ರಂಭಾಪುರಿ ದಸರೆ
ಮೈಸೂರು ದಸರಾ ಎಷ್ಟೊಂದು ಸುಂದರ ಎಂದಾದರೆ, ರಂಭಾಪುರಿ, ದಸರಾ ಬಹಳಷ್ಟು ಬಂಧುರ ಎಂಬುದಾಗಿ ಪ್ರಖ್ಯಾತಿಗೊಂಡಿದೆ. ಅರಮನೆಯಿಂದ ಗುರುಮನೆಗೆ ಕಾಲಿಟ್ಟ ಈ ಪರಂಪರೆಯು ತನು ಮನಗಳನ್ನು ತಣಿಸುವ ಭಗವಂತನ ಬಹುದೊಡ್ಡ ಉಡುಗೊರೆ, ಶ್ರೀ ಪೀಠದ 121 ನೇ ಜಗದ್ಗುರುಗಳಾ), ವೀರಸಿಂಹಾಸನವನ್ನು ಅಲಂಕರಿಸಿದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಂಸ್ಕೃತಿ-ಸಂಸ್ಕಾರ ಸಂವರ್ಧಕರು. ಜನಮನೋಲ್ಲಾಸ | ಚಂದಿರನಂತೆ ಧರ್ಮಸಭಾವಪೂರ್ಣ ಬೆಳದಿಂಗಳನ್ನು ಧರೆಗು ಬಡಿಸುತ್ತಿರುವ ಭಗವತ್ ಸ್ವರೂಪಿಗಳು, ಅಖಂಡ ಧರ್ಮನಿಷ್ಠರು, ಸುಪ್ರಸನ್ನ ಸುವಿಶಾಲ ಮನೋವಂತರು. ದೃಢವಂತರು, ಧೀರೋದಾತ್ತರು. ಸರ್ವಶಾಸ್ತ್ರಜ್ಞರು, ವಿಜಯವಿಜಯರು, ಹಸನಾದ ಹಸನ್ಮುಖಿಗಳು, ಕನ್ನಡ ಭುವನೇಶ್ವರಿಯ ಶ್ರೇಷ್ಟರುವರರು, ವಾಷಣರು, ಸಿದ್ಧಾಂತಾಚಾರ್ಯರು, ಭಾವತಪಸ್ವಿಗಳು,
ಶಾರತ ಒಮಟ್ಟದ ಜಗದ್ಗುರುಗಳಾದ ಮಹಾಸನ್ನಿಧಾನಂಗಳವರು ತಮ್ಮ ವಾಗಮೃತ’ ವಾರಿಧಿಯಲ್ಲಿ ಮಿಂದ ಅಸಂಖ್ಯಾತ ಭಕ್ತ ಸಂಕುಲದ ಹೃದಯ ಮಂದಿರದಲ್ಲಿ ಶಾಶ್ವತ ಸ್ಥಾನ ಪಡೆಯುವಂತಹ ವಾಗ್ವಿಲಾಸಿಗಳು, ಸಕಲ ಜೀವರಾಶಿಗೆ ಮಾತೃಸ್ವರೂಪರು, ಕರುಣಾಮಯರು, ಸಹಿಷ್ಣುಗಳು, ಸಮಷ್ಟಿಭಾವದ ಮೂರ್ತಸ್ವರೂಪರು ಶ್ರೀ ಮದುಭಾಮರಿ, ಶಿವಾನಂದ ಜಗದ್ಗುರುಗಳ ರಾಜತೇವ, ಶ್ರೀ ವೀರಗಂಗಾಧರ ಜಗದ್ಗುರುಗಳ ಪೂಜಾ ಸಂಪತ್ತು, ಕೀ ಎರುಮುಡಿ ಜಗದ್ಗುರುಗಳು ಹೃದಯವೈಶಾಲ್ಯ ಮುದ್ದುರಿಯ ಬಲದಿಂದ ಲಿಂಗೈಕ ಸರ್ವಜಗದ್ಗುರುಗಳವರ ಅಭಯದಿಂದ ನಾಡಿನೆಲ್ಲೆಡೆಗೂ ಧರ್ಮಗುಂದುಭಿಯ ನಿನಾದವನ್ನು ಮೊಳಗಿಸುತ್ತಿರುವರು. ವೀರಪೀಠವೇರಿದ ಸಂದರ್ಭದಲ್ಲಿ ಘೋಷಿಸಿದ “ಸಾಹಿತ್ಯ-ಸಂಸ್ಕೃತಿ ಸಂಪರ್ಧಿಸಲಿ. ಶಾಂತಿ-ಸಮದ್ಧಿ ಸರ್ವಲಿ” ಎಂಬ ಸರ್ವಕಾಲಿಕ ಸಂದೇಶವನ್ನು ಸತ್ಯವಾಗಿ ಸಂಘಟಿಸಿ, ವಿಸ್ತರಿಸಲು ಹತ್ತು-ಹಲವು ವಿಧಾಯಕ ಕ್ರಮಗಳನ್ನು ಕೈಗೊಂಡಿರುವರು.
ಸಾಹಿತ್ಯ-ಸಂಸ್ಕೃತಿಗಳ ವ್ಯಾಪ್ತಿ ಮತ್ತು ಶಾಂತಿ-ಸಮೃದ್ಧಿಗಳ ಗಡಿಯನ್ನು ಜಗದಗಲಕ್ಕೂ ಪಸರಿಸುವ ತರುವಾಯ ಶ್ರೀ ಪೀಠದ ಪರಂಪರಾಗತ ಆಚರಣೆಗಳಲ್ಲಿ ಮಹತ್ತರ ಸ್ಥಾನ ಹೊಂದಿರುವ ದರ್ಬಾರ್ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ಅತ್ಯಂತ ಶ್ರೇಷ್ಠಮಟ್ಟದಲ್ಲಿ ಮತ್ತು ಗುಷ್ಟ ಪ್ರಮಾಣದಲ್ಲಿ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಪ್ರಸ್ತುತ ಜಗದ್ಗುರುಗಳವರ ದಸರಾ ಕಾರ್ಯಕ್ರಮವೆಂದರೆ ಧರ್ಮ, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ, ನೃತ್ಯ, ಪ್ರತಿಭೆ, ಪಾಂಡಿತ್ಯ ಮತ್ತು ಸಂಘಟನಾತ್ಮಕ ಶುದ್ಧ ಸಂಸ್ಕಾರಗಳ ಕಲಿಕೆಯ ಸಂಚಾರಿ ವಿಶ್ವವಿದ್ಯಾಲಯವೇ ಆಗಿರುತ್ತದೆ. ಹೀಗಾಗಿ ಬಹುಜನೋಪಯೋಗಿಯಾದ ಈ ಕಾರ್ಯಕ್ರಮವನ್ನು ನಾಡಿಗರು ತಮ್ಮೂರಿನಲ್ಲಿ ನಡೆಸಿ ಆ ಪ್ರಾಂತದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಾಮಾನ್ಯರಿಗೂ ಸಂಸ್ಕಾರಯುತ ಪರಂಪರೆ ಮತ್ತು ಸರ್ವ ಸಂಪದಗಳು ಲಭಿಸಲೆಂಬಾಶಯದಲ್ಲಿ ತಮ್ಮದಾಗಿಸಿಕೊಳ್ಳುವ ಹಂಬಲವಿರುವ ಭಕ್ರೋತ್ತಮರ ಸರತಿಯ ಸಾಲು ಸಣ್ಣದೇನಲ್ಲ.!
ವೀರಶೈವ ಸಿದ್ಧಾಂತ ಮತ್ತು ಕನ್ನಡ ನಾಡಿನ ಸಾಂಸ್ಕೃತಿಕ ವಿಕಾಸಕ್ಕೆ ಶ್ರೀ ಮದಂಭಾಪುರಿ ಮಹಾಪೀಠದ ದಸರಾ ದರ್ಬಾ ಮಹತ್ತರವಾದ ಕೊಡುಗೆಯನ್ನು ನೀಡಿದೆ. ‘ನ ಭೂತೋ ನ ಭವಿಷ್ಯತಿ’ ಎಂಬಂತೆ ವರುಷದಿಂದೊರುಷಕ್ಕೆ ಭಕ್ತರ ಪರುಷದ ಘನ ಭಕ್ತಿಯಲ್ಲಿ ಸಂಕಲನಗೊಳ್ಳುವ ದಸರೆಯ ಮೆರುಗು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ದಾಖಲೆಯನ್ನು ಸೃಷ್ಟಿಸಿ ಇತಿಹಾಸದ ಮಟ ಸೇರುತ್ತಿದೆ. ಅವಿಶ್ರಾಂತ ಸಮಾಜೋಧಾರ್ಮಿಕ, ಸಮಾಜೋಸಾಂಸ್ಕೃತಿಕ ಸೇವೆಯಲ್ಲಿ ತೊಡಗಿರುವ ಮಹಾಸನ್ನಿಧಿಯವರಿಗೆ ನಿತ್ಯ ನೂರಾರು ಮೈಲಿಗಳ ಪ್ರವಾಸ, ಪ್ರಯಾಣ ಕಾಲದಲ್ಲೇ ವಿಶಾಂತಿ, ವರ್ಷದ ಎಲ್ಲಾ ಕಾಲಗಳಲ್ಲಿಯೂ ಕಿಯಾಶೀಲರಾಗಿ ಧರ್ಮಸೇವೆಯೂ ಶಿವಪೂಜೆಗೆ ಸಮವೆಂದು ನಡೆಸುತ್ತಾ ಎಲ್ಲಾ ವಿಧದಲ್ಲೂ ಆದರ್ಶ ಜಗದ್ಗುರುಗಳೆನಿಸಿದ್ದಾರೆ. ನನ್: 1992 ರಲ್ಲಿ ವೀರಸಿಂಹಾಸನಾರೋಹಣದ ನಂತರದಲ್ಲಿ ಶ್ರೀ ಪೀಠದ ದಸರಾ ದರ್ಬಾರ್ ಕಾರ್ಯಕ್ರವ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ, ಕಲಾತ್ಮಕ ಮತ್ತು ಮೌಲ್ವಿಕವಾಗಿ ಅಭೂತಪೂರ್ವ ಸಾಧನೆ ತೋರುವಲ್ಲಿ, ಜಾಗೃತ ಬದುಕು ನೀಡುವಲ್ಲಿ ತನ್ನದೇ ಆದ ವಿಖ್ಯಾತಿಯನ್ನು ಹೊಂದಿದೆ.
ಸರ್ವ ಜನಾಂಗದವರೆಗೂ ಅವರಿವರೆನ್ನದಲ್ಲಿ ಸಮಾನ ಅವಕಾಶವಿತ್ತು ಶಿಸ್ತು, ಸಂಯಮ ಮತ್ತು ಸಮಯ ಪ್ರಜ್ಞೆಗಳಿಗೆ ಮಹತ್ವವಿತ್ತು. ಜಾತಿಯ ಗಡಿಯನ್ನು ಮೀರಿ ಜಾಗೃತತನವನ್ನು ಉದ್ದೀಪನೆಗೊಳಿಸುವ ಅಂಶವೇ ಮೂಲಾಧಾರವಾಗಿರುವ ದಸರೆಯಲ್ಲಿ ಧರ್ಮಜ್ಞಾನಿಗಳಿಗೆ, ಸಮಾಜ ಚಿಂತಕರಿಗ ಸಾಹಿತಿಗಳಿಗೆ, ಸಾಧಕರಿಗೆ, ಸಂಗೀತ ಕಲಾವಿದರಿಗೆ ವಿಶೇಷ ಸ್ಥಾನಮಾನವನ್ನಿತ್ತು, ಆಶೀರ್ವಾದವನ್ನೀಯಲಾಗುತ್ತದೆ. ಹಬ್ಬದ ಕುಂಭತ್ತೂ ದಿನಗಳ ಕಾಲ ನಾಡಿನ ಧೀಮಂತ ವಿದ್ವಾಂಸರಿಂದ ಪಂಡಿತರಿಂದ ಸಮಾಜೋತ್ಕರ್ಷತೆಗೆ ಪ್ರೇರಣೆ ತುಂಬುವಂತಹ ಆಯ್ಕೆ ವಿಷಂದಿಗಳ ಕುರಿತಾದ ಉಪನ್ಯಾಸಗಳಿರುತ್ತವೆ: ಶಿವಾಚಾರ್ಯರುಗಳಿಂದ ಉಪದೇಶ, ನಿತ್ಯದ ಸಮಾರಂಭದ ಕೊನೆಗೆ ಶ್ರೀ ಸನ್ನಿಧಿಯವರಿಂದ ದಿವ್ಯಾಮೃತ – ಸಂದೇಶ.., ತದನಂತರ ಶ್ರೀ ಜಗದ್ಗುರುಗಳವರಿಗೆ ಸಲ್ಲಿಸುವ ನಜರ್ ಸಮರ್ಪಣೆಯಂತೂ ಇಂದ್ರನ ದರ್ಬಾರ್‌ನ್ನು ಸ್ಮರಣೆಗೆ ತರದೇ ಇರಲಾರದು.
ಶ್ರೀ ಮದ್ರಂಭಾಪುರಿ ಮಹಾಸನ್ನಿಧಾನ ದಸರೆಯ ಪ್ರಾರಂಭದಂದು ಪುರಪ್ರವೇಶ, ಒಂಭತ್ತೂ ದಿನಗಳ ಕಾಲ ವಿಶೇಷ ಉಡುಗೆ-ತೊಡುಗೆಗಳೊಂದಿಗೆ ರಾಜಗಾಂಭೀರ್ಯವನ್ನು ಅಲ್ಲಿ ನೆರೆದಿರುವ ಸಮಸ್ತರಿಗೂ ಕರುಣಿಸುತ್ತಾರೆ. ದಸರೆಯ ಕೊನೆಯ ದಿವಸ ಅಂದರೆ ವಿಜಯದಶಮಿಯಂದು ನಡೆಯುವ ವಿಶೇಷಪೂಜೆ. ಕುಂಭೋತ್ಸವ, ತೀರ್ಯಾಂದೋಲಿಕೋತ್ಸವ, ಶಮಿಸೀಮೋಲ್ಲಂಘನ, ಧರ್ಮ ಸಮ್ಮೇಳನ, ಶಾಂತಿ ಸಂದೇಶಗಳು ಜರುಗಿ ಬಂದ ಭಕ್ತರುಗಳೆಲ್ಲರೂ ಬನ್ನಿ-ಬಂಗಾರವನ್ನರ್ಪಿಸಿ ಆಶೀರ್ವಾದ ಪಡೆಯುವ ಕ್ರಮ ವಿಧಿವತ್ತಾಗಿ ಸಾಗಿಕೊಂಡು ಬರುತ್ತದೆ. ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಮತ್ತು ಪ್ರಭಾವಪೂರ್ಣವಾಗಿ ಅನಾವರಣಗೊಳ್ಳುವ ದರ್ಬಾರ್ ಮಹೋತ್ಸವವು ಪ್ರಸ್ತುತಾಚಾರ್ಯರ ಸಾನ್ನಿಧ್ಯದಲ್ಲಿ ಕಳೆಕಟ್ಟಿ ಮೂಲ ಪರಂಪರೆಯನ್ನು ಪರಿಣಾಮಕಾರಿಯಾಗಿಸಿ ಜನಮನದಲ್ಲಿ ಜಾಗೃತಿ ತುಂಬುವುದಲ್ಲದೇ ದೃಢ ನಿಲುವುಗಳಿಗೆ ನೆಲೆಯಾಗಿಸುತ್ತದೆ.
ಸಾಂಸ್ಕೃತಿಕ ಮಜಲುಗಳನ್ನು ಪರಿಚಯಿಸುವ ಪರಂಪರೆಯು ವಾಸ್ತವತೆ ಮತ್ತು ಭವಿಷ್ಯತ್ತಿನ ನಿರ್ಣಾಯಕಗಳ ಕುರಿತಾದ ಚಿಂತನೆಗಳಿಗೆ ಪುಷ್ಟಿ ತುಂಬುವುದಲ್ಲದೇ, ತನ್ನ ಮೂಲ ಆಶಯಗಳನ್ನು ಆದರ್ಶವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತಾಚಾರ್ಯರ ದಸರೆಯೆಂದರೆ ಅದು ಸದ್ಭಕ್ತರಿಗೆ ಗೌರವದ ಸಂಕೇತ. ಪ್ರತೀಷ್ಟೆಯ ಪರಾಕಾಷ್ಠೆ, ಸಹಜತೆಗೆ ಸೌಕಯ್ಯವಿತ್ತು ಸಾಕಾರಗೊಳ್ಳುವ ದಸರೆಯಲ್ಲಿ ಕಳೆದ ಮೂರು ತಲೆಮಾರುಗಳಿಂದಲೂ ಹಾನಗಲ್ಲ ತಾಲೂಕಿನ ಮಾರನಬೀಡ ಗ್ರಾಮದವರಾದ ದುರಗಪ್ಪ ಹನುಮಂತಪ್ಪ ಭಜಂತ್ರಿಯವರು ಶಹನಾಯ ಸೇವೆಯನ್ನು ನೀಡುತ್ತಿರುವುದು ವಿಶೇಷವಾಗಿದೆ. ಇವರ ನಂತರದಲ್ಲಿ ಪುತ್ರ ತಿರಕಪ್ಪ ಭಜಂತ್ರಿಯವರು ಮೊಮ್ಮಗ ಷಣ್ಮುಖಪ್ಪ ಭಜಂತ್ರಿಯವರೊಟ್ಟಿಗೆ ಹುಲಮನಿ, ಜಾಲಗೇರಿ, ವರ್ಧಿ ಮನೆತನದವರು ಸಹವರ್ತಿಗಳಾಗಿ ಸೇವಾಸೌಭಾಗ್ಯವಂತರಾಗಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿಕೊಂಡು ಬಂದವರಾಗಿದ್ದಾರೆ. ಅಲ್ಲದೇ ಬೀರೂರಿನ ಡಾ. ಶಶಿಕಲಾರವರು ತುಂಬೆ ಹೂಹಾರವನ್ನು ಪ್ರತಿ ವರ್ಷವೂ ಮಹಾಚಾರ್ಯರಿಗೆ ಅರ್ಪಿಸುತ್ತ ಬಂದಿದ್ದು ಅವರ ನಿರ್ಮಲ ಭಕ್ತಿಗೆ ಕನ್ನಡಿಯಾಗಿದೆ. ಲಕ್ಷ್ಮೀಶ್ವದ ಪಂಚಾಚಾರ್ಯ ಸೇವಾ ಸಂಘದವರು ಪಂಚವರ್ಣಗಳ ಧ್ವಜಗಳನ್ನು ಹಿಡಿದು ನಜರ್ ಅರ್ಪಿಸುತ್ತಿರುವುದೂ ಸಹ ಹಿಂದಿನಿಂದ ನಡೆದುಕೊಂಡು ಬಂದಿದೆ.
ಒಟ್ಟಾರೆ ಸಂಭ್ರದಿಂದ ಜರುಗುವ ದರ್ಬಾರ್ ಕಾರ್ಯಕ್ರಮಗಳು ಸಮೂಹ ಸಂಸ್ಕೃತಿಯನ್ನು ಬಿತ್ತರಿಸುವುದರ ಜೊತೆಗೆ ವೀರಶೈವ ಧರ್ಮದ ಮೂಲಾಂಶಗಳನ್ನು, ರಂಭಾಷುರಿ ಪೀಠದ ಪರಿಣಾಮಕಾರಿ ಪ್ರಬೋಧೆಗಳನ್ನು ನಾಡವರಲ್ಲಿ ತಿಳಿಗೊಳಿಸುವ ಸುಂದರ ಹಂದರವಾಗಿದೆ.
Phone
082662 50424
VISIT
6 am to 8 pm
info@rambhapuripeetha.org
Address
Rambhapuri Mutt Road, Narasimharajapura, Taluka, Balehonnur, Karnataka 577112