ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಬಾಳೆಹೊನ್ನೂರು
ನಮಃ ಸಾಂಬಾಯ ನಿತ್ಯಾಯ ಶಿವಾಯ ಪರಮಾತ್ಮನೇ |
ಷಟೀಂಶತ್ತತ್ತ್ವ ಬೀಜಾಯ ಲಿಂಗರೂಪಾಯ ಶಂಭವೇ ||
ವೀರಶೈವ ಮಹಾಪಂಚಪೀಠಗಳಲ್ಲಿ ಪ್ರಥಮ ಪೀಠವಾದ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ಮಹತ್ತರವಾದ ಇತಿಹಾಸ ಮತ್ತು ಪ್ರಸಿದ್ಧಿಯನ್ನು ಹೊಂದಿದೆ. ಘನತರ ಪರಂಪರೆಯುಳ್ಳ ಕರ್ನಾಟಕದಲ್ಲಿ ಧಾರ್ಮಿಕ ಸಾಹಿತ್ಯಾತ್ಮಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆಯುಳ್ಳ ಶ್ರೀ ಪೀಠವು ಅತ್ಯಂತ ಪ್ರಾಚೀನ ಕಾಲದಿಂದಲೂ ಆದರ್ಶ ಮಾರ್ಗದರ್ಶಿಯಾಗಿ ಸಮೂಹ ಸಂಸ್ಕೃತಿಯನ್ನು ಮೂಲತತ್ತ್ವ-ಸಿದ್ಧಾಂತಗಳ ಮೇಲೆ ಉಳಿಸಿ-ಬೆಳೆಸುತ್ತಿದೆ. ತನ್ನದೇ ಆದ ಬಹುಮುಖಿ ಚಿಂತನೆಗಳನ್ನು ಚೈತನ್ಯಯುತವಾಗಿ ಸಿದ್ಧಿ-ಸಾಧನೆಗಳ ಮುಖಾಂತರ ಪ್ರಚುರಪಡಿಸಿದ ಹಿರಿಮೆ ಹೊತ್ತಿದೆ. ಭಕ್ತಿ-ಜ್ಞಾನ-ಕ್ರಿಯೆಗಳ ಸಂಗಮವಾಗಿ ಉತ್ಕೃಷ್ಟತೆಯ ಸರಣಿಯನ್ನು ಸದಾ ಶಾಶ್ವತವಾಗಿ ಭಾರತೀಯರಿಗೆ ಒದಗಿಸುತ್ತಿದೆ. ಮಾನವೀಯ ಸಂಬಂಧಗಳನ್ನು
ಬೆಸೆಯುವಲ್ಲಿ, ಸಂಸ್ಕಾರಯುಕ್ತ ಸಮಾಜವನ್ನು ಕಟ್ಟುವಲ್ಲಿ ಗಟ್ಟಿಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿದೆ. ಪರಶಿವನ ಸದ್ಯೋಜಾತ ಮುಖೋದ್ಭವರಾದ ಹಾಗೂ ಆಂಧ್ರದ ನಲಗೊಂಡ ಜಿಲ್ಲೆಯ ಕೊಲನುಪಾಕ ಸುಕ್ಷೇತ್ರದ ಶ್ರೀ ಸೋಮೇಶ್ವರ ಶಿವಲಿಂಗದಿಂದ ಆವೀರ್ಭವಿಸಿದ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಮಾನವೀಯತೆಯ ಮಹಾಮಣಿಹವನ್ನೇ ಹೆಗಲ ಮೇಲೆ ಹೊತ್ತು ಮಾನವರ ಕಲ್ಯಾಣ ಮತ್ತು ಲೋಕೋದ್ಧಾರಕ್ಕಾಗಿ ‘ಕೊಲ್ಲಿಪಾಕಿಯಲ್ಲಿಯೇ ನೆಲೆನಿಲ್ಲದ ಸಮಸ್ತ ಜನಗಳ ಹಿತಕ್ಕಾಗಿ ನಾಡಿನೆಲ್ಲೆಡೆ ಸಂಚರಿಸುತ್ತ ಕರ್ನಾಟಕ ರಾಜ್ಯದ ಸೃಷ್ಟಿ ಸೌಂದರ್ಯಕ್ಕೆ ಹೆಸರಾದ ಮಲಯಾಚಲದ ಪವಿತ್ರ ಬೀಡಾದ ಚಿಕ್ಕಮಗಳೂರು ಜಿಲ್ಲೆಯ ಭದ್ರಾನದಿತಟದ ಬಾಳೆಹೊನ್ನೂರಿನಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸಂಸ್ಥಾಪಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರೇ ಕೃತಯುಗದಲ್ಲಿ ಶ್ರೀ ಜಗದ್ಗುರು ಏಕಾಕ್ಷರ ಶಿವಾಚಾರ್ಯರಾಗಿ, ತ್ರೇತಾಯುಗದಲ್ಲಿ ಶ್ರೀ ಜಗದ್ಗುರು ಏಕವರ ಶಿವಾಚಾರ್ಯರಾಗಿ, ದ್ವಾಪರಯುಗದಲ್ಲಿ ಶ್ರೀ ಜಗದ್ಗುರು ರೇಣುಕ ಶಿವಾಚಾರ್ಯರಾಗಿ ಮತ್ತು ಕಲಿಯುಗದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧಾರ್ಯರಾಗಿ ಅವತರಿಸಿ ವೀರಶೈವ ಧರ್ಮ ಪರಂಪರೆಯ ಸಿರಿಸಂಸ್ಕೃತಿಯನ್ನು ಔನ್ನತ್ಯಗೊಳಿಸಿದ್ದನ್ನು ಎಂದಿಗೂ ಮರೆಯಲಾಗದು.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭೂತಲೇ | ತದಾ ತದಾ ಅವತಾರೋಯಂ ಗಣೇಖಶಸ್ಯ ಮಹೀತಲೇ ॥
ಎಂಬ ಪರಶಿವನ ವಾಣಿಯಂತೆ ಧರ್ಮ ಸಂರಕ್ಷಣೆಗಾಗಿ ಜಗದಲ್ಲಿ ಅವತರಿಸಿ ಶಿವಜ್ಞಾನದ ಬೆಳಕನ್ನು ಹರಸಿದರು. ಕರ್ಮಕಳೆದು ಸುಜ್ಞಾನವನ್ನು ತುಂಬುವ ಧರ್ಮವನ್ನು ಬಿತ್ತಿ ಬೀರಿ ಬಂಗಾರಗೊಳಿಸಿದ ಶ್ರೇಯಸ್ಸು ಆದಿ ಪರಮಾಚಾರ್ಯರದು. ಮಲಯಾಚಲದ ಪವಿತ್ರ ನೆಲೆಯಲ್ಲಿ ನಿಂತು ಧರ್ಮಚಿಂತನೆ ಮತ್ತು ಆತ್ಮಮಂಥನವನ್ನು ಮಾಡುತ್ತಲಿದ್ದ ಪುರಾಣಮಣ್ಯಪುರುಷ ಕುಂಭಜನಾದ ಆಗ, ಮಹರ್ಷಿಗೆ ಜ್ಞಾನದಾಹ ಸಾಗರ ಸದೃಶ್ಯವಾಗಿತ್ತು. ಶಿವರಹಸ್ಯವನ್ನು ತಿಳಿಯಬೇಕೆಂಬ ಹಂಬಲವುಂಟಾಗಿತ್ತು, ಆತನ ಜಿಜ್ಞಾಸೆಯನ್ನು ತರಿಸಿದ ರೇಣುಕ ಭಗವತ್ಪಾದರು ವೀರಶೈವ ಧರ್ಮದ ಪರರು ರಹಸ್ಯವನ್ನು ಬೋಧಿಸಿದ್ದಲ್ಲದೇ, ಆತನಿಗೆ ಶಿವದೀಕ್ಷೆಯನ್ನಿತ್ತು ಹರಸಿದರು. ಆಚಾರ್ಯರು ಬೋಧಿಸಿದ ಸಾರವೇ ಸಿದ್ಧಾಂತ ಶಿಖಾಮಣಿ”. ಅದುವೇ ವೀರಶೈವ ಧರ್ಮಗ್ರಂಥ, ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಆದ್ಯತೆಯನ್ನು ಕೊಟ್ಟ ಶ್ರೀ ರೇಣುಕ ಗಣಾಧೀಶ್ವರರು ಅದ್ಭುತ ಸಾಮಾಜಿಕ ಮತ್ತು ಧಾರ್ಮಿಕ ಸತ್ಕಾಂತಿಯನ್ನು ಮಾಡಿದರು.
ಕೃಷಿ ಕಾಂತಿಯನ್ನೇ ಮೊದಲಾಡಿ ನೂರೊಂದು ಶಾಂತಿಗೈದ ಮಹಾಭಗಭಾದ ರೇಣುಕ ಜಗದ್ಗುರುಗಳು ಶಿವಭಕ್ತಾದ ರಾವಣನ ಅಭೀಷ್ಟೆಯಂತೆ ತ್ರಿಕೋಟಿ ಶಿವಲಿಂಗಗಳನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸಿದರು. ಮಾತಂಗ, ಶಿಂಶುಮಾರ, ಡಿಂಡಿಮಾರು ಶತಾನಂದ, ಸತ್ಯೇಂದ್ರ, ಮಣಿಭದ್ರ ಮೊದಲಾದವರನ್ನು ಧರ್ಮ-ಸಂಸ್ಕೃತಿಯ ಸಂವರ್ಧನೆಗೆ ಪ್ರೇರೇಪಿಸಿದರು. ಭೂರುವ ಭಕ್ತ ಸಂಘಗಳನ್ನು ಸಂಸ್ಥಾಪಿಸಿ ಶಿವಾರೈನ ಸಿದ್ಧಾಂತವನ್ನು ಉತ್ತುಂಗಕ್ಕೇರಿಸಿದರು. ಬೇಡಿಬಂದವರಿಗೆ ಅಭಯವಿಟ್ಟು ತೊರೆದರು. ಅಧರ್ಮದ ಮದವಳದು ಶಿವಜ್ಞಾನವೆಂಬ ಶಿಖರಗಾಮಿಗಳನ್ನಾಗಿಸಿದರು. ಸಂಸ್ಕಾರಶೀಲತೆಗಳು ಯುಗಾಂತ್ಯದವರೆಗೂ ಉಳಿಯುವಂತೆ ಮೊರೆದರು, ಹರನಿಗೂ ಗುರುವಾಗಿ ಜಗದ ಜನರ ಜಂಜಡ ತೊಳೆದು ಮಹಾಜಗದ್ಗುರುವಾಗಿ ಜಗದಗಲ ಮುಗಿಲಗಲ ವ್ಯಾಪಿಸಿ ಜಾಗೃತ ಬದುಕನ್ನು ಅನುಗ್ರಹಿಸಿದರು.
ಶ್ರೀ ಮುದೇನಗಿಸಿದೃಶ್ಯ ಕುಲ್ಯಪಾಠ ಚಲೋತ್ತಮೇ | ಸೋಮೇಶಲಿಂಗಾಜ್ಜನನ ಮಾವಾಸ: ಕದಲೀಮರೇ
ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದರು ಕಲಿಯುಗಾರಂಭದಲ್ಲಿ ಅವತರಿಸಿ 700 ವರ್ಷಗಳ ಕಾಲ ವ್ಯಕ್ತವಾಗಿ, 700 ವರ್ಷಗಳ ಕಾಲ ಅದೃಶ್ಯವಾಗಿ ಸಂಚರಿಸಿ ವೀರಶೈವ ಧರ್ಮ-ಸಂಸ್ಕೃತಿಯನ್ನು ಉತ್ತುಂಗಗೊಳಿಸಿದರು. ಅಣಿಮಾದಿ ಅಷ್ಟಸಿದ್ಧಿಗಳನ್ನು ಪಡೆದ ಶ್ರೀ ಜಗದ್ಗುರು ರೇವಣಸಿದ್ಧ ಭಗವತ್ಪಾದರು ಶ್ರೀ ಪೀಠದ ಇತಿಹಾಸದಲ್ಲಿ ಅಚ್ಚಳಿಯದ ಪ್ರಭಾವಬೀರಿದ ಪ್ರಭಾಕರರು, ಅವರ ಕ್ರಿಯಾಕರ್ತೃತ್ವಶಕ್ತಿಗೆ ಸಮನಾದ ಇನ್ನೊಂದು ಶಕ್ತಿ ಇಲ್ಲವೇ ಇಲ್ಲ. ಶಿವಬೆಳಕನ್ನು ಹಂಬಲಿಸಿದ ಶ್ರೀ ಶಂಕರಾಚಾರ್ಯರಿಗೆ ಶ್ರೀ ಚಂದ್ರಮೌಳೀಶ್ವರ ಲಿಂಗ ಮತ್ತು ರತ್ನಗರ್ಭ ಗಣಪತಿಯನ್ನು ಅನುಗ್ರಹಿಸಿದ್ದು ಶೃಂಗೇರಿಯ ಗುರುವಂಶಕಾವ್ಯದಲ್ಲಿ ನಿರೂಪಿಸಲ್ಪಟ್ಟಿದೆ.
ಕಾಂಚೀಕ್ಷೇತ್ರದಲ್ಲಿ ವಿಪ್ರರ ಅವಧಾನದಿಂದ ಚಲಿಸುತ್ತಿದ್ದ ವರದರಾಜನ ಮಸ್ತಕವನ್ನು ನಿಲ್ಲಿಸಿ ಚೋಳಭೂಪಾಲ ರಾಜನಿಗೆ ಆಶೀರ್ವದಿಸಿದ್ದು, ಅನುಪಮ, ವೀರಬಿಜ್ಜಳನಿಗೆ ಖಡ್ಗ ಪ್ರಾಪ್ತಿಗಾಗಿ ಹನ್ನೆರಡು ಸಾವಿರ ಕನ್ನಿಕೆಯರ ಬಲಿದಾನ ತಡೆದ ಆಚಾರ್ಯರು ಮಾನವೀಯತೆ ಮೆರೆದರು. ಕೊಲ್ಲಾಪುರ ಗೋರಕ್ಷನಾಥನ ಗರ್ವಭಂಜಿಸಿ, ಕಲ್ಯಾಣದ ಕಲ್ಲಿಶೆಟ್ಟಿಗೆ ಸಿರಿವಂತಿಕೆಯಿತ್ತು, ರೈತರಿಗೋಸ್ಕರ ಕೆರೆ ಕಡೆದ ಆಚಾರ್ಯರು ಚೆಂಗಣಗಲ ಅನುಭವ ಮಂಟಪವನ್ನು ಕಟ್ಟಿದರು. ಸಾಮಾಜಿಕ ಸಮತೆ, ಆಶೋದ್ಧಾರ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ, ದಾಸೋಹ, ಅರವಟ್ಟಿಗೆ, ಭೂರುದ್ರ-ರುದ್ರಾಣಿ ಸಂಘಗಳ ಸ್ಥಾಪನೆ, ಬಡಜನರ ಉದ್ಧಾರ, ರೈತ ಸಮುದಾಯದ ಕಳಕಳಿ ಮೊದಲಾದ ಸಮಾಜಮುಖಿ ಚಿಂತನೆಗಳಿಗೆ ಮುಂದಾಗಿ ಸಾಮರಸ್ಯವನ್ನುಂಟು ಮಾಡಿದರು.
ಸರ್ವರೊಂದಿಗೂ ಬೆರೆತು ಧರ್ಮ ಸಂಸ್ಕೃತಿ ಕಟ್ಟಿ ಬೆಳೆಸಲು ಶ್ರಮಿಸಿದರು. ಅವರು ಮಾಡಿದ ಸಾಮಾಜಿಕ ಮತ್ತು ಧಾರ್ಮಿಕ ಸತ್ಕಾಂತಿ ಎಲ್ಲಾ ಕ್ರಾಂತಿಗಳಿಗೂ ಮೂಲ ನೆಲೆ-ಸೆಲೆಯಾಗುಳಿದಿದೆ. ಅವರು ಪಾದವನ್ನಿಟ್ಟ ಸ್ಥಳಗಳು ಇಂದಿಗೂ ಪಾವನ ಕ್ಷೇತ್ರಗಳಾಗಿ ಪೂಜೆಗೊಳ್ಳುತ್ತಿವೆ. ಭಕ್ತಿ-ಶೃದ್ಧೆಯಿಂದ ಬಾಗಿ ಬರುವ ಭಕ್ತರಿಗೆ ವರದಾನವಾಗಿದೆ. ಧರ್ಮ ಸಂಸ್ಥಾಪಕರಾಗಿ, ಯುಗಪವರ್ಧಕರಾಗಿ, ಪ್ರಪಂಚ ಮತ್ತು ಪಾರಮಾರ್ಥಗಳ ಅರಿವನ್ನು ಜನಮನದಲ್ಲಿ ಮೂಡಿಸಿ ಜಾಗೃತಿಗೈದರು, ನೊಂದವರ, ನಿರ್ಗತಿಕರ ಧ್ವನಿಯಾಗಿ ಜನಸಾಮಾನ್ಯರ ಬಾಳಿನಲ್ಲಿ ಗೆಲವು ಮತ್ತು ನಗೆಯನ್ನು ತುಂಬಿದರು. ದುಷ್ಟ ದುರಹಂಕಾರಿಗಳ ದರ್ಪವಳಿದು ಶಿವಕಳೆಯ ಸಂಪದವನ್ನಿತ್ತರು. ಆರೋಗ್ಯಪೂರ್ಣ ಸಮುದಾಯ ನಿರ್ಮಿಸಿದ್ದಲ್ಲದೇ ಅತ್ಯಮೂಲ್ಯವಾದ ಮಾನವೀಯ ಮೌಲ್ಯಗಳನ್ನಿತ್ತು ಪೊರೆದರು.
ಅಗಣಿತ ಪ್ರಮಾಣದ ಸಮಾಜೋಧಾರ್ಮಿಕ, ಸಮಾಜೋಸಾಂಸ್ಕೃತಿಕ ಕಾರ್ಯವೆಸಗಿದ ಶ್ರೀ ರಂಭಾಪುರಿ ಪೀಠದ ಪರಮ ಶಕ್ತಿಗಳಾಗಿ ನಾಡವರ ನಾಡಿಯಲ್ಲಿ ಮೂಲಧರ್ಮದ ಚಲನವನ್ನಿರಿದರು. ಹೃದಯಬಡಿತದಲ್ಲಿ ಶಿವಾಂಕುರವಿರಿಸಿ ಶಿವಕಳೆಯ ಬೆಳಕನ್ನು ಹೊಮ್ಮಿಸಿದರು. ಉಸಿರಿಗೆ ಆಮ್ಲಜನಕವಾಗಿ ಹಸಿರು ಪೀಠದ ಕಂಪನ್ನು ಬಿತ್ತರಿಸಿದರು. ಹೃದಯವೈಶಾಲ್ಯತೆಯನ್ನು ಎತ್ತರಿಸಿದರು.
ಪಂಚ ಪೀಠಗಳಲ್ಲೇ ಪ್ರಥಮ ಪೀಠವಾದ ಬಾಳೆಹೊನ್ನೂರು ಶ್ರೀ ಮದ್ರಂಭಾಪುರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ನಾಡಿನಾದ್ಯಂತ ಸರಿಸುಮಾರು 12,000 ಕ್ಕಿಂತಲೂ ಅಧಿಕ ಶಾಖೆಗಳನ್ನು ಹೊಂದಿದ್ದು, ಅವುಗಳೆಲ್ಲವೂ ಪುರಾತನ ಕಾಲದಿಂದಲೂ ಸಮಾಜೋಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬಂದಿವೆ. ನೊಂದವರ ಧ್ವನಿಯಾಗಿ, ಅದೆಷ್ಟೋ ಜನರಿಗೆ ದಾರಿದೀಪವಾಗಿವೆ, ಬಾಳಗೆ ಬೆಳಕನ್ನು ಚೆಲ್ಲಿವೆ.
ಶ್ರೀ ಜಗದ್ಗುರು ರಂಭಾರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮನಾಯಕರಾಗಿ ಕಂಡರೆ ಗೋತ್ರಮರುಷ ಕ್ಷೇತ್ರನಾಥನಾಗಿ ಶ್ರೀ ವೀರಭದ್ರಸ್ವಾಮಿ ಪೂಜೆಗೊಳ್ಳುತ್ತಿದ್ದಾನೆ. ಶ್ರೀ ವೀರಭದ್ರಸ್ವಾಮಿಯ ಕ್ರಿಯಾಕರ್ತೃತ್ವ ಶಕ್ತಿ ಸಣ್ಣದಲ್ಲ. ದುಷ್ಟರ ಸಂಹಾರ, ಶಿಷ್ಟರ ಸಂರಕ್ಷಣೆ ವೀರಭದ್ರಸ್ವಾಮಿಯ ಅವತಾರದ ಮೂಲ ಉದ್ದೇಶ, ದಕ್ಷಬ್ರಹ ದುರಹಂಕಾರದಿಂದ ಶಿವನಿಗೆ ಅಗೌರವ ನಿಂದನೆ ಮಾಡಿದ್ದಕ್ಕಾಗಿ ಶಿವನ ಜಡೆಯಿಂದ ಅವಿರ್ಭವಿಸಿ ಬಂದಾನನೇ ಶ್ರೀ ವೀರಭದ್ರಸ್ವಾಮಿ, ದಕ್ಷಬ್ರಹ್ಮನನ್ನು ಸಂಹರಿಸಿ, ಶಿವಪಾರಮ್ಯವನ್ನು ಮೆರಸಿದ್ದನ್ನು ಕಾಣಬಹುದು. ದಕ್ಷನ ಹೆಂಡತಿ ಶಚಿದೇವಿ ಪ್ರಾರ್ಥಿಸಿಕೊಂಡಾಗ ಕುರಿಯ ತಲೆಯತ್ತು ಮತ್ತೆ ಜೀವದಾನ ಮಾಡಿದ ಕೀರ್ತಿ, ವೀರಭದ್ರನಿಗೆ ಸಲ್ಲುತ್ತದೆ. ನಾಡಿನ ಯಾವುದೇ ಭಾಗದಲ್ಲಿ ವೀರಭದ್ರಸ್ವಾಮಿ ನೆಲೆಗೊಂಡಿದ್ದರೂ, ಆತನ ಮೂಲಶಕ್ತಿ ಕೇಂದ್ರ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರೀ ಪೀಠ ಎಂಬುದನ್ನು ಯಾರೂ ಮರೆಯುವಂತಿಲ್ಲ.
ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಪ್ರಾಚೀನ ದೇವಾಲಯದ ಬಲಭಾಗದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಶ್ರೀ ಸೋಮೇಶ್ವರ ನಾಮಾಂಕಿತ ಶಿವಲಿಂಗದ ಶಿಬಲಯವಿದೆ. ಎಡಭಾಗದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧರಿಂದ ಶ್ರೀ ಶಂಕರಾಚಾರ್ಯರಿಗೆ ಕೊಡಲ್ಪಟ್ಟ ಚಂದ್ರಮೌಳೀಶ್ವರ ಲಿಂಗ ಪ್ರದಾನ ಮಾಡುವ ಶಿಲಾಮೂರ್ತಿಯಿದೆ ಮತ್ತು ಗಣೇಶನ ಮಂಗಲ ವಿಗ್ರಹವಿದೆ. ಎಲ್ಲ ಶಿವಾಲಯಗಳಲ್ಲಿ ದೇವರಿಗೆ ಎದುರಿಗಿರುವ ನಂದಿ ಒಂದಾಗಿದ್ದರೆ ಶ್ರೀ ರಂಭಾಪುರಿ ಪೀಠದಲ್ಲಿರುವ ಶ್ರೀ ವೀರಭದ್ರಸ್ವಾಮಿಯ ದೇವಸ್ಥಾನದಲ್ಲಿ ಜೋಡು ನಂದಿ ಇರುವುದು ಮತ್ತೊಂದು ವಿಶೇಷ, ಇದು ಅಪೂರ್ವ ಪ್ರಾಚೀನ ಇತಿಹಾಸ ಸಂಸ್ಕೃತಿಗೆ ಪೂರಕವಾಗಿದೆ ಎಂಬುದನ್ನು ಗ್ರಹಿಸಬೇಕಾಗಿದೆ. ಕ್ಷೇತ್ರದ ಶಕ್ತಿದೇವತೆಯಾಗಿ ಶ್ರೀ ಚೌಡೇಶ್ವರಿ ಪೂಜೆಗೊಳ್ಳುತ್ತಿದ್ದಾಳೆ, ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೂ ಚೌಡೇಶ್ವರೀ ದೇವಾಲಯಕ್ಕೂ ನಿತ್ಯ ಸಂಚಾರ ಇರುತ್ತಿರುವ ಮಹಿಮೆಯನ್ನು ಪೂರ್ವಜರು ಹೇಳುವುದುಂಟು. ಮದುವೆಗಾಗಿ, ಮಕ್ಕಳಿಗಾಗಿ, ಕಷ್ಟಗಳ ಪರಿಹಾರಕ್ಕಾಗಿ ಶ್ರೀ ಚೌಡೇಶ್ವರಿಯನ್ನು ಪ್ರಾರ್ಥಿಸಿ ಹರಕೆ ಕಟ್ಟಿ ಪೂಜಿಸಿದರೆ ಅವರವರ ಮನೋ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಬಲವಾದ ನಂಬಿಕೆ ಇವತ್ತಿಗೂ ಇದೆ. ದಿನನಿತ್ಯದಲ್ಲಿ ಶ್ರೀ ಚೌಡೇಶ್ವರಿಗೆ ವಿಶೇಷ ಪೂಜೆ ನಡೆಯುತ್ತದೆ.
Phone
082662 50424
VISIT
6 am to 8 pm
info@rambhapuripeetha.org
Address
Rambhapuri Mutt Road, Narasimharajapura, Taluka, Balehonnur, Karnataka 577112