿಸಿದರು. ಸುಶೀಲೆ, ಮಣಿಭದ್ರನ ಹೆಂಡತಿ, ದಮಯಂತಿ, ವಡಂಬಕನ ಹೆಂಡತಿ ಕಲಾವತಿಯಂತಹ ಅನೇಕ ಶಿವಾಚಾರಿಣಿಯರು ಅತ್ಯಧಿಕ ಸಂಖ್ಯೆಯಲ್ಲಿದ್ದರು. ಸ್ತ್ರೀ ಸ್ವಾತಂತ್ರ್ಯವಿರದ ಕಾಲದಲ್ಲಿ ದಿಟದ ದಿಟ್ಟ ಹೆಜ್ಜೆಯಿಟ್ಟು, ಧಾರ್ಮಿಕ-ಸಾಮಾಜಿಕ ಸ್ವಾತಂತ್ರ್ಯ ನೀಡಿದ್ದಲ್ಲದೇ, ಅವರುಗಳಿಗೆಲ್ಲ ಪ್ರೇರಕ ಶಕ್ತಿಯಾಗಿ ನಿಂತು ದೀಕ್ಷಾಸಂಸ್ಕಾರ-ಲಿಂಗಪೂಜೆ-ಗುರುಸೇವೆಗಳಂತಹ ಕಾರ್ಯಗಳಿಗೆ ಅಣಿಗೊಳಿಸಿದರು. ಅತೀವತರ ಕಾರ್ಯಗಳನ್ನು ಎಸಗುತ್ತ ಎಲ್ಲಾ ಕ್ಷೇತ್ರಗಳಲ್ಲೂ ಸ್ತ್ರೀಯರಿಗೆ ಸಮಾನ ಹಕ್ಕನ್ನು ಬಿತ್ತರಿಸುವಲ್ಲಿ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಮಾಡಿದ ಕಾರ್ಯಗಳೆಂದೆಂದಿಗೂ ಪ್ರಸ್ತುತ ಮತ್ತು ಆದರ್ಶವಾದವುಗಳು.

* ಶತಾನಂದನಿಗೆ ಕರುಣೆ: ಕಾರುಣ್ಯಮೂರ್ತಿಗಳಾಗಿದ್ದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯರು ಪರಶಿವನಂತೆಯೇ ಅನುಗ್ರಹ ಹಸ್ತರಾಗಿದ್ದರು. ಭಕ್ತಿಯಿಂದ ಬೇಡಿದವರಿಗೆ ಇಷ್ಟಾರ್ಥಗಳನ್ನು ಕರುಣಿಸಿ ಪೊರೆಯುವ ಪರಶಿವಾವತಾರಿಗಳೇ ಆಗಿದ್ದರು. ಕಾರ್ಯವಲ್ಲರಿಯ ಹಾದಿಯಲ್ಲಿದ್ದಾಗಲೇ ಶತಾನಂದ ಎಂಬ ಮಹಾರಾಜನನ್ನು ಆಶೀರ್ವದಿಸಿ, ದೀಕ್ಷೆಯ ರಕ್ಷೆಯನ್ನಿತ್ತರು, ಶ್ರೀ ಜಗದ್ಗುರುಗಳವರಿಂದ ಅನುಗ್ರಹಿತನಾದ ಶತಾನಂದ ಮಾಹಾರಾಜನು ಧರ್ಮಾಚಾರಶೀಲನಾಗಿ, ಶಾಸ್ತ್ರಾಚಾರಗಳಲ್ಲಿ ತಲ್ಲೀನನಾಗಿದ್ದನು. ತನ್ನ ಪ್ರಜೆಗಳೊಟ್ಟಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡು ಧರ್ಮ ಸತ್ಕರ್ಮಗಳ ನೆರಳಿನಲ್ಲಿ ರಾಜ್ಯಭಾರ ನಡೆಸಿದ್ದನು. ಇವನ ಕೋರಿಕೆ, ಬಿನ್ನಹವನ್ನು ಮನ್ನಿಸಿ ಪರಮಾಚಾರ್ಯರು ಆತನ ರಾಜ್ಯಕ್ಕೆ ದಯಮಾಡಿಸಿ ಪಾದಪೂಜಾದಿ ಪ್ರಸಾದಾದಿಗಳನ್ನು ಸ್ವೀಕರಿಸಿ, ಸಂತೃಪ್ತಿಯ ಭಾವದಿಂದ ಹರಸಿ, ರಾಜ್ಯದಲ್ಲಿ ಧರ್ಮದ ದಾರಿಯಲ್ಲಿ ನಡೆಯುವಂತೆ ಆದೇಶವಿತ್ತರು. ಅಂತೆಯೇ ಶತಾನಂದ ಮಹಾರಾಜನು ನಿತ್ಯ ದಾಸೋಹ, ಧರ್ಮ ಪ್ರಸಾರ, ಲಿಂಗೋಪಾಸನೆ, ಪ್ರಜಾಸಂರಕ್ಷಣೆಯಂತಹ ಕಾರ್ಯಗಳನ್ನು ನಿಷ್ಠೆಯಿಂದ ಮಾಡಲಾರಂಭಿಸಿದನು. ಇದರ ಪರಿಣಾಮವಾಗಿ ಈತ ವಿಖ್ಯಾತನಾಗತೊಡಗಿದನು. ಪ್ರಖ್ಯಾತಗೊಂಡ ಶತಾನಂದನ ಕೀರ್ತಿಯನ್ನು ಸಹಿಸದ ವೃತಾಸುರನೆಂಬುವನು ಸೈನ್ಯದೊಡಗೂಡಿ ಶತಾನಂದನ ರಾಜ್ಯದ ಮೇಲೆ ದಾಳಮಾಡಲೆತ್ನಿಸಿದಾಗ ಶತಾನಂದನು ಶ್ರೀ ರೇಣುಕ ಗಣಾಧೀಶ್ವರರ ವರಪ್ರಸಾದದಿಂದ ಬಂದಿದ್ದ ಅನ್ನದ ಅಗುಳುಗಳ ವರ್ಷಣದಿಂದ ಶತ್ರುಸೈನ್ಯವನ್ನೆಲ್ಲ ನಿರಾಮ ಮಾಡಿದನು. ಇದರಿಂದ ಭಯಗೊಂಡ ವೃತಾಸುರನು ತನ್ನ ತಪ್ಪನ್ನು ಮನ್ನಿಸುವಂತೆ ಶ್ರೀ ರೇಣುಕರಲ್ಲಿ ಮೊರೆ ಹೋದನು. ಪ್ರಸನ್ನಗೊಂಡ ರೇಣುಕರು ಇವರೀರ್ವರನ್ನೂ ಆಶೀರ್ವದಿಸಿ ಮುಕ್ತಿ ಸಂಪಾದನಾಯುಕ್ತ ಧರ್ಮಮಾರ್ಗದಲ್ಲಿ ಸಾಗುವಂತೆ ಆದೇಶಿಸಿ ಉದ್ಧರಿಸಿದರು. ನಂತರ ಈರ್ವರೂ ಮುಕ್ತಿ ಸಂಪಾದಿಸಿದರು.

* ಸತ್ಯೇಂದ್ರಭೂಪನಿಗೆ ದೀಕ್ಷೆ-ರಕ್ಷೆ: ಮಾನವ ಕುಲಕೋಟಿಯ ಸಂರಕ್ಷಣೆಯಲ್ಲಿ ನಿರತರಾಗಿದ್ದ ಮಹಾನ್ ಚೇತನಾಶೀಲ ಸಂಜೀವಿನಿ ಶ್ರೀ ಜಗದ್ಗುರು ರೇಣುಕ ಭಗವಾನರು ಆರ್ಯ ವೈಶ್ಯ, ಶೂದ್ರ, ಕ್ಷತ್ರೀಯರಾದಿಯಾಗಿ ಸಕಲರಿಗೂ ಲಿಂಗದೀಕ್ಷೆಯಿತ್ತು, ಹರಸುತ್ತ ಹರನಾಮ ಸ್ಮರಣೆಯಲ್ಲಿ ಮೊಳಗಿರಲು ಸತ್ಯೇಂದ್ರಭೂಪನಿಗೆ ಗುರುಕಾರುಣ್ಯ ನೀಡಿ ಆತನಿಗೂ ಆತನ ಕುಟುಂಬಕ್ಕೂ, ರಾಜ್ಯದ ಪ್ರಜೆಗಳಿಗೂ ಲಿಂಗದೀಕ್ಷೆ ನೀಡಿ ಧರ್ಮೋಪದೇಶವನ್ನು ಮಾಡಿ ಧರ್ಮಗಂಗೋತ್ರಿಯನ್ನು ಹರಿಸಿ ವೀರಶೈವ ಧರ್ಮ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದರು. ನಿತ್ಯದ ಕಾಯಕದೊಟ್ಟಿಗೆ ಸತ್ಯ ಧರ್ಮ ಪರಿಪಾಲನಾ ವ್ರತಗಳನ್ನು ಕಟ್ಟುನಿಟ್ಟಿನಿಂದ ಆಚರಿಸುವಂತೆ ಆದೇಶವಿತ್ತು ಸತ್ಯೇಂದ್ರಭೂಪನ ಹೆಂಡತಿ ಸುಶೀಲೆ, ಮಗ ಶಿವಶರ್ಮನಿಗೆ ಧರ್ಮಾಚಾರವನ್ನು ಪರಿಪಾಲಿಸುವಂತೆ ಅನುಗ್ರಹವಿತ್ತು, ಬಂದೊದಗಿದ ಆಪತ್ತನ್ನು ನಿವಾರಿಸಿ ಸಂತುಷ್ಠ ಬದುಕನ್ನು ದಯಪಾಲಿಸಿ ರಕ್ಷೆಗೊಳಿಸಿ ರಕ್ಷಾಕವಚವಾದರು.

ಓಹಿಲನಿಗೆ ಒಲಿದ ಪರಮಾಚಾರ್ಯರು: ಗುರುಕೃಪಾ ಸಿರಿಮುಂದೆ ಇನ್ನಾವ ಸಿರಿಯೂ ಇಲ್ಲ ಎಂಬುದನ್ನು ಸಾರಿದ ಓಹಿಲನು ಶಿಖಾವತಿ ಎಂಬ ಪಟ್ಟಣ ವಾಸಿಯಾಗಿದ್ದನು. ಈತನು ದಿನವೂ ಇಷ್ಟಲಿಂಗಧಾರಿಯಾಗಿ ಆಚಾರ ವಿಚಾರಗಳನ್ನು ಪರಿಪಾಲಿಸುತ್ತ ಪರಂಪರಾ ಬದ್ಧನಾಗಿ ಅಲ್ಲಿನ ಶ್ರೀ ಭೀಮೇಶ್ವರಲಿಂಗದ ಸೇವನೆ ಮಾಡುತ್ತ ಧೂಪದ ಕಾಯಕವಂತನಾಗಿದ್ದನು. ಈತನ ಭಕ್ತಿ-ಪರಾಕಾಷ್ಠೆಗಳನ್ನು ಮನ್ನಿಸಿದ ಶ್ರೀ ಜಗದ್ಗುರು ರೇಣುಕರು ದಿನವೂ ತನ್ನ ಕಾಯಕವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಬಿಡದೇ ನಡೆಸಿ ನಿಷ್ಠೆ-ಶೃದ್ಧೆಯಿಂದ ನಡೆಯುವಂತೆ ಆದೇಶಿಸಿದರು. ತರುವಾಯ ಓಹಿಲನು ನಿಷ್ಠಾಪೂರ್ವಕ ಇನ್ನಷ್ಟು ಪುಷ್ಠಿಯಿಂದ ಧೂಪದ ಸೇವೆಗೆ ಅಣಿಗೊಂಡನು. ಅಲ್ಲದೇ ಬೇರೆ ಬೇರೆ ದೇಶಗಳಿಂದ ಧೂಪದ ಸಲಕರಣೆಗಳನ್ನು ತಂದು ಭಗವಂತನಿಗೆ ಅರ್ಪಿಸುವುದಾಗಿ, ದೈವಪ್ರೇಮ ಹೊಂದಿದನು. ಇದನ್ನು ಸಹಿಸದ ದೇವೇಂದ್ರನು ಈತನ ಪರೀಕ್ಷೆಗಾಗಿ ಪರಿಪರಿಯಿಂದ ಪೀಡಿಸಿದರೂ, ಕಾಡಿಸಿದರೂ ಛಲಬಿಡದೇ ಶ್ರೀ ರೇಣುಕ ಜಗದ್ಗುರುವಿನ ಆದೇಶಾಶೀರ್ವಾದವನ್ನು ಪಾಲಿಸುತ್ತ ಒದಗಿದ ಕಷ್ಟವನ್ನು ಬಲು ಇಷ್ಟದಿಂದಲೇ ಸ್ವೀಕರಿಸಿ ತನ್ನ ಕಾಯಕವನ್ನು ಇನ್ನಷ್ಟು ಬಲಿಷ್ಠಗೊಳಿಸಿದನು. ಇವನ ನಿಷ್ಠಾಭಕ್ತಿಯ ಕೈಂಕರ್ಯಕ್ಕೆ ಸೋತ ದೇವೇಂದ್ರನು ಮರಗಿ ಮರಳಿದನು. ಓಹಿಲನ ಗುರುನಿಷ್ಠೆ, ಭಕ್ತಿ, ನಂಬಿಕೆಗಳು ಫಲಿತಗೊಂಡವು. ಆತ ಜಗದ್ವಿಖ್ಯಾತನಾಗಿ ಮಹಾಗುರುವಿಗೆ ಋಣಿಯಾಗಿ ಸೇವಾತತ್ಪರನಾದನು.

* ಮಣಿಭದ್ರ-ದಮಯಂತಿಯರಿಗೆ ಹಾರೈಕೆ: ಶಿವಭಕ್ತನೂ, ಸಂಘಜೀವಿಯೂ ಆಗಿದ್ದ ಮಣಿಭದ್ರನು ಕೇತುಮಾಲಾ ಎಂಬ ಪಟ್ಟಣವನ್ನು ಅತ್ಯಂತ ಶ್ರದ್ಧಾ-ನಿಷ್ಠೆಯಿಂದ ಪ್ರಜಾಪರಿಪಾಲಕನಾಗಿ ಆಳುತ್ತಿದ್ದನು. ಈತನ ಹೆಂಡತಿ, ದಮಯಂತಿ, ಇವರೀರ್ವರೂ ಶಿವಾರಾಧನೆಯಲ್ಲಿ ಮೊಳಗಿ ಮುಕ್ತಿಮಾರ್ಗಕ್ಕಾಗಿ ಕಾಯುತ್ತಿರಲು ಶಿವನಿರ್ಣಯವೆಂಬಂತೆ ವೀರಶೈವ ಧರ್ಮ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಈ ಪಟ್ಟಣಕ್ಕಾಗಮಿಸಿ ಸರ್ವರನ್ನೂ ಪವಿತ್ರಗೊಳಿಸಿ ಅವರುಗಳಿಗೆಲ್ಲ ಲಿಂಗದೀಕ್ಷೆಯಿತ್ತುದಲ್ಲದೇ ವೀರಶೈವಾಚಾರ ಸಂಪನ್ನತೆಯನ್ನು, ಧರ್ಮಾರ್ಥವನ್ನು, ಧರ್ಮದಾಳವನ್ನೂ ಬೋಧಿಸಿ, ಧರ್ಮದ ಜಾಗೃತಿ ಮತ್ತು ಪ್ರಸಾರಕ್ಕೋಸ್ಕರವಾಗಿ ಸಂಘ-ಸಂಸ್ಥೆಗಳನ್ನು ಕಟ್ಟಲು ಪ್ರೇರಣಾಶೀರ್ವಾದವನ್ನು ಮಾಡಿ ಸಂಘಟನೆಗೊಳಿಸಿದರು. ತರುವಾಯ ಇದರ ಪ್ರಭಾವದಿಂದಾಗಿ ರಾಜ್ಯದ ಪ್ರಜೆಗಳೆಲ್ಲ ಪ್ರಭಾವದ ಪ್ರಜ್ಞೆಯಲ್ಲಿ ಶ್ರೀ ಸನ್ನಿಧಿಯಿಂದ ದೀಕ್ಷಾವಂತರಾಗಿ ನಿಜತತ್ತ್ವ, ಧರ್ಮಾಚರಣೆಗಳನ್ನು ಅಳವಡಿಸಿಕೊಂಡು ಸೇವೆಗೆ ಸನ್ನದ್ಧರಾದರು. ದಮಯಂತಿಯು ತನ್ನ ತನುವನ್ನು ಸಂಪೂರ್ಣ ಸಂಘಟನೆಯಲ್ಲಿ ಅರ್ಪಿಸಿ ಸೇವಾಕಾಂಕ್ಷಿಯಾಗಿ ಕಾಯಕವೆಸಗುತ್ತಿರಲು, ಅನೇಕ ಮಹಿಳೆಯರು ಇವಳ ಆದರ್ಶನೀಯತೆಗೆ ಮಾರುಹೋಗಿ ಶ್ರೀ ಜಗದ್ಗುರುಗಳವರಿಂದ ದೀಕ್ಷೆಗೊಳಗಾಗಿ ಧರ್ಮ ಸಂಸ್ಕೃತಿ ಕಟ್ಟುವಲ್ಲಿ ನಿರತರಾದರು. ಮಣಿಭದ್ರ ಮತ್ತು ದಮಯಂತಿಯರು ರೇಣುಕರ. ಅಭಯಾಶೀರ್ವಾದದ ಅಣತಿಯಂತೆ ಅರಿವನ್ನು ಅಕ್ಷಯವನ್ನಾಗಿಸಿಕೊಂಡು ಧರ್ಮಜ್ಞಾನವನ್ನು ಹಂಚತೊಡಗಿದರು. ಅಭಿಲಾಷೆಯನ್ನು ಮನಗಂಡ ಶ್ರೀ ಸನ್ನಿಧಿ ಮನದುಂಬಿ ಹಾರೈಸಿ ಇವರ ಅಜರಾಮರರಾಗುಳಿಸಿದರು. ಇವರೀರ್ವರ ಕೀರ್ತಿವಾರ್ತೆಯನ್ನು

* ವಿಡಂಬ-ಸುಶೀಲೆಯರಿಗೆ ಅಭಯದ ಅಕ್ಷಯ: ಪುಣ್ಯವತಿ ರಾಜ್ಯದ ರಾಜನಾದ ವಿಡಂಬನ ಕೋರಿಕೆಯ ಮೇರೆಗೆ ರಾಜ್ಯಕ್ಕೆ ಮಹಾಸನ್ನಿಧಿ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರನ್ನು ಬಿನ್ನಯಿಸಿ, ದಯಮಾಡಿಸಿಕೊಂಡು ಪಾದಪೂಜಾದಿಗಳನ್ನು ನೆರವೇರಿಸದನು. ಕೆಲವು ಸೇವಿಸಿ. ಪ್ರೀತ್ಯರ್ಥನಾದನು. ಇವರೀರ್ವರ ಸೇವಾ ಸಂಪನ್ನತೆಯನ್ನು ಮನ್ನಿಸಿದ ಮಹಾಚಾರ್ಯರು ವಿಡಂಬ ಮತ್ತು ಸುಶೀಲೆಗೆ ಅತಃಕರಣದ ಆಶೀರ್ವಾದ ಮಾಡಿ ಹರಸಿದರು. ನಿತ್ಯದ ರಾಜ್ಯಭಾರ ಕಾಯಕದೊಟ್ಟಿಗೆ ಹಸಿದು ಬಂದವರಿಗೆ ಪ್ರಸಾದ ಸೇವೆ ಸೇವೆಯನ್ನು ಮಾಡುವಂತೆ ಆಜ್ಞೆ ಮಾಡಿದರು. ಶ್ರೀ ಗುರುವಿನ ಆಶಯಾಶೀರ್ವಾದವನ್ನು ಶಿರೋಧಾನವಾಗಿಸಿಕೊಂಡ ದಂಪತಿಗಳು ಅನುದಿನವೂ ವೀರಮಾಹೇಶ್ವರರಿಗೆ, ಶಿವಭಕ್ತ-ಬಾಂಧವರಿಗೆ, ಶಿವಗಣಂಗಳಿಗೆ, ರಾಜ್ಯದ ಪ್ರಜೆಗಳಿಗೆ ಪ್ರಸಾದ ಮಾಡಲಾರಂಭಿಸಿದರು. ಈ ವಾರ್ತೆ ಸುತ್ತಲ ದೇಶಗಳಿಗೆ ಹಬ್ಬಿ ಖ್ಯಾತಿ ವಿಸ್ತಾರಗೊಂಡಿತು. ಈ ದಂಪತಿಗಳ ಸೇವಾ ಹಂತದ ವಾಷಾಸುರನೆಂಬುವನು ಪ್ರಸಾದ ಸೇವೆಗೆ ವಿಧವಿಧವಾಗಿ ತೊಡಕುಂಟು ಮಾಡುತ್ತಿರಲು, ವಿಡಂಬನು ಶ್ರೀ ಗುರು ರೇಣುಕರ ಸ್ಮರಣೆಯನ್ನು ಮಾಡಿ ಆತನ ಅಟ್ಟಹಾಸವನ್ನು ಅಂತ್ಯಗೊಳಿಸಿದನು. ಇದರಿಂದಾಗಿ ವಿಡಂಬ ಇನ್ನಷ್ಟು ತನ್ನ ಕ್ರಿಯಾವ್ಯಾಪ್ತಿಯನ್ನು ಹೆಚ್ಚಿಸಿ, ಸುಶೀಲೆಯೊಡನೆ ದಾಸೋಹ ಮಹಿಮೆಯನ್ನು ನಾಡವರಿಗೆ ಹಂಚುತ್ತ ಮುಕ್ತಿ ಹೊಂದುವನು.

ಕೃಷಿಕ್ರಾಂತಿ: ಯುಗಾರಂಭದಲ್ಲಿ ಜೀವಿಯ ಜೀವನದ ಜಾಗೃತಿಗೋಸ್ಕರವಾಗಿ ಹಸಿರು ಕ್ರಾಂತಿಯನ್ನೇ ಮೊದಲಾಡಿ ನೂರೆಂಟು ಕ್ರಿಯಾಕ್ರಾಂತಿಗೈದ ಪ್ರಥಮ ಕೃಷಿಪುಂಗವಾಚಾರ್ಯರು ಶ್ರೀ ಜಗದ್ಗುರು ರೇಣುಕಾಚಾರ್ಯರು, ಏನೊಂದೂ ತಿಳಿಯದ ಮಾನವನಿಗೆ ವಿಕಾಸ ಸತ್ಪಥದ ತತ್ತ್ವವನ್ನು ಅರಿಯುವಂತೆ ಮಾಡಿ, ಭೂಮಿಯಲ್ಲಿ ಮುಮ್ಮೊದಲು ಮಣ್ಣಿಗೆ ಸಂಸ್ಕಾರ ನೀಡಿ, ಹದ-ಮಿದಗೊಳಿಸಿ ತಮ್ಮ ತಪೋಬಲದಿಂದ ಅಂಕುರವನ್ನು ಸೃಷ್ಠಿಸಿ ಉತ್ತುವ, ಬಿತ್ತುವ, ಬೆಳೆಯುವ, ಒಕ್ಕುವ, ಉಣ್ಣುವ ಹಂತಗಳನ್ನು ಪ್ರಾಕಾರಗೊಳಿಸಿ ಜನಸಮುದಾಯದಲ್ಲಿ ಕೃಷಿ ಕಾಯಕದ ಜಾಗೃತಿಯನ್ನು ತುಂಬಿ ಬದುಕಿಗೆ ಬೇಕಾದ ಅವಶ್ಯಕ ಆಹಾರ ಧಾನ್ಯ-ದವಸಗಳನ್ನು ಪರಿಣಾಮಗೊಳಿಸುವಂತೆ ಮಾಡಿದ ಪೃಥ್ವಿಯೊಡೆಯರು, ಕಾಯಕದ ಮಹತ್ವ, ಪ್ರಸಾದದ ಮಹತಿಯನ್ನು ಸಾರಿದರು. ಹಸಿರು ಮಾನವನಿಗೆ ಉಸಿರು ಎಂದರು. ಕಾಯಕದಿಂದಲೇ ಕಳಾ ಚೈತನ್ಯದ ಬದುಕು ಎಂಬುದನ್ನು ಸಾಧ್ಯವಾಗಿಸಿದರು. ದುಡಿಯದೇ ತಿನ್ನುವ ಹಕ್ಕು ಯಾರಿಗೂ ಇಲ್ಲವೆಂದು ಆದೇಶಿಸಿ, ಕೃಷಿಯ ಮೂಲಕ ಲೋಕದ ಜನರಿಗೆ ಅನ್ನ ನೀಡುವ ಕಾರ್ಯಕ್ಕೆ ಅಣಿಗೊಳಿಸಿ, ಸರ್ವಾಧಾರಕ್ಕೂ ಸೌಕರ್ಯವಿತ್ತು ರೈತ ಸಂಕುಲಕ್ಕೆ ಆಮ್ಲಜನಕವಾದರು. ಅಂತೆಯೇ ಕೃಷಿಯ ಋಷಿ ಶ್ರೀ ಜಗದ್ಗುರು ರೇಣುಕ ಮಹಾಚಾರ್ಯರು ಲೋಕದ ಕೃಷಿ ಕಾಯಕಕ್ಕೆ ನಾಯಕರೆನಿಸಿ ಒಕ್ಕಲು ಮಕ್ಕಳ ಆದಿ ಆದ್ಯ ಗುರುವೆನಿಸಿದರು.

* ಅಷ್ಟಾದಶ ಮಠಗಳ ಸ್ಥಾಪನೆ: ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಲ್ಲಿಪಾಕಿಯಲ್ಲಿ ಕುಲ ಹದಿನೆಂಟು ಜಾತಿಯ ಜನಾಂಗದವರಿಗಾಗಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿ ಶಿವಬೆಳಕನ್ನು ಬಿತ್ತರಿಸಲೋಸುಗ ಹದಿನೆಂಟು ಮಠಗಳ ಸ್ಥಾಪನೆಗೆ ಮುಂದಾದರು. ಸಂಘಟನಾತ್ಮಕವಾಗಿ ಜನರಲ್ಲಿ ಧರ್ಮಪ್ರಜ್ಞೆ, ಸಾಮಾಜಿಕ ಕಳಕಳಿ ಮತ್ತು ಜಾಗೃತ ಬದುಕನ್ನು ಉಂಟು ಮಾಡುವಲ್ಲಿ ಸಮಾಜಕ್ಕೆ ಅಂಟಿದ ಅನಿಷ್ಠ ಪದ್ಧತಿ, ಆಚರಣೆಗಳನ್ನು ತೆಗೆದುಹಾಕಿ ಸಮಾನತೆಯ ಸದ್ಭಾವ ಸಾಮರಸ್ಯ ಬೆಳೆಸುವ ಸಂಕಲ್ಪದಲ್ಲಿ ಗಟ್ಟಿ ಹೆಜ್ಜೆಗಳನ್ನಿಟ್ಟು ಪರಿವರ್ತನಾಶೀಲ ಸಮಾಜ ನಿರ್ಮಾಣಕ್ಕೆ ಕಂಕಣಬದ್ದರಾದರು. ಆಧ್ಯಾತ್ಮಿಕತೆಯ ನೆಲೆಯಲ್ಲಿ ಶಿವಪಥವನ್ನು ಅರುಹುವ ನಂಬಿಕೆಯಲ್ಲಿ ಸರ್ವರಿಗೂ ದೀಕ್ಷೆಗಳನ್ನು ನೀಡಿ, ಮೋಕ್ಷತ್ವದ ಹಾದಿಯನ್ನು ತೋರುವ ಸದುದ್ದೇಶದಿಂದ ತಾವು ಪ್ರಾದುರ್ಭವಿಸಿದ ಕೊಲ್ಲಿಪಾಕಿಯ ಸ್ವಯಂಭೂ ಶ್ರೀ ಸೋಮೇಶ್ವರ ದೇಗುಲದ ಸುತ್ತಮುತ್ತಲಿನ ಪ್ರಾಂತ ಪ್ರದೇಶದಲ್ಲಿ ಮಠಗಳನ್ನು ಕಟ್ಟಿದರು. ಅವೆಂತೆಂದರೆ: ಮಾದಿಗ ಮಠಂ, ಪೆದ್ದ ಮಠಂ, ಕೋಮಟ್ಟ ಮಠಂ, ಕಾಪುಲ ಮಠಂ, ಗೊಲ್ಲ ಮಠಂ, ಗೌಂಡ್ಲ ಮಠಂ, ಸಾಲೇ ಮಠಂ, ಕುಮ್ಮರಿ ಮಠಂ, ಪಂಚರಾಯಣ ಮಠಂ, ಪೆರಿಕ ಮಠಂ, ಮೇದರಿ ಮಠಂ, ಚಾಕಲಿ ಮಠಂ, ಸಂಗರಿ ಮಠಂ, ಮೇರ ಮಠಂ, ಜಾಂಡ್ರ ಮಠಂ, ಕರ್ಮ ಮಠಂ, ಶಂಬರಿ ಮಠಂ, ಮೂಲ ಮಠಂ, ಈ ಹದಿನೆಂಟು ಮಠಗಳು ಶಾಸನೋಕವಾಗಿರುವುದು ವಿಶೇಷ. ಪೆದ್ದಮಠದಲ್ಲಿ ದೊರಕಿದ ತಾಮ್ರ ಶಾಸನ (ಕ್ರಿ. ಶ. 1221) ದಲ್ಲಿ ಈ ಅಷ್ಟಾದಶ ಮಠಗಳ ಹೆಸರು ಕಂಡು ಬರುತ್ತವೆ. ಇದರಲ್ಲಿ ಪಂಚರಾಯಣ ಮತ್ತು ಮೇರ ಮಠಗಳು ಹೆಚ್ಚಿನ ಮಠಗಳಾಗಿವೆ.

ಹೀಗೆ ಜಗದ್ಗುರು ರೇಣುಕರು ಜಗಮೆಚ್ಚುವ ಉದ್ಯೋಗ ಕೈಗೊಂಡು ಜಗದೋದ್ಧಾರ ಮಾಡಿದ್ದರಲ್ಲದೇ, ಸರ್ವರ ಏಳೆಗೆ ಕಂಕಣಬದ್ಧರಾಗಿ ನಿಂತರು. ಜಗದ ಇತಿಹಾಸದಲ್ಲಿ ಸಕಲ ಕುಲದವರನ್ನು ತನ್ನಂತೆ ಬಗೆದು ಮುಕ್ತಿದಾರಿಯನ್ನು ಅರುಹಿದ ಹಿರಿಮೆ ಅವರದು. ಗುರುಶ್ರೇಷ್ಠ ಪ್ರತಿಷ್ಠಿತ ಪೂಜ್ಯಪಾದರಾದ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು ತೋರಿದ ಲೀಲೆಗಳು ಅನೇಕ. ಅವರದು ಅನಂತದ ಅಗಮೃತರವಾದ ಶಕ್ತಿ ಅಗೋಚರವಾದ ಯುಕ್ತಿ, ಚರಾಚರವನ್ನೂ ಉದ್ಧರಿಸಬಲ್ಲ ಚಿನ್ನಯ ಚೈತನ್ಯ, ಸತ್ಯ ಶಿವ ಲಾವಣ್ಯ, ಶಾಶ್ವತವೂ, ಶಾಂತವೂ, ನಾದಬಿಂದು ಕಲಾತೀತವೂ ಆದ ಧೀಚೈತನ್ಯ. ಶಿವಾತವನ್ನು ‘ನ ವೀರಶೈವ ಸದೃಶಂ ಮತ ಮಸ್ತಿ ಜಗತ್ರಯೇ’ ಎಂದೆನಿಸಿದ ಹಿರಿಮೆಯದು. ಶ್ರೀ ಸನ್ನಿಧಿ ರಸಮಯ ಚಿತ್ಕಳಾ ವಿಭೂತಿ ಪುರುಷರು. ಅವರ ಆ ಚಿಚ್ಛರಣರೇಣು ಮಹಿಮೆ ಮಹಂತ, ಅವರು ಆ ಚಿದ್ವಿಭೂತಿ ರೇಣುವುಳ್ಳವರಾಗಿ ರೇಣುಕರು ಎಂದೂ ಎಂದೆಂದೂ, ಎಲ್ಲೆಡೆಯೂ, ಎಲ್ಲೆಡೆಗೂ ಸಲ್ಲುವ ಸಿದ್ಧಾಂತ-ಸೈದ್ಧಾಂತ ತೇಜೋಮೂರ್ತಿಗಳಾಗಿದ್ದಾರೆ. ಅದಕ್ಕಾಗಿಯೇ ‘ರೇಣುರಸ್ಯಾಪ್ತಿತಿ ರೇಣುಕಃ’ ಎಂಬ ವಿಶೇಷಣವು ಅನ್ವರ್ಥಕವಾಗುವುದು.

ಈಕಾರೋ ಗುರುರೂಪಂಚ ಲಿಂಗರೂ ಕಾರಕಂ |

ಕಕಾರೋ ಜಂಗಮಶ್ಲೇಷೋ ಗುರುಲಿಂಗ ಚರಾತ್ಮಕಂ |

ಸದ್ರೂಪರೂ, ಚಿದ್ರೂಪರೂ. ಆನಂದ ರೂಪರೂ ಆಗಿರುವ ಶ್ರೀ ರೇಣುಕ ಜಗದ್ಗುರುಗಳು ಕಾರುಣ್ಯಮೂರ್ತಿಗಳಾಗಿ ಅನುಗಾಲದ ಅಭಯವನ್ನು ಮಾನವ ಕುಲಕ್ಕಿಟ್ಟು ವೀರಪರಂಪರೆಯ ಸಿರಿಯ ಮೂಲಕ ಬೆನ್ನೆಲುಬಿನ ಶಕ್ತಿಯಾಗಿ ಧರ್ಮ ದರ್ಶನಗಳು ವಾಷಿಯನು ಹಿಗ್ಗಿಸಿ, ಭಕ್ತಿ ಮುಕ್ತಿಗಳೆರಡನ್ನೂ ಸಮನಾಗಿಸಿ, ಬೇಧ ಭಾವಗಳನ್ನಇದು ಭಗವದ್ ಚಿಂತನೆಗಳ ಸಿರಿದಾರಿಯನ್ನು ತೋರಿದ ಕರುಣಾಳು, ಅವರ ಕ್ರಿಯಾಸಾರ ಸಾಗರ, ಸಾಧನೆ-ಬೋಧನೆ ಅಗೋಚರ. ಅವರ ತತ್ತ್ವಾದರ್ಶದ ಚಿಂತನೆಗಳು ನಿರಂತರ. ಅದುವೇ ವೀರಶೈವ ಧರ್ಮದಲ್ಲಿ ಹೊಸ ಮನ್ವಂತರ.

ಕಲಿಯುಗ

ಶ್ರೀ ಮದ್ರೇವಣಸಿದ್ಧಸ್ಯ ಕುಲ್ಯಪಾಕ ಪುರೋತ್ತಮೇ | ಸೋಮೇಶಲಿಂಗಾಜ್ಜನನ ಮಾವಾಸ: ಕದಲೀಪುರೇ | ಸ್ವಯಂಭುವಾಗಮ.

ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದಾಚಾರ್ಯರು ಕಲಿಯುಗದ ಆರಂಭದಲ್ಲಿ ಕೊಲ್ಲಿಪಾಕಿ ಸೋಮೇಶ್ವರ ಲಿಂಗದಲ್ಲಿ ಅವತರಿಸಿ, ಏಳುನೂರು ವರ್ಷಗಳ ಪರ್ಯಂತರ ವ್ಯಕ್ತವಾಗಿ, ಏಳುನೂರು ವರ್ಷಗಳ ಪರ್ಯಂತರ ಅವ್ಯಕ್ತರಾಗಿ ಸಂಚರಿಸಿ ವೀರಶೈವ ಧರ್ಮ ಸಂಸ್ಕೃತಿಯನ್ನು ಬೆಳೆಸಿದುದರ ಪರಿಯನ್ನು ಶಿವಾಗಮಗಳು ಸಾರುತ್ತವೆ. ಅಣಿಮಾದಿ ಅಷ್ಟಸಿದ್ಧಿಗಳನ್ನು ಪಡೆದ ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದರು ಅದ್ಭುತವಾದ ಕ್ರಿಯಾ ಕ್ರಾಂತಿಗಳನ್ನೇ ಮಾಡಿದ್ದಾರೆ. ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಸಾರ್ವಭೌಮತ್ವದ ಇತಿಹಾಸದಲ್ಲಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದಾಗಿದೆ. ಶ್ರೀ ಜಗದ್ಗುರು ರೇವಣಸಿದ್ದರು ಎಂಬ ನಾಮಾಂಕಿತದಲ್ಲಿ ಹಲವಾರು ಪರಮಾಚಾರ್ಯರು ಶ್ರೀ ಪೀಠವನ್ನು ಆರೋಹಣ ಮಾಡಿ ಆಯಾ ಕಾಲಘಟ್ಟಗಳಲ್ಲಿ ಜನಮನದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದ್ದಾರೆ. ಅಂದಂದು ಬಂದು ಹೋಗಿರುವ ಶ್ರೀ ರೇವಣಸಿದ್ದಾಚಾರ್ಯ ಜಗದ್ಗುರುಗಳು ಒಬ್ಬರೇ ಅಲ್ಲ. ಬೇರೆ

ಬೇರೆ ಇದ್ದರೆಂಬುದರ ಇತಿಹಾಸವನ್ನು ಪ್ರತಿಯೊಬ್ಬರೂ ಶ್ರೀ ಪೀಠದ ಪಟ್ಟವಲ್ಲರಿಯಿಂದ ತಿಳಿದುಕೊಳ್ಳಬಹುದಾಗಿದೆ. ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದರು ಕಾರ್ಯನಿಷ್ಠೆಯ ಕ್ರಾಂತಿ ಅಗಣಿತ, ಅವರ ಸಾಧನೆ ಶಿರೋನಾಮೆ

ಅಪರಿಮಿತ. ಶ್ರೀ ರಂಭಾಪುರಿ ಮಹಾಪೀಠದ ಭವ್ಯ ಪರಂಪರೆ, ಗೋತ್ರ ಸೂತ್ರ, ಸಿಂಹಾಸನ ವಿವರಣೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಬಹಿಷ್ಕೃತರಾಗಿದ್ದ ಶೂದ್ರರಿಗೂ ಸಹಿತ ಸಾಮಾಜಿಕ ನ್ಯಾಯ ದೊರಕಿಸಿದ್ದಲ್ಲದೇ, ಜಗದ್ಗುರುಗಳೆಂಬ ಬಿರುದು ಈ ಪರಂಪರೆಗೆ ಅನ್ವಯಗೊಂಡಿರುವುದನ್ನು ಪಾಶುಪತಾಗಮವು ಉಗ್ಗಡಿಸಿದಂತೆ, ಸುಪ್ರಭೇದಾಗಮವೂ ಸಹ ಈ ರೀತಿ ಉಲ್ಲೇಖಿಸಿದೆ.

ವೀರಗೋತ್ರಾಧಿನಾತತ್ತ್ವ ಸಿಂಹಾಸನ ಪತಿಶ್ಚಯ: 1

ರೇವಣಾರಾಧ್ಯ ಸನ್ನಮಾ ಜಗದ್ಗುರು ತಮಶ್ಚಸ: #

ಕಲಿಯುಗದಲ್ಲಿ ರೇವಣಸಿದ್ಧ ಅಥವಾ ರೇವಣಾರಾಧ್ಯ ನಾಮಾಂಕಿತರಾಗಿ ಸಮಾನ ಪೀಠಾಚಾರರಾದ ಮರುಳಾರಾಧ್ಯ,

ಏಕೋರಾಮಾರಾಧ್ಯ. ಪಂಡಿತಾರಾಧ್ಯ ಮತ್ತು ವಿಶ್ವಕರ್ಣಾರಾಧ್ಯರೊಡಗೂಡಿ ಬ್ರಹ್ಮ, ಕತೀಯ, ವೈಶ್ಯ, ಶೂದ್ರ ಮೊದಲಾದ ಮಾಡಿ, ಪಂಚಾಕ್ಷರಿ ಪ್ರಮುಖ ಹದಿನೆಂಟು ಜಾತಿಗಳ ನೂರೊಂದು ಕುಲಗಳಿಗೆ ಶಿವಾಮಯ ಲಿಂಗಧಾರಣೆ ಮಹಾಮಂತ್ರೋಪದೇಶದಿಂದ ಮೋಕ್ಷದಾರಿ ತೋರಿರುವುದು ಸುಪ್ರಭೇದಾಗಮದಲ್ಲಿ ಉಕ್ತಗೊಂಡಿದೆ.

ಕಲಿಯುಗೇ ರೇವಣಾರಾಧ್ಯ ಮರುಳಾರಾಧ್ಯ ಏಕೋ ರಾಮಾರಾಧ್ಯ ಪಂಡಿತಾರಾಧ್ಯ ವಿಶ್ವಾರಾಧ್ಯ ಇತಿನಾಮಸ ಮೇತೃ ಸ್ಮರೇವ ಪಂಚಾಚಾರೈ: ಬ್ರಹ್ಮಕತೀಯ ವೈಶ್ಯ ಶೂದ್ರ ಪ್ರಮುಖಾನಾಷ್ಟಾದಶ ಜಾತೇನೇಕ ಶತಕುಲಜಾನ್‌ ಮನುಷ್ಯನ ಶಿಲಾಮಯಲಿಂಗಂ ಧಾರಯಿತ್ವಾ ಪಂಚಾಕ್ಷ ಮುಪದಿಶ್ಯ ಮೋಕ್ಷ ಮಾಗರ್‌೦ ಪ್ರದರ್ಶಯ ಇತಿ ಸಾಕ್ಷಾ ತರಂ ಜ್ಯೋತಿ: ಪರಶಿವ ಕಾರ್ಯ ರುದ್ರಮುಪಾದಿಶತ್ ॥

ಎಂದಿರುವುದು ಸರ್ವಕಾಲಿಕ ಸತ್ಯವಾಗಿದೆ. ಪುರಾತನರ ಬೆಳಕಿನಲ್ಲಿ ಬೆಳೆದು ಬಂದ ಸಕಲ ಸಂಕುಲಗಳು ಇಂದಿಗೂ ಮೂಲ ಗುರುವಿನ ಸ್ಮರಣೆಯಲ್ಲಿ ಸಂತೃಪ್ತಿ ಕಾಣುತ್ತಿರುವುದು ಸಾಕ್ಷಿಯಾಗಿದೆ.

ಜಗದ ಜಾಡ್ಯವಳಿಸಲು ಮನುಜನ ಮೌಡ್ಯವನ್ನು ಮರ್ಧಿಸಲು ಹತ್ತು ಹಲವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸತ್ಕಾಂತಿಗಳನ್ನು ಮಾಡಿದ ಜೀವನೋದ್ಧಾರಕರು ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದರು ಎಂಬುದಾಗಿ ಮೂಲ ತತ್ತ್ವವನ್ನು ಸರ್ವಾಧಾರ ಸಮರ್ಥಗೊಳಿಸಿ ಮಾನವರೆಲ್ಲರೂ ಒಂದೇ ಆದಿ ಆರಾಧ್ಯರೆನಿಸಿಕೊಂಡರು. ಜಾತ್ಯಾತೀತ ಪರಿಕಲ್ಪನೆಯಡಿಯಲ್ಲಿ ಮೂಲತ್ವವನ್ನು ಸರ್ವಾಧಾರ ಸಮರ್ಥಗೊಳಿಸಿ ಮಾನವರೆಲ್ಲರೂ ಒಂದೇ ಎಂಬ ಸೂತ್ರದಡಿಯಲ್ಲಿ ಪವಿತ್ರವಾದ ವೀರಶೈವ ಧರ್ಮ ಸಂದೇಶ ಸಾರುತ್ತ ಸರುವರಿಗೂ ಸಕಲ ಸವಲತ್ತನ್ನಿತ್ತು ಅಸ್ಪಶೋದ್ಧಾರಕರೆನಿಸಿಕೊಂಡರು. ಒಬ್ಬ ಆದರ್ಶ ಜಗದ್ಗುರುವಾಗಿ ಬಂದ ಸಂಕಟ-ಕಂಟಕಗಳನ್ನು ತೊಳೆದು ಸಮಷ್ಟಿ ಪರಿಭಾವನೆಯನ್ನು ಜಾಗೃತಗೊಳಿಸಿದ್ದು ಇವರೊಳಗಿನ ಧೈಯ ಸಾಹಸವುಳ್ಳ ಕರ್ತೃತ್ವ ಶಕ್ತಿಯೇ. ಇವರ ಕ್ರಿಯಾ ಶಕ್ತಿಗೆ ಸಮನಾದ ಶಕ್ತಿ ಇನ್ನೊಂದಿಲ್ಲ.

ಮಾನವೀಯ ಸಂಬಂಧಗಳನ್ನು ಬೆಸೆಯುವಲ್ಲಿ ಭದ್ರಕಾರ್ಯವೆಸಗಿ ಅಸದಳವೆನಿಸಿದ ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದತ ಕ್ರಿಯಾ ಚರಿತ್ರೆಬಲು ದೊಡ್ಡದು. ಬೇಡಿದವರಿಗೆ ಬೇಡಿದಷ್ಟು ನೀಡಿದ ಮಹಾನ್ ಚೇತನಾಶಕ್ತಿ ಅವರದು. ಇಂತಹ ದಿವ್ಯ ಸಾತ್ವಿಕ ಶಿರೋಮಣಿಯ ಸತ್ ಚಿಂತನೆಗಳ ಸರಣಿ ಸಣ್ಣದಲ್ಲ. ಅದು ಸಾಗರ, ಅರಿವಿನ ಕಣ್ಮಣಿ ಮಾತ್ರ ಅದರ ಗೋಚರ. ಜಾಗೃತಿಯ ಕಾರ್ಯದಲ್ಲಿ ಅವರು ಕೈಗೊಂಡಿರುವ ಕೆಲವು ಸಾಧನಾ ಸಿರಿಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಶ್ರೀ ಶಂಕರಾಚಾರ್ಯರು ಭರತ ಖಂಡವನ್ನೆಲ್ಲ ಸಂಚರಿಸಿ ಪಂಚಪೀಠಗಳ ದರ್ಶನ ಹೊಂದಿ, ಮಲಯಾಚಲದ ತಪೋಭೂಮಿಯಲ್ಲಿ ಶಿವನನ್ನು ಕುರಿತು ಧ್ಯಾನಾಸಕ್ತಿರಾಗಿರಲು, ಶಿವ ಪ್ರೇರಣೆ ಎಂಬಂತೆ ಶ್ರೀ ಜಗದ್ಗುರು ರೇವಣಸಿದ್ಧ ಶಿವಾಚಾರ್ಯ ಭಗವತ್ಪಾದರು ಶಂಕರಾಚಾರ್ಯರ ಮನೋಭಿಲಾಷೆಯನ್ನರಿತು. ಶ್ರೀ ಚಂದ್ರಮೌಳೀಶ್ವರ ಲಿಂಗವನ್ನು ಮತ್ತು ರತ್ನಗರ್ಭಗಣಪತಿ ವಿಗ್ರಹವನ್ನು ದಯಪಾಲಿಸಿದರು. ಈ ಸಂದರ್ಭಾ ನಂತರ ಶ್ರೀ ಶಂಕರಾಚಾರ್ಯರು ಶಿವಗೀತೆಯೊಂದನ್ನು ರಚಿಸಿ ಮನದುಂಬಿ ಹಾಡುವರು, ಅಲ್ಲಿಂದ ಕಾಂಚೀ ಕ್ಷೇತ್ರಕ್ಕೆ ತೆರಳುವ ಮುನ್ನ ತಮ್ಮ ಶಿಷ್ಯರಿಗೆ ಶ್ರೀ ಚಂದ್ರಮೌಳೀಶ್ವರ ಲಿಂಗ ಮತ್ತು ರತ್ನಗರ್ಭ ಗಣಪತಿಯನ್ನು ಸೇವಿಸಲು ಆದೇಶಿಸಿ, ಅದರ ಹಿರಿಮೆ ಮತ್ತು ಮಹಿಮೆಯನ್ನು ಅನುಗ್ರಹ ಹೊಂದಿದ ಪರಿವೆಯನ್ನು ಬೋಧಗೊಳಿಸಿ ಮುನ್ನಡೆದರೆಂಬಿತ್ಯಾದಿ ವಿಷಯಗಳು ಶೃಂಗೇರಿಯ ಶ್ರೀ ಮಠದ ‘ಗುರುವಂಶ ಕಾವ್ಯ’ದಲ್ಲಿ ನಿರೂಪಿಸಲ್ಪಟ್ಟಿವೆ.

ಶ್ರೀ ಚಂದ್ರಮೌಳೀಶ್ವರಲಿಂಗಮಸ್ಯೆ |

ಸದ್ರತ್ನಗರ್ಭಂ ಗಣನಾಯಕಂ ಚ ॥

ಸ ವಿಶ್ವರೂಪಾಯ ಸುಸಿದ್ಧದತ್ತಂ |

ದತ್ವಾ ನ್ಯಗಾದೀಚ್ಚರ ಮರ್ಚಯೇತಿ ॥ 33 ॥

ಸರೇಶ್ವರಾಚಾರ ಸರಸ್ವತೀಂ ತ್ವಂ ।

ಸಂಪೂಜಯನ್ನಾ ಸ್ವ ಚಿರಾದಿಹೇತಿ ॥

ದಾನುಜ್ಞಾಂ ವಿನತಾಯ ತಸ್ಕೃ |

ಮೇಲಿನ ‘ಸುಸಿದ್ಧದತ್ತಂ’ ಎಂಬ ಪದಕ್ಕೆ –

‘ಸುಸಿದ್ಧವ ರೇವಣಸಿದ್ಧ ಮಹಾಯೋಗಿನಾ ದತ್ತಂ । ಶ್ರೀ ಚಂದ್ರಮೌಳೀಶ್ವರ ಲಿಂಗಂ ಸದ್ರತ್ನಗರ್ಭಂ ಸದ್ರತ್ನಂ ಮಾಣಿಕ್ಯಂ ಗರ್ಭೇ ಯಸ್ಯ ಸಃ ತಥೋಕ್ತಸ್ತಂ ಗಣನಾ ಯಕಂ ಚ’

ಎಂದು ಈ ಗ್ರಂಥವನ್ನು ರಚಿಸಿದ ಕವಿಗಳೇ ಸಂಸ್ಕೃತದಲ್ಲಿ ವ್ಯಾಖ್ಯಾನವನ್ನು ಬರೆದಿದ್ದಾರೆ. ಅಲ್ಲದೇ ಹಲವು ಆಂಗ್ಲ ಭಾಷಾ ಕೃತಿಗಳಲ್ಲೂ ಇದನ್ನು ಪ್ರಸ್ತಾಪಿಸಿದ್ದಾರೆ. ಪುರಾತನರಾಗಿ, ಪುಂಗವ ಪ್ರೇರಕರಾಗಿ, ಶಿವಮಹಿಮೆಯನ್ನು ಸಾರಿದ ಸನಾತನಿಗಳಿವರು ಎಂಬುದಾಗಿ ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದರ ವರ್ಣನೆಯನ್ನು ಮಾಡಿರುವರು.

ನೀರಿನಲ್ಲಿ ನಡೆಯುವ, ಗಾಳಿಯಲ್ಲಿ ಚಲಿಸುವ, ಬೆಂಕಿಯಲ್ಲಿ ಕೂಡುವ, ಭೂಮಿಯನ್ನೇ ಅಂಗೈಯಲ್ಲಿ ಹಿಡಿಯುವ, ಆಕಾಶವನ್ನೇ ಶಿರದ ಮೇಲೆ ಹೊರುವ ಕ್ರಿಯಾಶಾಲಿತನವನ್ನು ಸಂಪಾದಿಸಿದ್ದ ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದರು ಪಂಚಭೂತಗಳನ್ನಿಯಾಮಕರಾಗಿ, ಅರಿವನ್ನು ಆವುಗೆಯಾಗಿ ಮಾಡಿಕೊಂಡು, ತಿಳಿವನ್ನು ದಂಡವಾಗಿ ಹಿಡಿದುಕೊಂಡು, ಲೋಕದ ಜ್ಞಾನವಿಲ್ಲದ ಅವಿವೇಕಿತನದ ಹುಚ್ಚರನ್ನು ಬಡಿದೆಚ್ಚರಿಸುತ್ತ, ಸ್ವಾರ್ಥ-ಸಂಕುಚಿತತೆಗಳಿಂದ ಆವರಿಸಿದ್ದ ಸಮುದಾಯವನ್ನು ಶುದ್ಧಂತಃಕರಣದ ಚೌಕಟ್ಟಿನಲ್ಲಿ ತರಲು ಧರೆಯಲ್ಲಿ ಇಂದುಧರನಾದೇಶದಂತೆ ಅವತರಿಸಿ ಬಂದವರೇ ಶ್ರೀ ಜಗದ್ಗುರು ರೇವಣಸಿದ್ಧ ಭಗವಾನರು.

ಬಾಳ ಬಾಂದಳದಲ್ಲಿ ಅನುಭಾವಿಗಳಾಗಿ ಅನುಭವವನ್ನು ಹಂಚಬೇಕೆಂಬ ಹಮ್ಮಿಕೆಯಲ್ಲಿ ‘ಚೆಂಗಣಗಿಲ ಮಂಟಪ’ವನ್ನು ಸ್ಥಾಪಿಸಿ, ಅಲ್ಲಿ ಸ್ತ್ರೀ-ಪುರುಷರೆನ್ನದೇ, ಮೇಲು-ಕೀಳುಗಳಿಲ್ಲದೇ, ಬಡವ-ಬಲ್ಲಿದರೆನ್ನದೇ ಸರ್ವ ಸಮಾನತೆಯ ಸಂಕಲ್ಪದಲ್ಲಿ ಅನೇಕಾನೇಕ ಮಹಿಳೆ ಮತ್ತು ಪುರುಷರನ್ನು ಸಂಘಟನೆಗೊಳಿಸಿ ವೀರಶೈವ ಧರ್ಮದ ವಿಸ್ತ್ರತ ವಿಷಯಗಳ ಸಮಗ್ರ ಚಿಂತನೆ ಚರ್ಚೆಗೊಳಪಡಿಸಿ ಧರ್ಮವನ್ನು ಅಣು-ಕಣದಲ್ಲಿಯೂ ಬೆರೆಯುವಂತೆ ಭವಿಷ್ಯತ್ತಿನ ಜನಾಂಗಕ್ಕೆ ಬೆಳಕು ಚೆಲ್ಲಿದರು. ಜಗದುದ್ಧಾರ ಕಾಯಕವನ್ನು ಕೈಗೊಂಡು ವಿಶ್ರಾಂತಿಗಳನ್ನು ಲೆಕ್ಕಿಸದೆಯೇ ಧರ್ಮರಕ್ಷಾ ಕಾರ್ಯವನ್ನು ಚುರುಕಿನಿಂದ ಮಾಡುತ್ತಲೇ ಧರ್ಮದ ಕ್ರಾಂತಿಗಳನ್ನು ಹುಟ್ಟುಹಾಕಿ, ಎಲ್ಲೆಲ್ಲಿ ಅನ್ಯಾಯ, ಅವಮಾನ, ಅನೀತಿ, ಅರಾಜಕತೆ ತುಂಬಿರುವುದೇ ಅಲ್ಲೆಲ್ಲ ಸಂಚರಿಸಿ ನ್ಯಾಯ, ಧರ್ಮ, ನೀತಿಗಳನ್ನು ಪಸರಿಸಿದರು. ಅರಮನೆ, ಕಿರಿಮನೆ, ಹಿರಿಮನೆ, ಗುಡಿಸಲು ಎನ್ನದೆಲೆ ಪಾದ ಬೆಳೆಸಿ ವಿಶ್ವಧರ್ಮವನ್ನು ದೀಕ್ಷೆಯ ಮೂಲಕ ಪ್ರಚಾರಪಡಿಸಿದ ಹೆಗ್ಗಳಿಕೆ ಶ್ರೀ ಜಗದ್ಗುರುಗಳವರದು. ಬಹುಶಃ ಈ ಶುದ್ಧ ಕಾಯಕವೇ 12 ನೇ ಶತಮಾನದ ಶರಣರಿಗೆ ಆದರ್ಶವೆಂದರೆ ತಪ್ಪಾಗದು.

ಶಿವ ಧರ್ಮದ ಪ್ರಸಾರ ಕಾರ್ಯದಲ್ಲಿ ಬಹುವಾಗಿ ಕ್ರಮಿಸಿ, ಕ್ರಮೇಣ ಜನರಲ್ಲಿ ಮೂಲ ಧರ್ಮದ ಬೀಜ ಬಿತ್ತಿ, ಬೆಳೆಯನ್ನು ಸದಾ ಹಸಿರಾಗಿರುವಂತೆ ಹರಸಿದ ಹಸಿರು ಪೀಠದ ಒಡೆಯರಾದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಕಾಂಚೀ ಕ್ಷೇತ್ರಕ್ಕೆ ದಯಮಾಡಿಸಿ, ಅಲ್ಲಿ ವಿಪ್ರರ ಅಟ್ಟಹಾಸವನ್ನು ಕಂಡು ದಬ್ಬಾಳಿಕೆಯ ಪ್ರವೃತ್ತಿಗೆ ಕಠಿಣರಾಗಿ ಅಲ್ಲಿನ ದುವ್ಯರ್ವವಸ್ಥೆಯನ್ನು ಶುಚಿಗೊಳಿಸಲು ‘ಪಿಣ್ಣಾಂಕ’ನೆಂಬ ಹೆಸರಿನಿಂದ ಅರೆಹುಚ್ಚನಂತೆ ಬೀದಿ ಬೀದಿ ಸುತ್ತಿ, ಆ ಪಟ್ಟಣದ ದೈವವಾಗಿದ್ದ ಶ್ರೀ ವರದರಾಜ ಸ್ವಾಮಿಯ ಶಿಲಾಮೂರ್ತಿಯು ಕಂಪಿಸುವಂತೆ ಮಾಡಿ, ರಾಜಾ ವಿಜಯೇಂದ್ರ ಚೋಳನ ಭಕ್ತಿಯೊಲಿದು ವಿಪ್ರರ ಮಂಕಿನ ಮತಿಗಳಿಗೆ ಬುದ್ಧಿ ಕಲಿಸಿ ಕೊನೆಗೆ ಕಂಪನಗೊಂಡಿದ್ದ ಶಿಲಾವಿಗ್ರಹದ ಮಸ್ತಕದ ಮೇಲೆ ಪವಿತ್ರ ಹಸ್ತವನ್ನಿರಿಸಿ, ಕಂಪನ ನಿಲ್ಲಿಸಿ ಚಿತ್ಕಳೆ ತುಂಬಿ ಸರ್ವರಿಗೂ ಸನ್ಮಂಗಳವನ್ನುಂಟು ಮಾಡಿದ ಮಹಾಚಾರ್ಯರು ವೀರಶೈವ ಧರ್ಮದ ಹಿರಿಮೆಯನ್ನು ಸಾರಿದರು.

ಕಾಂಚೀ ಕ್ಷೇತ್ರದಿಂದ ಮರಳಿದ ಶ್ರೀ ರೇವಣಸಿದ್ಧ ಜಗದ್ಗುರುಗಳು ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸಿ ಮಂಗಳವೇಡದ ಬಳಿಯ ಮಾಸನೂರಿನ ಶಿವಾಲಯದ ಬಳಿ ಇರುವ ವಟಕುಜದ ಪೊಟರೆಯಲ್ಲಿನ ಹೀನರಾಕ್ಷಸ ಮಿಥುನ (ತಗಣಿ) ಗಳನ್ನು ತನ್ನ ತ್ರಿನೇತ್ರದಿಂದ ಭಸ್ಮಗೊಳಿಸಿ, ಅವುಗಳನ್ನು ಕಬ್ಬಿಣದ ಗುಂಡುಗಳನ್ನಾಗಿ ಪರಿವರ್ತಿಸಿದರು. ಅವುಗಳಲ್ಲಿ ಒಂದನ್ನು ಮಾಸನೂರಿನ ಮಡುವಲ್ಲಿರಿಸಿ, ಇನ್ನೊಂದನ್ನು ವೈಜಯಂತಿಯ ರಾಜಕುಮಾರ ಆರನೇ ವಿಕ್ರಮಾದಿತ್ಯನಿಗೆ ಅನುಗ್ರಹಪೂರ್ವಕವಾಗಿ ಆಶೀರ್ವದಿಸುವರು. ಅದರ ಪರಿಣಾಮ ರಾಜ ವಿಕ್ರಮಾದಿತ್ಯನು ಜಗತ್ಪಸಿದ್ಧನಾಗುತ್ತಾನೆ. ಇದನ್ನರಿತ ಕಪಟ ರಾಜ ಬಿಜ್ಜಳನು ಶ್ರೀ ಜಗದ್ಗುರು ರೇವಣಸಿದ್ಧರು ಮಾಸನೂರಿನ ಕೆರೆಯಲ್ಲಿಳಿಸಿದ ಇನ್ನೊಂದು ಖಡ್ಗವನ್ನು ಪಡೆಯಲು ಹವಣಿಸುತ್ತಾನೆ.
ದಿನನಿತ್ಯದ ಪರಿಪಾಠದಂತೆ ಪ್ರಾತಃಕಾಲವೇ ಶಿವೋಪಾಸನೆಗಳನ್ನು ಪೂರೈಸಿ, ದಿನಂಪ್ರತಿಯೂ ಒಬ್ಬೊಬ್ಬರ ಮನೆಗೆ ಪ್ರಸಾದ ಪಡೆಯಲು ಪ್ರವಾಸ ಕೈಗೊಂಡ ಭಗವತ್ಪಾದರು ಅರಮನೆ-ಗುಡಿಸಲುಗಳೆಂಬ ಭೇದವಿಲ್ಲದೆಯೇ ಸಮಾನತೆಯಿಂದ ಸರ್ವ ಭಕ್ತರ ಮನೆಗೆ ದಯಮಾಡಿಸುತ್ತಿದ್ದರು. ದಿವ್ಯ ಜ್ಞಾನಿಗಳಾಗಿದ್ದ ಇವರು ಸರ್ವವನ್ನು ಚಿತ್ರದಲ್ಲಿ ಅರಿಯುವವರಾಗಿದ್ದರು. 64 ವಿದ್ಯೆಗಳಲ್ಲಿ ಸಂಪದರಾಗಿದ್ದ ಆಚಾರ್ಯರು ಬಿಜ್ಜಳನ ಗರ್ವಭಂಗವಾಗಿಸಲೋಸುಗ ಮಾರುವೇಷ ಧರಿಸಿ ಭಿಕ್ಷೆಗೆಂದು ಆತನ ಅರಮನೆಗೆ ಧಾವಿಸುವರು. ಭವತಿ ಭಿಕ್ಷಾಂದೇಹಿ ಎಂಬ ಕೂಗಿಗೆ ಸಿಟ್ಟಿನ ಭರದಿಂದಲೇ ಬಂದು ರೇವಣಸಿದ್ಧರ ಕರದಲ್ಲಿನ ಪಾತ್ರೆಗೆ ಅಂಬಲಿಯನ್ನು ಸುರಿಯಲು, ಅದನ್ನು ಸ್ವೀಕರಿಸಿದ ಜಗದ್ಗುರುಗಳು ಕುಡಿದುಳಿದ ಅಂಬಲಿಯನ್ನು ಅರಮನೆಯ ಹಜಾರದ ಮುಂದಿನ ಕಂಭಕ್ಕೆ ಒರೆಸಲು ತಕ್ಷಣವೇ ಅರಮನೆ ಧಗೆ-ಹೊಗೆಯಿಂದ ಧಾವಂತವಾಯಿತು. ಎಲ್ಲೆಡೆಗೂ ಬೆಂಕಿ ಆವರಿಸಿತು. ಇದನ್ನೆಲ್ಲ ಕಂಡ ಬಿಜ್ಜಳ ತನ್ನ ಅವಿವೇಕಿತನದ ಮಂದ ಮತಿಯನ್ನು ಅರಿತು ತಪ್ಪಿನಿಂದಾದ ಅಚಾತುರ್ಯ ಅಕಾರ್ಯದ ಆಲೋಚನೆಗೆ ಜಗದ್ಗುರುಗಳವರಲ್ಲಿ ಪತ್ನಿ ಸಮೇತನಾಗಿ ಕ್ಷಮೆ ಕೋರಲಾಗಿ ಕರುಣಾಮೂರ್ತಿಗಳಾದ ರೇವಣಸಿದ್ಧರು. ಹರಸಿ ಆಶೀರ್ವದಿಸಿದರು. ಇದನ್ನೆಲ್ಲ ಕಂಡ ಶರಣ ಬಸವಣ್ಣನವರು ಮಂತ್ರಮುಗ್ಧರಾಗಿ ಮಹಾ ಧರ್ಮಪ್ರಭುವಿನ ಅಡಿಗೆರಗಿ ಪಾದಸ್ಪರ್ಶದಿಂದ ಪುನೀತರಾದರು.

ಬಸವ ಕಲ್ಯಾಣದ ಜನ-ಜಾನುವಾರುಗಳಿಗೆ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವುದಕ್ಕೋಸ್ಕರವಾಗಿ ಶ್ರೀ ಜಗದ್ಗುರುಗಳವರು ಶಿವನನ್ನು ಪ್ರಾರ್ಥಿಸಿ, ಗಂಗೆಯ ಕೃಪೆಗಾಗಿ ಸಂಕಲ್ಪ ತೊಟ್ಟರು. ಸ್ವತಃ ತಾವೇ ಗುದ್ದಲಿ ಹಿಡಿದು ಶಿಷ್ಯ ಸಂಕುಲದ ಸಹಕಾರಗಳಿಂದ ತ್ರಿಪುರಾಂತಕದ ವಿಶಾಲ ಪ್ರದೇಶದಲ್ಲಿ ಕೆರೆಯನ್ನು ನಿರ್ಮಿಸಲು ಸನ್ನದ್ಧರಾದರು. ಈ ಕಾರ್ಯ ಬಹುದಿನಗಳವರೆಗೆ ಮುಂದುವರೆದು, ಅಲ್ಲಿದ್ದ ದೋಸೆ ಪಿಟ್ಟವ್ವ ಎಂಬ ದಲಿತ ಮಹಿಳೆಯ ಮನೆಯಲ್ಲಿ ದೋಸೆ ಪ್ರಸಾದವನ್ನು ಸ್ವೀಕರಿಸಿ ಕೆರೆ ನಿರ್ಮಾಣದಲ್ಲಿ ನಿರತರಾದರು. ಇದರ ತರುವಾಯ ಹಲವಾರು ಮಾಸಗಳ ನಂತರ ಸುಂದರ ಕೆರೆ-ಕಟ್ಟೆ ನಿರ್ಮಾಣವಾಯಿತು. ಜಲ ದಾಹದ ದೇಹಗಳಿಗೆ ಗುರುವಿನ ಕರುಣೆಯ ತೀರ್ಥ ದೊರಕಿ ಪಾವನತೆಯುಂಟಾಯಿತು. ಇಂದಿಗೂ ಈ ಕೆರೆ ಸಿದ್ಧನ ಕೆರೆ ಎಂಬುದಾಗಿ ಪ್ರಸಿದ್ಧಿಗೊಂಡು ಇತಿಹಾಸವನ್ನು ಮುನರ್‌ಮನನ ಮಾಡುತ್ತಿರುವುದೇ ಸತ್ಯ ಸಾಕ್ಷಿಯಾಗಿದೆ.

ಕಲ್ಯಾಣ ಪಟ್ಟಣದ ಬಳಿಯ ರಟಗಲ್‌ನಲ್ಲಿ ಅತೀವ ಬಡತನ ಅನುಭವಿಸುತ್ತಿದ್ದ ಗಾಣಿಗ ಮನೆತನದ ಕಲ್ಲಿಶೆಟ್ಟಿ ಎನ್ನುವವನ ಮನೆಯಲ್ಲಿ ಶ್ರೀ ಜಗದ್ಗುರುಗಳವರೇ ಸ್ವತಃ ಜೀತದಾಳಾಗಿ ದುಡಿದು, ಗಾಣ ಹೊಡೆದು, ದಂಪತಿಗಳೀರ್ವರ ಭಕ್ತಿಗೆ ಮೆಚ್ಚಿ ಅವರಿಗೆ ಅಂಟಿದ್ದ ಬಡತನವನ್ನು ನೀಗಿಸಿದರು. ಆಶೀರ್ವಾದ ರೂಪದಲ್ಲಿ ಸಿರಿ-ಸಂಪತ್ತನ್ನು ದಯಪಾಲಿಸಿದ ಜಗದ್ಗುರುಗಳು ಒಕ್ಕಣ್ಣುಳ್ಳ ಕಲ್ಲಿಶೆಟ್ಟಿಗೆ ಕಣ್ಣನ್ನು ದಯಪಾಲಿಸಿ ಧರ್ಮೋಪದೇಶವನ್ನು ನೀಡಿ ದೀಕ್ಷೆಗೊಳಿಸಿದರು. ಇದರ ಕುರುಹಾಗಿ ಇಂದಿಗೂ ಅಲ್ಲಿ ಗಾಣದ ಶಿಲಾ ಸ್ಮಾರಕವಿದೆ ಹಾಗೂ ಪಕ್ಕದಲ್ಲಿ ಶ್ರೀ ರೇವಣಸಿದ್ಧ ಪರಂಪರೆಯ ಮಠವಿರುವುದು ಚಾರಿತ್ರಿಕವಾಗಿದೆ. ಮುಂದೆ ಮಂಗಳವೇಡೆಗೆ ಆಗಮಿಸಿ ವಾರನಾಕಿಯ ಬದುಕನ್ನು ಪರಿವರ್ತನೆಗೊಳಿಸಿ, ಅವಳಿಗೆ ಧರ್ಮದ ದಾರಿಯಲ್ಲಿ ಸಾಗುವಂತೆ ಮಾಡಿ, ಶಿವಭಕ್ತಿಯನ್ನು ಬಿತ್ತರಿಸುವಂತೆ ಆದೇಶವಿತ್ತರು.

ಶ್ರೀ ರಂಭಾಪುರಿ ಪೀಠದ ಜಗದ್ಗುರು ಪರಂಪರೆ:

ಸಾಮಾಜಿಕ ಸಜ್ಜನಿಕೆಗೆ ಬೆಳಕು ತೋರಿದ ಶ್ರೀ ಜಗದ್ಗುರು ರಂಭಾಪುರಿ ಪೀಠವು ಅಸಮಾನತೆಯ ವಿಶಿಷ್ಟ ಮತ್ತು ವಿಶೇಷ ಪರಂಪರೆಯನ್ನು ಹೊಂದಿಕೊಂಡಿರುವುದು ನಮ್ಮಗಳ ಸೌಭಾಗ್ಯವೇ ಸರಿ. ಅದ್ವಿತೀಯ ಅನುಭವ ಅನುಭಾವದ ಮೇರು ಸದೃಶ ವಿದ್ವಾಂಸರು, ಮಹಾತಪೋನಿಧಿಗಳು, ತಾಮಸನಿಗ್ರಹಿಗಳು, ವಾಕ್‌ಸಿದ್ಧಿಪುರುಷರು, ವಾಗ್ಯೂಷಣರು, ಸತ್ವಸ್ವಚಿಂತಕರು, ಕಾಯಕಜೀವಿಗಳು, ಲೋಕೋದ್ಧಾರಿಗಳು, ಆಧ್ಯಾತ್ಮದ ಆದ್ಯರು, ಮಹಿಮಾನ್ವಿತರು, ಸಾಮಾಜಿಕ ಚೇತನರು, ಅಭಯಹಸ್ತರು, ಸಿದ್ಧಾಂತಪ್ರತಿಪಾದಕರು, ಮೌಲ್ಯವರ್ಧಕರು ಆದ ಶ್ರೀ ರಂಭಾಪುರಿ ಪೀಠದ 120 ಜಗದ್ಗುರುವರೇಣ್ಯರು ಇತಿಹಾಸದ ಪುಟ ಪುಟಗಳಲ್ಲಿ ಉಸಿರಾಗಿ ಬೆರೆತಿದ್ದಾರೆ. ದೊರೆತ ದಾಖಲೆಗಳ ಪ್ರಕಾರ ಈ ಎಲ್ಲಾ ಪರಮಾರ್ಚಾರು ವೀರಸಿಂಹಾಸನವನ್ನು ಆರೋಹಣ ಮಾಡಿ ಸರ್ವಧರ್ಮದ ಸಮನ್ವಯಶಾಂತಿ ಸಂದೇಶಕ್ಕೆ ಕಾರಣರಾಗಿದ್ದಾರೆ.

ಅಪೂರ್ವ ಮತ್ತು ಆದರ್ಶ ಗುರುಪರಂಪರೆ ಹೊತ್ತಿರುವ ಶ್ರೀ ಪೀಠವು ಜನಾಂದೋಲನಗಳ ಮೂಲಕವಾಗಿ ಸಾಮಾಜಿಕ ಬದ್ಧತೆಯನ್ನು, ಧಾರ್ಮಿಕ ವಿಧಿಗಳನ್ನು ಜಾರಿಗೊಳಿಸಿದ ಶ್ರೇಯಸ್ಸು ಹೊಂದಿದೆ. ವೀರಾಗಮದ ಸಂಶೋಧನೆಯಲ್ಲಿ ಸಹಸ್ರ ಸಹಸ್ರ ವರ್ಷಗಳ ಇತಿಹಾಸವನ್ನು ಕಾಣಬಹುದಾಗಿದೆ. ಪ್ರಗತಿಯ ಪಥದತ್ತ ಸರ್ವರನ್ನು ಕೈಹಿಡಿದು ಮುನ್ನಡೆಸುತ್ತಿರುವ ಶ್ರೀ ಪೀಠದ ಗುರುಪರಂಪರೆಯ ಆಚಾರ್ಯರುಗಳನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

 

ಶ್ರೀ ಶ್ರೀ ಶ್ರೀ 1008 ಜಗದ್ಗುರು ಏಕಾಕ್ಷರ ಶಿವಾಚಾರ್ಯ ಭಗವತ್ಪಾದರು (ಕೃತಯುಗ)

ಶ್ರೀ ಶ್ರೀ ಶ್ರೀ 1008 ಜಗದ್ಗುರು ಏಕವಕ್ಷ್ಯ ಶಿವಾಚಾರ್ಯ ಭಗವತ್ಪಾದರು (ತ್ರೇತಾಯುಗ)

ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇಣುಕ ಶಿವಾಚಾರ್ಯ ಭಗವತ್ಪಾದರು (ದ್ವಾಪರಯುಗ)

1. ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ಧ ಶಿವಾಚಾರ್ಯ ಭಗವತ್ಪಾದರು (ಕಲಿಯುಗ)

2. ಶ್ರೀ ಶ್ರೀ ಶ್ರೀ 1008 ಜಗದ್ಗುರು ರುದ್ರಮುನೀಶ್ವರ ಶಿವಾಚಾರ್ಯ ಭಗವತ್ಪಾದರು

3. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮುಕ್ತಿಮುನೀಶ್ವರ ಶಿವಾಚಾರ್ಯ ಭಗವತ್ಪಾದರು.

4. ಶ್ರೀ ಶ್ರೀ ಶ್ರೀ 1008 ಜಗದ್ಗುರು ದಿಗಂಬರ ಮುಕ್ತಿಮುನೀಶ್ವರ ಶಿವಾಚಾರ್ಯ ಭಗವತ್ಪಾದರು

5. ಶ್ರೀ ಶ್ರೀ ಶ್ರೀ 1008 ಜಗದ್ಗುರು ತ್ರಿಲೋಚನ ಶಿವಾಚಾರ್ಯ ಭಗವತ್ಪಾದರು

6. ಶ್ರೀ ಶ್ರೀ ಶ್ರೀ 1008 ಜಗದ್ಗುರು ಯೋಗಿನಾಥ ಶಿವಾಚಾರ್ಯ ಭಗವತ್ಪಾದರು

7. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮೃತ್ಯುಂಜಯ ಶಿವಾಚಾರ್ಯ ಭಗವತ್ಪಾದರು

8. ಶ್ರೀ ಶ್ರೀ ಶ್ರೀ 1008 ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರು

9. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುಪಾದ ಶಿವಾಚಾರ್ಯ ಭಗವತ್ಪಾದರು

10. ಶ್ರೀ ಶ್ರೀ ಶ್ರೀ 1008 ಜಗದ್ಗುರು ಷಣ್ಮುಖ ಶಿವಾಚಾರ್ಯ ಭಗವತ್ಪಾದರು

11. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು

12. ಶ್ರೀ ಶ್ರೀ ಶ್ರೀ 1008 ಜಗದ್ಗುರು ನಿತ್ಯಾನಂದ ಶಿವಾಚಾರ್ಯ ಭಗವತ್ಪಾದರು 

13, ಶ್ರೀ ಶ್ರೀ ಶ್ರೀ 1008 ಜಗದ್ಗುರು ಮುಕ್ತಿನಾಥ ಶಿವಾಚಾರ್ಯ ಭಗವತ್ಪಾದರು.

14. ಶ್ರೀ ಶ್ರೀ ಶ್ರೀ 1008 ಜಗದ್ಗುರು ಷಡಕ್ಷರ ಶಿವಾಚಾರ್ಯ ಭಗವತ್ಪಾದರು

15. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುಸಿದ್ದ ಶಿವಾಚಾರ್ಯ ಭಗವತ್ಪಾದರು. 

16. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು

17. ಶ್ರೀ ಶ್ರೀ ಶ್ರೀ 1008 ಜಗದ್ಗುರು ನೀಲಕಂಠ ಶಿವಾಚಾರ್ಯ ಭಗವತ್ಪಾದರು.

18. ಶ್ರೀ ಶ್ರೀ ಶ್ರೀ 1008 ಜಗದ್ಗುರು ಕೈವಲ್ಯನಾಥ ಶಿವಾಚಾರ್ಯ ಭಗವತ್ಪಾದರು.

19, ಶ್ರೀ ಶ್ರೀ ಶ್ರೀ 1008 ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಭಗವತ್ಪಾದರು

20. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸರ್ವೇಶ್ವರ ಶಿವಾಚಾರ್ಯ ಭಗವತ್ಪಾದರು

21. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಂಭುದೇವ ಶಿವಾಚಾರ್ಯ ಭಗವತ್ಪಾದರು

22.  ಶ್ರೀ ಶ್ರೀ ಶ್ರೀ  1008 ಜಗದ್ಗುರು ಕಾಲಾಂತರ ಶಿವಾಚಾರ್ಯ ಭಗವತ್ಪಾದರು.

23. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಾಂತವೀರ ಶಿವಾಚಾರ್ಯ ಭಗವತ್ಪಾದರು

24. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮುಕ್ತಿನಾಥ ಶಿವಾಚಾರ್ಯ ಭಗವತ್ಪಾದರು

25. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಂಕರಸ್ವಾಮಿ ಶಿವಾಚಾರ್ಯ ಭಗವತ್ಪಾದರು

26. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸದಾಶಿವ ಶಿವಾಚಾರ್ಯ ಭಗವತ್ಪಾದರು

27. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮಹಾದೇವ ಶಿವಾಚಾರ್ಯ ಭಗವತ್ಪಾದರು

28. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುಲಿಂಗ ಶಿವಾಚಾರ್ಯ ಭಗವತ್ಪಾದರು

29. ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ಧ ಶಿವಾಚಾರ್ಯ ಭಗವತ್ಪಾದರು

30. ಶ್ರೀ ಶ್ರೀ ಶ್ರೀ 1008 ಜಗದ್ಗುರು ಪಶುಪತಿ ಶಿವಾಚಾರ್ಯ ಭಗವತ್ಪಾದರು

31. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಂಭುಲಿಂಗ ಶಿವಾಚಾರ್ಯ ಭಗವತ್ಪಾದರು

32. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುಪಾದ ಶಿವಾಚಾರ್ಯ ಭಗವತ್ಪಾದರು

33, ಶ್ರೀ ಶ್ರೀ ಶ್ರೀ 1008 ಜಗದ್ಗುರು ಶ್ರೀಕಂಠಮೂರ್ತಿ ಶಿವಾಚಾರ್ಯ ಭಗವತ್ಪಾದರು

34. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧನಾಥ ಶಿವಾಚಾರ್ಯ ಭಗವತ್ಪಾದರು 35. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮೃತ್ಯುಂಜಯ ಶಿವಾಚಾರ್ಯ ಭಗವತ್ಪಾದರು.

36. ಶ್ರೀ ಶ್ರೀ ಶ್ರೀ 1008 ಜಗದ್ಗುರು ನೀಲಕಂಠ ಶಿವಾಚಾರ್ಯ ಭಗವತ್ಪಾದರು

37. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸೋಮಶೇಖರ ಶಿವಾಚಾರ್ಯ ಭಗವತ್ಪಾದರು

38. ಶ್ರೀ ಶ್ರೀ ಶ್ರೀ 1008 ಜಗದ್ಗುರು ವೀರಭದ್ರ ಶಿವಾಚಾರ್ಯ ಭಗವತ್ಪಾದರು.

39. ಶ್ರೀ ಶ್ರೀ ಶ್ರೀ 1008 ಜಗದ್ಗುರು ಜಗನ್ನಾಥ ಶಿವಾಚಾರ್ಯ ಭಗವತ್ಪಾದರು

40. ಶ್ರೀ ಶ್ರೀ ಶ್ರೀ 1008 ಜಗದ್ಗುರು ಪಂಚಾನನ ಶಿವಾಚಾರ್ಯ ಭಗವತ್ಪಾದರು

41. ಶ್ರೀ ಶ್ರೀ ಶ್ರೀ 1008 ಜಗದ್ಗುರು ಕೆಂಜೆಡೆ ರಾಜಶೇಖರ ಶಿವಾಚಾರ್ಯ ಭಗವತ್ಪಾದರು 42. ಶ್ರೀ ಶ್ರೀ ಶ್ರೀ 1008 ಜಗದ್ಗುರು ನಗರಾರಂಭ ಶಿವಾಚಾರ್ಯ ಭಗವತ್ಪಾದರು

43. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧನಾಥ ಶಿವಾಚಾರ್ಯ ಭಗವತ್ಪಾದರು

44. ಶ್ರೀ ಶ್ರೀ ಶ್ರೀ 1008 ಜಗದ್ಗುರು ರುದ್ರಮುನೀಶ್ವರ ಶಿವಾಚಾರ್ಯ ಭಗವತ್ಪಾದರು

45. ಶ್ರೀ ಶ್ರೀ ಶ್ರೀ 1008 ಜಗದ್ಗುರು ಕಲ್ಯಾಣಸುಂದರ ಶಿವಾಚಾರ್ಯ ಭಗವತ್ಪಾದರು

46. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗಂಗಾಧರ ಶಿವಾಚಾರ್ಯ ಭಗವತ್ಪಾದರು

47. ಶ್ರೀ ಶ್ರೀ ಶ್ರೀ 1008 ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಭಗವತ್ಪಾದರು

48. ಶ್ರೀ ಶ್ರೀ ಶ್ರೀ 1008 ಜಗದ್ಗುರು ಚಿದಂಬರದೇವ ಶಿವಾಚಾರ್ಯ ಭಗವತ್ಪಾದರು

49. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಿವಪ್ರಸಾದ ಶಿವಾಚಾರ್ಯ ಭಗವತ್ಪಾದರು

50. ಶ್ರೀ ಶ್ರೀ ಶ್ರೀ 1008 ಜಗದ್ಗುರು ವೀರಭದ್ರ ಶಿವಾಚಾರ್ಯ ಭಗವತ್ಪಾದರು

51. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಿವಾನಂದ ಶಿವಾಚಾರ್ಯ ಭಗವತ್ಪಾದರು

52. ಶ್ರೀ ಶ್ರೀ ಶ್ರೀ 1008 ಜಗದ್ಗುರು ಅವಿಮುಕ್ತ ಶಿವಾಚಾರ್ಯ ಭಗವತ್ಪಾದರು

53. ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ದ ಶಿವಾಚಾರ್ಯ ಭಗವತ್ಪಾದರು

54. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದರು

55. ಶ್ರೀ ಶ್ರೀ ಶ್ರೀ 1008 ಜಗದ್ಗುರು ಪಶುಪತಿ ಶಿವಾಚಾರ್ಯ ಭಗವತ್ಪಾದರು 56. ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ಧ ಶಿವಾಚಾರ್ಯ ಭಗವತ್ಪಾದರು.

57, ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಮಥನಾಥ ಶಿವಾಚಾರ್ಯ ಭಗವತ್ಪಾದರು.

58. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುದೇವ ಶಿವಾಚಾರ್ಯ ಭಗವತ್ಪಾದರು 59. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗಂಗಾಧರ ಶಿವಾಚಾರ್ಯ ಭಗವತ್ಪಾದರು.

60. ಶ್ರೀ ಶ್ರೀ ಶ್ರೀ 1008 ಜಗದ್ಗುರು ನಂದಿನಾಥ ಶಿವಾಚಾರ್ಯ ಭಗವತ್ಪಾದರು.

61. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮುಕ್ತಿಮುನೀಶ್ವರ ಶಿವಾಚಾರ್ಯ ಭಗವತ್ಪಾದರು

62. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಂಭುದೇವ ಶಿವಾಚಾರ್ಯ ಭಗವತ್ಪಾದರು

63. ಶ್ರೀ ಶ್ರೀ ಶ್ರೀ 1008 ಜಗದ್ಗುರು ತಾಂಡವಾಲೆ ಶಿವಾಚಾರ್ಯ ಭಗವತ್ಪಾದರು

64. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುದೇವ ಶಿವಾಚಾರ್ಯ ಭಗವತ್ಪಾದರು

65. ಶ್ರೀ ಶ್ರೀ ಶ್ರೀ 1008 ಜಗದ್ಗುರು ಜಟಾವೀರಭದ್ರ ಶಿವಾಚಾರ್ಯ ಭಗವತ್ಪಾದರು.

 

ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು

66. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು

67. ಶ್ರೀ ಶ್ರೀ ಶ್ರೀ 1008 ಜಗದ್ಗುರು ವಿರೂಪಾಕ್ಷ ಶಿವಾಚಾರ್ಯ ಭಗವತ್ಪಾದರು

68. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶ್ರೀಕಂಠ ಶಿವಾಚಾರ್ಯ ಭಗವತ್ಪಾದರು

69. ಶ್ರೀ ಶ್ರೀ ಶ್ರೀ 1008 ಜಗದ್ಗುರು ಅಘೋರ ಶಿವಾಚಾರ್ಯ ಭಗವತ್ಪಾದರು

70, ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುವಾದ ಶಿವಾಚಾರ್ಯ ಭಗವತ್ಪಾದರು.

71. ಶ್ರೀ ಶ್ರೀ ಶ್ರೀ 1008 ಜಗದ್ಗುರು ಈಶಾನದೇವ ಶಿವಾಚಾರ್ಯ ಭಗವತ್ಪಾದರು

72. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದರು

73. ಶ್ರೀ ಶ್ರೀ ಶ್ರೀ 1008 ಜಗದ್ಗುರು ಚರಲಿಂಗ ಶಿವಾಚಾರ್ಯ ಭಗವತ್ಪಾದರು

74. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮಣ್ಯಶ್ಲೋಕ ಶಿವಾಚಾರ್ಯ ಭಗವತ್ಪಾದರು

75. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗಂಗಾಧರ ಶಿವಾಚಾರ್ಯ ಭಗವತ್ಪಾದರು

76. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸೋಮನಾಥ ಶಿವಾಚಾರ್ಯ ಭಗವತ್ಪಾದರು

77. ಶ್ರೀ ಶ್ರೀ ಶ್ರೀ 1008 ಜಗದ್ಗುರು ಪೃಥ್ವಿಜ ಶಿವಾಚಾರ್ಯ ಭಗವತ್ಪಾದರು.

78. ಶ್ರೀ ಶ್ರೀ ಶ್ರೀ 1008 ಜಗದ್ಗುರು ವೀರೇಶ್ವರ ಶಿವಾಚಾರ್ಯ ಭಗವತ್ಪಾದರು

79. ಶ್ರೀ ಶ್ರೀ ಶ್ರೀ 1008 ಜಗದ್ಗುರು ಘಂಟಾಸಿದ್ಧ ಶಿವಾಚಾರ್ಯ ಭಗವತ್ಪಾದರು

80. ಶ್ರೀ ಶ್ರೀ ಶ್ರೀ 1008 ಜಗದ್ಗುರು ವೃಷಭೇಂದ್ರ ಶಿವಾಚಾರ್ಯ ಭಗವತ್ಪಾದರು

81. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸದಾನಂದ ಶಿವಾಚಾರ್ಯ ಭಗವತ್ಪಾದರು

82. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುಲಿಂಗ ಶಿವಾಚಾರ್ಯ ಭಗವತ್ಪಾದರು

83. ಶ್ರೀ ಶ್ರೀ ಶ್ರೀ 1008 ಜಗದ್ಗುರು ರುದ್ರಮುನೀಶ್ವರ ಶಿವಾಚಾರ್ಯ ಭಗವತ್ಪಾದರು

84. ಶ್ರೀ ಶ್ರೀ ಶ್ರೀ 1008 ಜಗದ್ಗುರು ವೀರಭದ್ರ ಶಿವಾಚಾರ್ಯ ಭಗವತ್ಪಾದರು

85. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗಣನಾಥ ಶಿವಾಚಾರ್ಯ ಭಗವತ್ಪಾದರು

86. ಶ್ರೀ ಶ್ರೀ ಶ್ರೀ 1008 ಜಗದ್ಗುರು ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದರು

87. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಕ್ತಿಧರ ಶಿವಾಚಾರ್ಯ ಭಗವತ್ಪಾದರು

88. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು

89. ಶ್ರೀ ಶ್ರೀ ಶ್ರೀ 1008 ಜಗದ್ಗುರು ಚಿತ್ರಕಾಶ ಶಿವಾಚಾರ್ಯ ಭಗವತ್ಪಾದರು

90. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಂಭುದೇವ ಶಿವಾಚಾರ್ಯ ಭಗವತ್ಪಾದರು

91. ಶ್ರೀ ಶ್ರೀ ಶ್ರೀ 1008 ಜಗದ್ಗುರು ರುದ್ರಮುನೀಶ್ವರ ಶಿವಾಚಾರ್ಯ ಭಗವತ್ಪಾದರು

92. ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಾರಂಗಧರ ಶಿವಾಚಾರ್ಯ ಭಗವತ್ಪಾದರು

93. ಶ್ರೀ ಶ್ರೀ ಶ್ರೀ 1008 ಜಗದ್ಗುರು ಕುಮಾರದೇವ ಶಿವಾಚಾರ್ಯ ಭಗವತ್ಪಾದರು

94. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಿವಪ್ರಸಾದ ಶಿವಾಚಾರ್ಯ ಭಗವತ್ಪಾದರು

95. ಶ್ರೀ ಶ್ರೀ ಶ್ರೀ 1008 ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು

96. ಶ್ರೀ ಶ್ರೀ ಶ್ರೀ 1008 ಜಗದ್ಗುರು ಚನ್ನವೀರದೇವವಾಮದೇವ ಶಿವಾಚಾರ್ಯ ಭಗವತ್ಪಾದರು

97. ಶ್ರೀ ಶ್ರೀ ಶ್ರೀ 1008 ಜಗದ್ಗುರು ವಾಮದೇವ ಶಿವಾಚಾರ್ಯ ಭಗವತ್ಪಾದರು.

98. ಶ್ರೀ ಶ್ರೀ ಶ್ರೀ 1008 ಜಗದ್ಗುರು ನೀಲಕಂಠದೇವ ಶಿವಾಚಾರ್ಯ ಭಗವತ್ಪಾದರು.

99, ಶ್ರೀ ಶ್ರೀ ಶ್ರೀ 1008 ಜಗದ್ಗುರು ರೇವಣಸಿದ್ಧ ಶಿವಾಚಾರ್ಯ ಭಗವತ್ಪಾದರು.

100 ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು.

101. ಶ್ರೀ ಶ್ರೀ ಶ್ರೀ 1008 ಜಗದ್ಗುರು ಚಿಪ್ಪನದೇವ ಶಿವಾಚಾರ್ಯ ಭಗವತ್ಪಾದರು

102.ಶ್ರೀ ಶ್ರೀ ಶ್ರೀ 1008 ಜಗದ್ಗುರು ನಾಗನಾಥ ಶಿವಾಚಾರ್ಯ ಭಗವಾದರು.

103 ಶ್ರೀ ಶ್ರೀ ಶ್ರೀ 1008 ಜಗದ್ಗುರು ಗಂಗಾಧರ ಶಿವಾಚಾರ್ಯ ಭಗವತ್ಪಾದರು

104.ಶ್ರೀ ಶ್ರೀ ಶ್ರೀ 1008 ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು.

105.ಶ್ರೀ ಶ್ರೀ ಶ್ರೀ 1008 ಜಗದ್ಗುರು ಪೂರ್ಣಜ್ಞಾನ ಶಿವಾಚಾರ್ಯ ಭಗವತ್ಪಾದರು.

106.ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಂಭುಲಿಂಗ ಶಿವಾಚಾರ್ಯ ಭಗವತ್ಪಾದರು

107. ಸ್ತ್ರೀ ಶ್ರೀ ಶ್ರೀ 1008 ಜಗದ್ಗುರು ಚಿನ್ನವೃಷಭಲಿಂಗ ಶಿವಾಚಾರ್ಯ ಭಗವತ್ಪಾದರು.

108.ಶ್ರೀ ಶ್ರೀ ಶ್ರೀ 1008 ಜಗದ್ಗುರು ಜಟಾವೃಷಭಲಿಂಗ ಶಿವಾಚಾರ್ಯ ಭಗವತ್ಪಾದರು

109 ಶ್ರೀ ಶ್ರೀ ಶ್ರೀ  ಜಗದ್ಗುರು ಶಾಂತದೇವ ಶಿವಾಚಾರ್ಯ ಭಗವತ್ಪಾದರು.

110. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುವೃಷಭರಾಜೇಂದ್ರ ಶಿವಾಚಾರ್ಯ ಭಗವತ್ಪಾದರು

111. ಶ್ರೀ ಶ್ರೀ ಶ್ರೀ 1008 ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಭಗವತ್ಪಾದರು.

112. ಶ್ರೀ ಶ್ರೀ ಶ್ರೀ 1008 ಜಗದ್ಗುರು ಗುರುಸಿದ್ಧಸ್ವಾಮಿ ಶಿವಾಚಾರ್ಯ ಭಗವತ್ಪಾದರು.

113. ಶ್ರೀ ಶ್ರೀ ಶ್ರೀ 1008 ಜಗದ್ಗುರು ಚಂದ್ರರಾಜೇಂದ್ರ ಶಿವಾಚಾರ್ಯ ಭಗವತ್ಪಾದರು

114. ಶ್ರೀ ಶ್ರೀ ಶ್ರೀ 1008 ಜಗದ್ಗುರು ಚಂದ್ರಶೇಖರದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು

115. ಶ್ರೀ ಶ್ರೀ ಶ್ರೀ 1008 ಜಗದ್ಗುರು ಶಿವಾನಂದರಾಜೇಂದ್ರ ಶಿವಾಚಾರ್ಯ ಭಗವತ್ಪಾದರು 

116, ಶ್ರೀ ಶ್ರೀ ಶ್ರೀ 1008 ಜಗದ್ಗುರು ವೃಷಭರಾಜೇಂದ್ರ ಶಿವಾಚಾರ್ಯ ಭಗವತ್ಪಾದರು

117, ಶ್ರೀ ಶ್ರೀ ಶ್ರೀ 1008 ಜಗದ್ಗುರು ಪಂಚಾಕ್ಷರ ಶಿವಾಚಾರ್ಯ ಭಗವತ್ಪಾದರು

118, ಶ್ರೀ ಶ್ರೀ ಶ್ರೀ 1008 ಜಗದ್ಗುರು ಅಭಿನವರೇಖಕ ಶಿವಾನಂದ ಶಿವಾಚಾರ್ಯ ಭಗವತ್ಪಾದರು

119, ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು

120.ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನರೇಣುಕ ವೀರರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರು

121. ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು

Phone

082662 50424

VISIT

6 am to 8 pm

Email

info@rambhapuripeetha.org

Address

Rambhapuri Mutt Road, Narasimharajapura, Taluka, Balehonnur, Karnataka 577112