b

Awards

ಶ್ರೀಮದ್ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವು ನಾಡಿನ ವಿವಿಧ ಸಾಧಕರುಗಳಿಗೆ ಅನುಗ್ರಹಿಸಿದ ಪ್ರಶಸ್ತಿ ಪರಮಾಶೀರ್ವಾದ

ಸೃಷ್ಟಿಯ ಷಷ್ಠಿ ಸಂವತ್ಸರಗಳು ಇಮ್ಮಡಿಯಾಗಿ ಪುನರಾವರ್ತನೆಗೊಳ್ಳಲೆಂಬಾಶಯದಿ ಪ್ರಗತಿ ಪ್ರಭುವೆಂದೂ ಶಿವಾತ್ಮನವರ ಅಧ್ಯಾತ್ಮದ ಅದ್ರೆಯರೆಂದೇ ಭೂಮಿಯ ಅಧೈರ್ಯರೆಂದೇ ಭೂಮಿಯ ಒಡೆತನದ ಮಾಲೀಕರಾದ ಶ್ರೀ ಮದ್ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳವರು ಶ್ರೀ ಪೀಠದ ಯುಗಮಾನದ ಇತಿಹಾಸ ಹೊಂದಿ, ಪರಂಪರಾಗತವಾಗಿ ನಡೆದು ಬಂದಿರುವಂತೆ ದಸರಾ ದರ್ಬಾರ್ ಸಮಾರಂಭವು ಪ್ರಸ್ತುಾಚಾರ್ಯರ ಸಾನ್ನಿಧ್ಯದಲ್ಲಿ ಪ್ರತಿವರ್ಷವೂ ಕಾಣೋಕ್ತ ರೀತಿಯಲ್ಲಿ ಅನಾವರಣಗೊಳ್ಳುತ್ತದೆ. ಅಂತೆಯೇ ಶ್ರೀ ಸನ್ನಿಧಿಯು ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ವೈದ್ಯಕೀಯ, ಕೃಷಿ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಅತ್ಯುನ್ನತವಾದ ಪ್ರಾಮಾಣಿಕ ಸೇವೆಗೈದ ಸೇವಾರ್ಥಿ ಸಜ್ಜನ ಗಣ್ಯಮಾನ್ಯ ಶ್ರೇಷ್ಠರಿಗೆ ಮತ್ತು ಪ್ರೇರಣೆ-ಪ್ರೋತ್ಸಾಹ ತುಂಬುವ ದೆಸೆಯಲ್ಲಿ, ಪ್ರತಿಭೆಗಳನ್ನು ಪ್ರಚೋದಿಸಿ ವೇದಿಕೆ ಒಗ್ಗೂಡಿಸುವಲ್ಲಿ ದೂರದೃಷ್ಟಿ ಮತ್ತು ವಿಶಾಲಮನೋಭಾವದೊಂದಿಗೆ ಹಲವು ವಿಶಿಷ್ಠ ಪ್ರಶಸ್ತಿಗಳನ್ನಿತ್ತು ಆಶೀರ್ವದಿಸುತ್ತಿರುವರು.

ವೀರಶೈವ ಧರ್ಮ ಪರಂಪರೆಯ ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತುಂಗಗೊಳಿಸಿದ. ಶ್ರೀ ಪೀಠದ ದಸರಾ ಮಹೋತ್ಸವದಲ್ಲಿ ಕ್ರಿಯಾಶೀಲ ಸಾಂಸ್ಕೃತಿಕ ಮೌಲ್ಯ ಸಂರಕ್ಷಕರಿಗೆ ಅನುಗ್ರಹಿಸುತ್ತಿರುವ ಪ್ರಶಸ್ತಿಗಳ ಸರತಿಸಣ್ಣದೇನಿಲ್ಲ…! ಅದು ಭವಿಷ್ಯತ್ತಿನ ಬಿಂಬಕ, ಪಡೆದವರಿಗಂತೂ ಮಣ್ಯ ಸದೃಶತೆ, ಹಾಗಾಗಿಯೇ ಸನ್ನಿಧಿ ಸರ್ವರ ಆರಾಧ್ಯ ಪರಮಗುರು, ಸೂಕ್ತ ಪ್ರತಿಭೆ.. ನಿದ್ಧ ಕಾಯಕ, ಪ್ರಬುದ್ಧ ವ್ಯಕ್ತಿತ್ವ, ಸಂಪೂರ್ಣ ಸೇವಾಭಾವಗಳನ್ನು ಅವಲೋಕಿಸಿ ಅನುಗ್ರಹಿಸುತ್ತ ಅನುಗಾಲವೂ ಪೋಷಿಸುತ್ತಿರುವುದು ಶ್ರೀ ಜಗದ್ಗುರುಗಳವರ ಕಾಳಜಿಯುಕ್ತ ಮಾತೃತ್ವಕ್ಕೆ ಹಿಡಿದ ಕನ್ನಡಿ.

ಇಂತಹ ಮಹಿಮಾಶಾಲಿತ್ವದ ಮಹಾಚಾರ್ಯರು ಆಶೀರ್ವದಿಸುತ್ತಿರುವ ಪ್ರಶಸ್ತಿಗಳ ಸರತಿಯನ್ನೊಮ್ಮೆ ಇಲ್ಲಿ ಅವಲೋಕಿಸಬಹುದು: ಧರ್ಮಗುಪ್ತನಿಗೆ ‘ದ್ವಿತೀಯ ಪರಮೇಶ್ವರ’ ಎಂಬ ಬಿರುದನ್ನು ದಯಪಾಲಿಸಿದ ರೇಣುಕರು ಅಂತೆಯೇ ಹಲವಾರು-ಸಹಸ್ರಾರು ಲಕ್ಷಾಂತರ ಭಕ್ತರಿಗೆ-ಶಿಷ್ಯರಿಗೆ ಪದವಿ-ಬಿರುದಾವಳಿಗಳನ್ನು ನೀಡಿದುದರ ಕುರಿತಾಗಿ ದೊರೆತ ಮಾಹಿತಿಗಳಂತೆ ಹಾಗೂ ಪರಂಪರೆಯ ಪರಮಾಚಾರ್ಯರು ಅನುಗ್ರಹಿಸಿ ಆಶೀರ್ವದಿಸಿರುವ ಪದವಿಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ: ಘನತತ್ಯಾಚಾರಶೀಲ, ತತ್ತ್ವನಾಥಾಚಾರಶೀಲ, ಶಿವತತ್ಯಾಚಾರಶೀಲ, ಜಿತೇಂದ್ರಿಯ ಸರಿ, ಮಂತ್ರಕ್ರಾಂತಿ ಪುರುಷ, ವೀರಶೈವ ಪ್ರವರ್ತಕಶೀಲ, ವೀರಶೈವ ಮತಾತ್ಮಕತತ್ತ್ವ ಪಾಲಕ, ಔಪಾಧಿಕಮೋಕ್ಷಧಾತಿ, ತತ್ತ್ವನಾಥಶೀಲ, ಶಿವಸೂತ್ರಧಾರಿ, ತತ್ತ್ವ ಅಚನನಿಷ್ಠಾಸ್ವರೂಪಿ, ಮಂತ್ರಲಕ್ಷಣಲಕ್ಷಿತ,ಮಂತ್ರಾರ್ಥ ಪಾರಗ, ದೀಕ್ಷಾಂಗಶ್ರೇಷ್ಠ, ಮಂತ್ರದೀಪ್ತಾಂಗಿ, ತತ್ವಾರ್ಥಿ, ಲಿಂಗತತ್ತ್ವ ಪ್ರವೀಣ, ದೀಕ್ಷಾಮಂತ್ರವಿಶಾರದ, ಅನರ್ಥ್ಯರತ್ನ, ಆಸ್ಥಾನವಿದ್ವಾನ್, ನೀತಿಶಾಸ್ತ್ರಕೋವಿದ, ಆಸ್ಥಾನ್ ಮಹಾವಿದ್ವಾನ್, ವಾದಸರಣಿಕ, ಅಖಿಳಾಗಾರ್ಥಜ್ಞ, ಪಂಡಿತರತ್ನ, ಶಿವಾನ್ವಿತ ತಪಸ್ವಿ, ನಂದಾದೀಪ್ತಿ, ಪ್ರಕೃಷ್ಣಪ್ರಜ್ಞಾರ್ಥಿ, ದಾಸೋಹಧರ್ಮಿ, ಲಿಂಗಯಜ್ಯೋತಿ, ಜಡಮೋಕ್ಷಾರ್ಥಿ, ಮುನಿಪುಂಗಶೃಂಗ, ನವರತ್ನರಿರೋಮಣಿ, ವೀರ, ಭದ್ರ, ಭಕ್ತಾಂಗಿ, ವೇದವೇದಾಂತಿ, ವೇದಶಾಸ್ತ್ರಕೋವಿದ, ಉಭಯತೇಜಸ್ವಿ, ಕಾರುಣ್ಯದೀಪ್ತಿಕ, ಲಿಂಗದೀಕ್ಷಾದೀಪ್ತಾಂಗಿ, ವೀರಮಾಹೇಶ್ವರಾಚಾರಶೀಲ, ಚರಚಕ್ರವರ್ತಿ, ವೀರಭದ್ರಾಚಾರಿ, ಸೂರ್ಯ ಚಂದ್ರತಾರಕ-ಸಿದ್ಧಾಂತ ಕೋವಿದ, ತಂಪತೊಂಪಿನದೃಷ್ಠಾರ, ವೇದವೇದಾಂಗ ಪಾರಂಗತ, ವ್ಯಾಕರಣತೀರ್ಥ, ವಿದ್ಯಾನಿಧಿ, ವಿದ್ವತ್‌ ಪ್ರತಿಭೆ, ವೇದತಿರ್ಥ ವೇದಶಾಸ್ತ್ರಋಣಿ. ವಾಕ್ ಚತುರ, ಸರ್ವಾಗಮತೀರ್ಥ, ಅನ್ನದಾತ, ಕೃಷಿಕುಲತಿಲಕ, ಪೂರ್ವಾಪರಸ್ಥಿತಿಗತಿದೃಷ್ಟಾರ, ಶಸ್ತ್ರಚಿಕಿತ್ಸಾ ಪ್ರವೀಣ, ಶಸ್ತ್ರಚಿಕಿತ್ಸಾ ನಿಮಣ, ಕುಂಚಶ್ರೀ, ಬೋಧಕಾರಣ, ಕಲಾಭಿಜ್ಜ, ಸ್ವತಂತ್ರರಿರೋಮಣಿ, ವಿಭಾವನಕಲಾರೀ, ಕಲಾಕುಲತಿಲಕ, ಕಲಾಕಿಯಾತಿಲಕ, ಕಲಾ ಕ್ರಿಯಾಪ್ರವೀಣ, ಸ್ವಾವಲಂಬಿನಸಂಪಾದಕ, ಅರ್ಚನಾರ್ಪಣಾನುಭವಿ, ಅರ್ಚನಾರ್ಪಣ ಪ್ರವೀಣ, ಗುರುಚರಣಾಂಭುಜ ಸೇವಕ, ಪ್ರಜಾಹಿತಾದೇಶ. ಶಾಸ್ತ್ರಮಾರ್ಗಿ, ಸತ್ಯಸಂಧರಿ, ಮುಕ್ತಿಮೂಲಗುರುಸೇವಕ, ತ್ಯಾಗಶೀಲಸಿರಿವಂತ, ತ್ಯಾಗಶೀಲಜೀವಿ, ವಾದ್ಯಪ್ರವೀಣ, ಸುವರ್ಣಕಂಕಣ ರಾಜಪಟು, ವೈದ್ಯಶಿರೋಮಣಿ, ವಿದ್ಯಾಲಂಕಾರ, ಶ್ರೇಷ್ಠರಮಿಕ, ಕೃಷಿಕುಲಪಾಲಕ, ಆಯಶ್ರೇಷ್ಠ, ಕೃಷಿಋಷಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಶಿವಾಚಾರ್ಯ ರತ್ನ, ವೀರಶೈವ ಸಿರಿ, ರಂಭಾಪುರಿ ಯುವಸಿರಿ, ಸಾಹಿತ್ಯ ಸಿರಿ, ಸಾಧನೆ ಸಿರಿ, ಮಹಾಚಾರ್ಯ, ಸೇವಾ ವಿಭೂಷಣ, ಗುರುಕಾರುಣ್ಯ ಸಿಂಧು, ಸಮಾಜಸೇವಾ ರತ್ನ, ಆಚಾರನಿಷ್ಠ ಪ್ರಭುದ್ಧ, ಧರ್ಮಸೇವಾ ದೀಪ್ತಿ, ಜನಸೇವಾ ಪ್ರಕಾಶಕ, ಜನಸೇವಾ ಗುಣಸಂಪನ್ನೆ, ಪ್ರಜಾಹಿತ ಚಿಂತಕ, ಧರ್ಮತತ್ವ ಪ್ರಬೋಧಕ, ಧರ್ಮತತ್ವ, ಪ್ರಬೋಧಕ, ಜನಮನೋಲ್ಲಾಸ ಪ್ರೇರಕ, ಜನಹಿತ ಚಿಂತಕ, ಸಮಾಜಸೇವಾ ರತ್ನ, ಗುರುಸೇವಾ ಪ್ರವರ್ಧಕ, ಪಂಚಾಚಾರ್ಯ ತತ್ತ್ವ ಪ್ರಬೋಧಕ, ಸಮಾಜಸೇವಾ ಸಿಂಧು, ಧರ್ಮತತ್ತ್ವ ಪ್ರಬೋಧಕ, ರಾಜಧರ್ಮ ಸುಧಾಕರ, ವೀರಶೈವ ಸಿದ್ಧಾಂತ ಶ್ರೀ, ಆಚಾರನಿಷ್ಠ ಪ್ರಭುದ್ಧ, ಜನಹಿತ ಅಂಶಕ, ಸಮನ್ವಯ ಶಿವಾಚಾರ, ಭೂಷಣ, ಧರ್ಮ ರತ್ನಾಕರ, ಸಂಘಟನಾ ಚತುರ, ಗುರುಸೇವಾ ಭೂಷಣ, ಸಂಸ್ಕೃತಿ ಸಂವರ್ಧಕ ರತ್ನ, ವೀರಭಕ್ತ ಶಿರೋಮಣಿ, ವೀರ ಧರ್ಮದರ್ಶಿ, ಕಾಯಕ ಪ್ರೇಮಿ, ಗುರುಭಕ್ತಿ ಭೂಷಣ, ಧರ್ಮಸೇವಾ ಭೂಷಣ, ಗುರುಸೇವಾ ದುರಂಧರ, ವಿಜಯ್‌ ವಿದ್ವನ್ಮಣಿ, ಗುರುಭಕ್ತಿ ಲೋಲ, ಗುರುಸೇವಾ ಭೂಷಣ, ಸಂಕಲ್ಪ ಸಿದ್ಧಿ ತರತ್ನ, ಜನಸೇವಾ ರತ್ನ, ನಿಜ ನಿರಂಜನಮೂರ್ತಿ, ಸದ್ಗುರು ಸೇವಾಪ್ರಭಾಕರ, ಗುಣ ಸಿರಿಗಂಧ, ಸಂಸ್ಕೃತಿ ಸಂವರ್ಧಕ ರತ್ನ, ಗುರುಸೇವಾ ವಿಭೂಷಣ, ಧರ್ಮಸಾಹಿತ್ಯ ಸಂವರ್ಧನ ಸಿಂಧು, ಗುರು ಭಕ್ತಿ ಭೂಷಣ, ಆಚಾರ್ಯ ತತ್ವ ಪ್ರಸಾರಕ, ಗುರು ಭಕ್ತಿ ಚಂದ್ರಿಕಾ, ಕಾಯಕ ಯೋಗಿ, ಆಚಾರ್ಯ ಸೇವಾ ವಿಭೂಷಣ, ಸಾಧನೆಯ ಸಿರಿರತ್ನ, ಆಚಾರ್ಯ ತತ್ವ ಪ್ರಬೋಧಕ, ಮೌನ ಮುನಿ ಭೂಷಣ, ತಷೋಭೂಷಣ, ರತ್ನ, ಆಚಾರ್ಯ ತತ್ವ ಪರಿಪಾಲಕ, ಆಚಾರ್ಯ ತತ್ವ ರತ್ನಾಕರ, ಧರ್ಮ ಶಿಕ್ಷಣ ಸುಧಾಕರ, ಸಾಹಿತ್ಯ ದೀಪ್ತಿ, ವಾಗ್ಯೂಷಣ ರತ್ನ, ಶಿವಾಚಾರ ಸಂಪನ್ನ, ಸಾತ್ವಿಕ ಜಂಗಮ ಯೋಗಿ, ಗುರುಸೇವಾ ವಿಭೂಷಣ, ಶ್ರೀ ಜಗದ್ಗುರು ರೇಣುಕಸಿರಿ. ವೀರಶೈವ ಧರ್ಮ ವಿಭೂಷಣ, ವೀರಶೈವ ಧರ್ಮ ರತ್ನ, ಸುಜನಾಲಿ ಸಂರಕ್ಷಣಾಚಾರ್ಯ, ಸುಜನಾಲಿ ಸಂರಕ್ಷಣಾ ಚತುರ, ಮಹಿಳಾ ಐಸಿರಿ, ಕಲಾಕುಲತಿಲಕ, ಕಲಾಕುಲಚಂದ್ರಿಕೆ, ಧರ್ಮಸೇವಾಚಂದ್ರಿಕೆ, ಧರ್ಮಜ್ಞಾನಿ, ದಾನಶೂರ, ಸೇವಾಜೇಖರ, ಶಿವಭಕ್ತಿಸಂವರ್ಧಕ, ಸಾಹಿತ್ಯ ಸುಧಾಕರ, ಸಮಾಜಸೇವಾ ವಿಭೂಷಣ, ಶೋಧಬೋಧ ಪ್ರವೀಣ, ಶಸ್ತ್ರಚಿಕಿತ್ಸಾಸಿಂಧು, ಸದೈದ್ಯ ಶಿರೋಮಣಿ, ನಿಗಮಾಗಮ ಜ್ಯೋತಿ, ನಿಜನಿರಂಜನ, ಸುದ್ದಿಸುಧಾಕರ ರತ್ನ, ವಾರ್ಕಾವರ್ತುಲಶ್ರೇಷ್ಠ, ನಟಶೇಖರ, ಸಂಘಟನಾಚತುರ, ಸಹಕಾರ ಶಿರೋಮಣಿ, ದಾಸೋಹ ಬಂಧು, ಶಿವಾರೈತ ಭಾಸ್ಕರ, ಧರ್ಮ ಚಿಂತಾಮಣಿ, ಪ್ರಜಾ ಪರಿಪಾಲಕ, ವಾದಮೋದ ಶ್ರೇಷ್ಠ, ಧರ್ಮ ಪ್ರಕಾಶ, ಪ್ರಜಾಕುಲ ತಿಲಕ, ಸೇವಾ ಸಂಜೀವಿನಿ, ಸಾಹಿತ್ಯ ಶಿಲ್ಪಿ, ಸಮಾಜ ಸೇವಾ ಭೂಷಣ, ಗುರು ಸೇವಾರತ್ನ, ಗುರು ಕಂಠಾಭರಣ, ಗುರುಕುಲ ರತ್ನ, ಮಹಾಚಾರ್ಯ ಸೇವಾಧುರೀಣ, ಮಹಾಚಾರ್ಯ, ಮಣಿ, ಗ್ರಾಮಸೇವಾ ಮಂದಾರ, ಸಮನ್ವಯ ಸಿದ್ಧಾಂತಿ, ಶಿವಜೀವೈಶ್ಯ ಸಿದ್ಧಾಂತಿ, ಶಿವಜ್ಞಾನ ಪ್ರಬೋಧಕ, ಸದ್ಗುಣ ಸಂಪನ್ನ, ಆಚಾರ್ಯ ಸೇವಾಧುರೀಣ, ಆಚಾರ್ಯ ಕೃಪಾಸಿಂಧು, ಗುರುಕೃಪಾ ಕಾರುಣ್ಯ ಸಿಂಧು, ವೀರಶೈವಾಚಾರ ಮುಕುಟ, ಆಚಾರ್ಯ ಸೇವಾಚಂದ್ರಿಕೆ, ಮಹಾಚಾರ್ಯ ರತ್ನ, ಪರಮಾಚಾರ್ಯ ಪ್ರದೀಪಕ, ಅಭಿವೃದ್ಧಿಯ ಚಿಂತನ ರತ್ನ, ಜನಸೇವಾ ಧುರೀಣ, ಸರ್ವತ್ರ ಸಂಚಾಲಕ ಸೇವಾಭೂಷಿತ, ಸಂವೇದನಾ ಸೇವಾಗುಣ ರತ್ನ, ಪೂಜಾನುಷ್ಠಾನ ಶಕ್ತಿ ಸಂವರ್ಧಕ, ದಯಾಧರ್ಮ ಸಿರಿ, ಸಮಾಜ ಸೇವಾ ರತ್ನ, ಪರಂಪರಾ ಸಂವರ್ಧನ ರತ್ನ, ಶುದ್ಧಾಂತಃಕರಣ ಗುಣರತ್ನ, ವೇದವಿದ್ಯಾ ವಿಕಾಸ, ರತ್ನ, ಸಾತ್ವಿಕ ಶಕ್ತಿ ಸಿಂಧು, ಕ್ರಿಯಾಶೀಲ ಸಾಧನ ಸಿರಿ, ಗುರುತತ್ತ ಪರಿಪಾಲಕ, ಶಿವಾತ್ಮನ ಜ್ಞಾನ ಸಂವರ್ಧಕ, ಸಾಧನೆಯ ಸಹ್ಯಾದ್ರಿ, ಸದ್ಗುಣಶೀಲ ಸೇವಾರತ್ನ ಶುದ್ಧ ಸಾತ್ತಿಕ ಗುಣಶೇಖರ, ಸಂಗೀತ ಸುಧಾಕರ, ಕೃಷಿ ಋಷಿ, ಸೌಜನ್ಯ ಶಿರೋರತ್ನ, ಸಾಹಿತ್ಯ ಭೂಷಣ, ವೈದಿಕ ಶಿರೋಮಣಿ, ಸಮಾಜ ಸೇವಾ ಧುರೀಣ, ಯೋಗ ವಿದ್ಯಾಭೂಷಣ, ಕ್ರೀಡಾ ಕಣ್ಮಣಿ, ಸಜನ ಸೇವಾಸಿಂಧು, ಧರ್ಮ ರತ್ನಾಕರ, ಜನಸೇವಾ ರತ್ನ, ಕಲಾ ಕೌಸ್ತುಭ ಎಂಬಿತ್ಯಾದಿ ಪದವಿ-ಪ್ರಶಸ್ತಿಗಳನ್ನು ಅನುಗ್ರಹಿಸುತ್ತ ಬಂದಿರುವುದು ಇತಿಹಾಸವೇ ಆಗಿದೆ.

ವಿಶೇಷವಾಗಿ ನಾಡಿನಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಯುವ ಶರನ್ನವರಾತ್ರಿ ದಸರಾ ದರ್ಬಾರ ಕಾರ್ಯಕ್ರಮಗಳಲ್ಲಿ ವಿವಿಧ ರಂಗದ ಪ್ರತಿಭೆಗಳನ್ನು ಗುರುತಿಸಿ ಆಶೀರ್ವದಿಸುವುದರ ಜೊತೆಗೆ ನಾಡಿಗೆ ಪರಿಚಯಿಸುವ ದಿಶೆಯಲ್ಲಿ ಕೊಡಮಾಡಿದ ಪ್ರಶಸ್ತಿಗಳು

ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ

2001 ನೇ ಸಾಲಿನಲ್ಲಿ ಅಂತರ್‌ ರಾಷ್ಟ್ರೀಯ ಮಟ್ಟದ ವೈದ್ಯ ವಿಜ್ಞಾನಿ ಡಾ. ಸ. ಜ. ನಾಗಲೋಟಿಮಠ, ಬೆಳಗಾವಿ.

2002 ರಲ್ಲಿ ಶ್ರೀ ವೇ॥ ಬಾಲಚಂದ್ರ ಶಾಸ್ತ್ರಿಗಳು, ಚಿಕ್ಕಮಣ್ಣೂರ. 2003 ರಲ್ಲಿ ಶ್ರೀ ಷ. ಬ್ರ. ಚಂದ್ರಮೌಳೀಶ್ವರ ಶಿವಾಚಾರ್ಯರು, ತೆಗ್ಗಿನಮಠ, ಹರಪನಹಳ್ಳಿ

2004 ರಲ್ಲಿ ಡಾ. ಸಂಗಮೇಶ ಸವದತ್ತಿಮಠ, ಧಾರವಾಡ

2005 ರಲ್ಲಿ ಡಾ. ಜ್ಯೋತಿಪ್ರಕಾಶ ಮಿರ್ಜಿ, ಬೆಂಗಳೂರು

2006 ರಲ್ಲಿ ಶ್ರೀ ವಿ. ಸೋಮಣ್ಣ, ಬಿನ್ನಿಪೇಟೆ ಶಾಸಕರು, ಬೆಂಗಳೂರು, 2007 ರಲ್ಲಿ ಶ್ರೀ ಶಾಮನೂರು ಶಿವಶಂಕರಪ್ಪ, ಗೌರವ ಕಾರ್ಯದರ್ಶಿಗಳು, ಬಾಪೂಜಿ ವಿದ್ಯಾ ಸಂಸ್ಥೆ, ದಾವಣಗೆರೆ.

2008 ರಲ್ಲಿ ಶ್ರೀ ವಿಜಯ ಸಂಕೇಶ್ವರ, ಉದ್ಯಮಿಗಳು, ಹುಬ್ಬಳ್ಳಿ,

2009 ರಲ್ಲಿ ಸಂಗೀತಲೋಕದ ಮಾಂತ್ರಿಕ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ, ರಾಯಚೂರು

2010 ರಲ್ಲಿ ಹೃದಯ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಬೆಂಗಳೂರು. 2011 ರಲ್ಲಿ ರೈತ ಸಹಕಾರಿ ಧುರೀಣ ಶ್ರೀ ರುದ್ರಪ್ಪ ವೀರಪ್ಪ ಮೊಕಾಶಿ, ನಾವಲಗಟ್ಟಿ,

2012 ರಲ್ಲಿ ಶತಾಯುಷಿ, ಆಯುರ್ವೇದ ತಜ್ಞ ಶ್ರೀ ಷ|| ಬ್ರ| ಕರಿಬಸವೇಶ್ವರ ಶಿವಾಚಾರ್ಯರು, ಹೊನ್ನಕಿರಣಗಿ

2013 ರಲ್ಲಿ ರಂಗಭೂಮಿ ಹಿರಿಯ ಕಲಾವಿದ ನಾಡೋಜ ಶ್ರೀ ಏಣಗಿ ಬಾಳಪ್ಪ.

2014 ರಲ್ಲಿ ನೀರಾವರಿ ತಜ್ಞ ಶ್ರೀ ಜಿ.ಎಸ್. ಪರಮಶಿವಯ್ಯ, ತುಮಕೂರು. (ಮರಣೋತ್ತರ)

2015 ರಲ್ಲಿ ಸಂಗೀತಜ್ಞ ಪಂಡಿತ ಶ್ರೀ ರಾಜಗುರು ಗುರುಸ್ವಾಮಿ ಕಲಕೇರಿ, ಗದಗ,

2016 ರಲ್ಲಿ ಶ್ರೀ ಎ.ಎಸ್. ಕಿರಣಕುಮಾರ, ಅಧ್ಯಕ್ಷರು, ಭಾರತ ಬಾಹ್ಯಾಕಾಶ ಸಂಶೋಧನ ಸಂಸ್ಥೆ, ಬೆಂಗಳೂರು.

2017 ರಲ್ಲಿ ಶ್ರೀ ಷ|| ಬ್ರ|| ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಜುಕ್ತಿಹಿರೇಮಠ ಸೂಡಿ. 2018 ರಲ್ಲಿ ಶ್ರೀ ಮ.ನಿ., ಜಗದ್ಗುರು ಡಾ|| ಸಂಗನಬಸವ ಸ್ವಾಮಿಗಳು, ಕೊಟ್ಟೂರುಸ್ವಾಮಿಮಠ, ಹೊಸಪೇಟೆ, ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಧರ್ಮ ಸಂಸ್ಥೆ

2019 ರಲ್ಲಿ ಕನ್ನಡದ ಕಬೀರ, ಆಧ್ಯಾತ್ಮಿಕ ಪ್ರವಚನಕಾರ ಶ್ರೀ ಇಬ್ರಾಹೀಮ್ ಎನ್. ಸುತಾರ, ಮಹಾಲಿಂಗಪುರ, ಬಾಗಲಕೋಟ ಜಿಲ್ಲೆ

2020 ರಲ್ಲಿ ಮಾನವ ಕಂಪ್ಯೂಟರ್ ಶ್ರೀ ಬಸವರಾಜ ಶಂಕರ ಉಮರಾಣಿ, ಅಥಣಿ, ಬೆಳಗಾವಿ ಜಿಲ್ಲೆ 2021 ರಲ್ಲಿ ಖ್ಯಾತ ವೈದ್ಯರಾದ ಡಾ|| ಸುದರ್ಶನ್ ಬಲ್ಲಾಳ, ಅಧ್ಯಕ್ಷರು, ಮಣಿಪಾಲ ಆಸ್ಪತ್ರೆಗಳ ಸಮೂಹ, ಬೆಂಗಳೂರು

2022 ರಲ್ಲಿ ಶ್ರೀ ಜಿ. ಎಸ್. ಬಸವರಾಜ, ಸಂಸದರು, ತುಮಕೂರು ಕ್ಷೇತ್ರ ಇವರಿಗೆ ಪ್ರದಾನ ಮಾಡಲಾಗಿದೆ.

ಸಾಹಿತ್ಯ ಸಿರಿ ಪ್ರಶಸ್ತಿ

2010 ರಲ್ಲಿ ಸಾಹಿತಿ ದಾವಣಗೆರೆಯ ಶ್ರೀ ಮಳಲಕೆರೆ ಗುರುಮೂರ್ತಿ ಇವರಿಗೆ,

2011 ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಡಾ. ಮೀನಾಕ್ಷಿ ಖಂಡಿಮಠ ಇವರಿಗೆ,

2012 ರಲ್ಲಿ ಬೆಂಗಳೂರಿನ ಖ್ಯಾತ ಸಾಹಿತಿ ಡಾ. ಎಸ್. ವಿದ್ಯಾಶಂಕರ್ ಇವರಿಗೆ,

2013 ರಲ್ಲಿ ಧಾರವಾಡದ ಸಂಸ್ಕೃತ ವಿದ್ವಾಂಸ ಡಾ. ಮಲ್ಲಿಕಾರ್ಜುನ ಪರಡ್ಡಿ ಇವರಿಗೆ,

2014 ರಲ್ಲಿ ಹರಿಹರದ ಸಾಹಿತಿ ಪ್ರೊ. ಸಿ.ವಿ. ಪಾಟೀಲ ಇವರಿಗೆ,

2015 ರಲ್ಲಿ ಬೆಂಗಳೂರಿನ ಸಂಸ್ಕೃತ ವಿದ್ವಾಂಸ ಡಾ|| ಸಿ.ಶಿವಕುಮಾರಸ್ವಾಮಿ ಇವರಿಗೆ,

2016 ರಲ್ಲಿ ಶ್ರೀಶೈಲ ಶಾಖಾ ಹಣ್ಣೆಮಠದ ಶ್ರೀ ಷ|| ಬ್ರ| ಶಿವಾನಂದ ಶಿವಾಚಾರ್ಯ ಸ್ವಾಮಿಗಳಿಗೆ,

2017 ರಲ್ಲಿ ಬಬಲೇಶ್ವರದ ಶ್ರೀ ಷ||ಬ್ರ|| ಡಾ|| ಮಹಾದೇವ ಶಿವಾಚಾರ್ಯ ಸ್ವಾಮಿಗಳಿಗೆ,

2018 ರಲ್ಲಿ ಮಳ್ಳಿಯ ಅನುಭಾವಿ ಶ್ರೀ ಎಲ್. ಬಿ. ಕೆ. ಆಲ್ದಾಳ (ಲಾಲ್‌ಮಹ್ಮದ್) ಇವರಿಗೆ,

2019 ರಲ್ಲಿ ಸವಣೂರಿನ ಯುವ ಸಾಹಿತಿ ಡಾ. ಗುರುಪಾದಯ್ಯ ವೀ. ಸಾಲಿಮಠ ಇವರಿಗೆ,

2021 ರಲ್ಲಿ ಗದಗ ಜಿಲ್ಲೆ ಲಕ್ಷೇಶ್ವರದ ಸಾಹಿತಿ ಶ್ರೀಮತಿ ಜಯಶ್ರೀ ಮಲ್ಲಿಕಾರ್ಜುನ ಹೊಸಮನಿಯವರಿಗೆ ಪ್ರದಾನ ಮಾಡಲಾಗಿದೆ.

ಸಾಧನ ಸಿರಿ ಪ್ರಶಸ್ತಿ

2013 ರಲ್ಲಿ ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಷ|| ಬ್ರ|| ಚನ್ನವೀರ ಶಿವಾಚಾರ್ಯ ಸ್ವಾಮಿಗಳಿಗೆ,

2014 ರಲ್ಲಿ ಹೊನ್ನಾಳಿ ಹಿರೇಕಲ್ಮಠದ ಶ್ರೀ ಷ|| ಬ್ರ| ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಗೆ,

2015 ರಲ್ಲಿ ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಷ|| ಬ್ರ|| ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ,

2016 ರಲ್ಲಿ ಕಣ್ವಕುಪ್ಪಿ ಗವಿಮಠದ ಶ್ರೀ ಷ|| ಬ್ರ|| ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ 2017 ರಲ್ಲಿ ಬೆಳಗಾವಿ ಜಿಲ್ಲೆ ಕಟಕೋಳ-ಎಂ-ಚಂದರಗಿಯ ಶ್ರೀ ಷ|| ಬ್ರ|| ವೀರಭದ್ರ ಶಿವಾಚಾರ್ಯ ಸ್ವಾಮಿಗಳಿಗೆ

2018 ರಲ್ಲಿ ಚಿಮ್ಮಲಗಿ ಅರಳೆಲೆಕಟ್ಟಿ ಹಿರೇಮಠದ ಶ್ರೀ ಷ|| ಬ್ರ|| ನೀಲಕಂಠ ಶಿವಾಚಾರ್ಯ ಸ್ವಾಮಿಗಳಿಗೆ

2019 ರಲ್ಲಿ ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶ್ರೀ ಷ|| ಬ್ರ|| ಶಿವಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ

2021 ರಲ್ಲಿ ಬೀದರ ಜಿಲ್ಲೆ ಹುಡಗಿ ಹಿರೇಮಠದ ಶ್ರೀ ಷ|| ಬ್ರ|| ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ಪ್ರದಾನ ಮಾಡಲಾಗಿದೆ. 

ವೀರಶೈವ ಸಿರಿ ಪ್ರಶಸ್ತಿ

2007 ರಲ್ಲಿ ಬೆಂಗಳೂರಿನ ಶ್ರೀ ಎಸ್‌.ಎನ್. ಪಿನೋದ್ ಇವರಿಗೆ,

2008 ರಲ್ಲಿ ಹುಮನಾಬಾದ ತಾಲ್ಲೂಕಿನ ಶಾಸಕರಾದ ಶ್ರೀ ರಾಜಶೇಖರ ಪಾಟೀಲ ಇವರಿಗೆ

2009 ರಲ್ಲಿ ಗುಲ್ಬರ್ಗಾದ ಶ್ರೀ ಶಿವಶರಣಪ್ಪ ಸೀರಿ ಇವರಿಗೆ,

2010 ರಲ್ಲಿ ರಾಣೆಬೆನ್ನೂರಿನ ಶ್ರೀ ವೀರಣ್ಣ ಅಂಗಡಿ ಇವರಿಗೆ,

2011 ರಲ್ಲಿ ದಾವಣಗೆರೆ ಕೈಗಾರಿಕೋದ್ಯಮಿ ಶ್ರೀ ಅಥಣಿ ವೀರಣ್ಣ ಇವರಿಗೆ,

2012 ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶ್ರೀ ಕಳಕಪ್ಪ ಬಂಡಿ ಗಜೇಂದ್ರಗಡ ಇವರಿಗೆ,

2013 ರಲ್ಲಿ ಮಲ್ಲಮ್ಮನ ಬೆಳವಡಿಯ ಡಾ. ಆರ್.ಬಿ. ಪಾಟೀಲ ಇವರಿಗೆ,

2014 ರಲ್ಲಿ ಖಣದಾಳ ಗುಲಬರ್ಗಾದ ಶ್ರೀ ಬಸವರಾಜ ದಿಗ್ಗಾಂವಿ ಇವರಿಗೆ,

2015 ರಲ್ಲಿ ಬಸವಕಲ್ಯಾಣದ ಶ್ರೀ ಸುನೀಲ ಪಾಟೀಲ ಇವರಿಗೆ,

2016 ರಲ್ಲಿ ಲಕ್ಷೇಶ್ವರದ ಮಾಜಿ ಶಾಸಕ ಶ್ರೀ ಜಿ.ಎಂ. ಮಹಾಂತಶೆಟ್ಟರ ಇವರಿಗೆ

2017 ರಲ್ಲಿ ಹಾಸನ ಜಿಲ್ಲೆ ಅರಸೀಕೆರೆಯ ಶ್ರೀ ಕೆ.ವಿ. ನಿರ್ವಾಣಸ್ವಾಮಿ ಇವರಿಗೆ

2018 ರಲ್ಲಿ ಹಾವೇರಿಯ ನಿವೃತ್ತ ಆದರ್ಶ ಶಿಕ್ಷಕ ಶತಾಯುಷಿ ಶ್ರೀ ಎಂ. ಬಿ. ಹಿರೇಮಠ, ಇವರಿಗೆ

2019 ರಲ್ಲಿ ಕೊಡಿಯಾಲ ಹೊಸಪೇಟೆಯ ಶ್ರೀ ಜುಂಜಪ್ಪ ಹೆಗ್ಗಪ್ಪನವರ ಇವರಿಗೆ

2021 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ. ವಾಯ್, ರಾಘವೇಂದ್ರರವರಿಗೆ ಪ್ರದಾನ ಮಾಡಲಾಗಿದೆ.

ರಂಭಾಪುರಿ ಯುವ ಸಿರಿ ಪ್ರಶಸ್ತಿ

2007 ರಲ್ಲಿ ದಾವಣಗೆರೆ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿಗಳಾದ ಶ್ರೀ ಕೆ.ಎಂ. ಸುರೇಶರವರಿಗೆ

2008 ರಲ್ಲಿ ಬಳ್ಳಾರಿಯ ಶ್ರೀ ಜಿ. ಮಹಾಲಿಂಗಯ್ಯ (ರಾಜಣ್ಣ) ಇವರಿಗೆ,

2009 ರಲ್ಲಿ ಹುಬ್ಬಳ್ಳಿಯ ಶ್ರೀ ಪ್ರಕಾಶ ಬೆಂಡಿಗೇರಿ ಇವರಿಗೆ, 2010 ರಲ್ಲಿ ದಾವಣಗೆರೆಯ ಶ್ರೀ ದೇವರಮನೆ ಶಿವಕುಮಾರ್ ಇವರಿಗೆ,

2011 ರಲ್ಲಿ ಬೆಂಗಳೂರು ಸ್ಪರ್ಶ ಆಸ್ಪತ್ರೆಯ ಡಾ. ಶರಣ್ ಪಾಟೀಲ ಇವರಿಗೆ,

2012 ರಲ್ಲಿ ಚಿಕ್ಕಮಗಳೂರು ಜಿಲ್ಲೆ ಬಾಸಾಪುರದ ಶ್ರೀ ಬಿ.ಎಂ. ಬೋಜೇಗೌಡರಿಗೆ,

2013 ರಲ್ಲಿ ಜೇವರ್ಗಿ ತಾಲೂಕ ನಾಗರಹಳ್ಳಿಯ ಶ್ರೀ ದಯಾನಂದ ಹಿರೇಮಠ ಇವರಿಗೆ,

2014 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ

ಶ್ರೀ ಬಿ.ಎಸ್. ವಾಗೀಶ ಪ್ರಸಾದ್ ಇವರಿಗೆ,

2015 ರಲ್ಲಿ ಹುಬ್ಬಳ್ಳಿ ಧಾರವಾಡ ಮಹಾಪೌರ ಶ್ರೀ ಶಿವು ಹಿರೇಮಠ ಇವರಿಗೆ

2016 ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗದ ಶ್ರೀ ರಾಜೇಶ ಬೀಳಗಿ ಇವರಿಗೆ

2017 ರಲ್ಲಿ ಯಗಟಿ ಜಿಲ್ಲಾ ಪಂಚಾಯತ ಸದಸ್ಯ ಶ್ರೀ ಶರತ್‌ ಕೃಷ್ಣಮೂರ್ತಿ ಇವರಿಗೆ

2018 ರಲ್ಲಿ ಹುಬ್ಬಳ್ಳಿಯ ಶ್ರೀ ವಿಶ್ವನಾಥ ಹಿರೇಗೌಡರ ಇವರಿಗೆ

2019 ರಲ್ಲಿ ದಾವಣಗೆರೆಯ ಶ್ರೀ ಬಿ. ಅರುಣ ಇವರಿಗೆ ಪ್ರದಾನ ಮಾಡಲಾಗಿದೆ.

2021 ರಲ್ಲಿ ಶಿವಮೊಗ್ಗ ಜಿಲ್ಲೆ ಕೊಣಂದೂರಿನ ಗಣ್ಯ ವ್ಯಾಪಾರಸ್ಥರಾದ ಶ್ರೀ ಕೆ. ಆರ್. ಪ್ರಕಾಶರವರಿಗೆ ಪದಾನ ಮಾಡಲಾಗಿದೆ.

ಸಾಧನ ಸಿರಿ ಪ್ರಶಸ್ತಿ

2014ರಲ್ಲಿ ಮೈಸೂರು ಅರಮನೆ ಜಪದಕಟ್ಟೆ ಮಠದ ಶ್ರೀ ಷ||ಬ್ರ|| ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಗೆ

2015ರಲ್ಲಿ ಭದ್ರಾವತಿ ತಾಲೂಕ ಬಿಳಿಕಿ ಹಿರೇಮಠದ ಶ್ರೀ ಷ||ಬ್ರ|| ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ.

2016 ರಲ್ಲಿ ತುಮಕೂರು ಜಿಲ್ಲೆ ಸಿದ್ಧರಬೆಟ್ಟದ ಶ್ರೀ ಷ||ಬ್ರ|| ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ

2017 ರಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಸಾಹಸಿ ಕ್ರೀಡಾಪಟು ಶ್ರೀ ಈರಣ್ಣ ಕುಂದರಗಿ ಇವರಿಗೆ 2018 ರಲ್ಲಿ ರೌಡಕುಂದ ಹಿರೇಮಠದ ಶ್ರೀ ಷ|| ಬ್ರ|| ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಇವರಿಗೆ 2019 ರಲ್ಲಿ ದೊಡ್ಡಬಾತಿಯ ತಪೋವನ ಆಸ್ಪತ್ರೆಯ ಚೇರಮನ್ ಡಾ. ಶಶಿಕುಮಾರ ಮೆಹರವಾಡೆ ಇವರಿಗೆ ಪದಾನ ಮಾಡಲಾಗಿದೆ.

2021 ರಲ್ಲಿ ಶಿವಮೊಗ್ಗ ಜಿಲ್ಲೆ ದುಗ್ಗಿ-ಕಡೇನಂದಿಹಳ್ಳಿಯ ಶ್ರೀ ಷ|| ಬ್ರ|| ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳಿಗೆ ಪ್ರದಾನ ಮಾಡಲಾಗಿದೆ.

Phone

082662 50424

VISIT

6 am to 8 pm

Email

info@rambhapuripeetha.org

Address

Rambhapuri Mutt Road, Narasimharajapura, Taluka, Balehonnur, Karnataka 577112